ಮಗು ಬೆಳೆಯಲು ತಾಯಿ ಸಂಸ್ಕಾರ, ಪ್ರೀತಿ ಅಗತ್ಯಃ ಗುತ್ತೇದಾರ
ಉಡಿ ತುಂಬುವ ಕಾರ್ಯದಿಂದ ಮಹಿಳೆಯರಲ್ಲಿ ಸಂಪನ್ನ ಭಾವ
ಯಾದಗಿರಿಃ ಇಡಿ ವಿಶ್ವದಲ್ಲಿ ಹೆತ್ತ ತಾಯಿಗೆ ಪೂಜ್ಯನೀಯ ಸ್ಥಾನಮಾನ ಗೌರವ ನೀಡಿರುವ ಮೊದಲ ದೇಶ ಭಾರತ ಎಂದು ಇತಿಹಾಸ ಉಪನ್ಯಾಸಕಿ ಹಣಮಂತಿ ಗುತ್ತೇದಾರ ಹೇಳಿದರು.
ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಹೀರೆಮಠದ ಮಹಾಂತೇಶ್ವರ ಜಾತ್ರಾ ಮಹೊತ್ಸವದ ಆಂಗವಾಗಿ ಆಯೋಜಿಸಿದ್ದ ಮುತೈದೆಯರಿಗೆ ಉಡಿ ತುಂಬವ ಕಾರ್ಯಕ್ರಮ ಮತ್ತು ಮಾತೃದೇವೊಭವ ಹಾಗೂ ಜನಪದ ಸಾಹಿತ್ಯದಲ್ಲಿ ತಾಯಿತನ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ನಾಗರಿಕರ ಅಗತ್ಯವಿದೆ. ಅದರಂತೆ ಮಗು ಬೆಳೆದು ಉತ್ತಮ ನಾಗರಿಕನಾಗಬೇಕಾದರೆ ತಾಯಿ ಪಾತ್ರ ಮಹತ್ವವಿದೆ. ತಾಯಿ ಮಗುವಿಗೆ ನೀಡುವ ಸಂಸ್ಕಾರ ಬಹುಮುಖ್ಯವಿದೆ.
ಸದೃಢ ಸಮಾಜ ನಿರ್ಮಾಣವಾಗಬೇಕಾದರೆ, ಮಾನವೀಯ ಮೌಲ್ಯಗಳು, ನೈತಿಕತೆ, ನೀತಿಬೋಧನೆ, ಬಾಲ್ಯದಿಂದಲೇ ಸಂಸ್ಕಾರ ಕಲಿಕೆ ಅಗತ್ಯವಾಗಿ ಬೇಕು. ಅದು ತಾಯಿಯಿಂದ ಮಾತ್ರ ಸಾಧ್ಯ ಹೀಗಾಗಿ ತಾಯಿಯೇ ಮೊದಲು ಗುರು ಎನಿಸುವುದು ಸತ್ಯ.
ಕನ್ನಡ ಉಪನ್ಯಾಸಕಿ ನಿರ್ಮಲ ತುಂಬಗಿ ಜಾನಪದ ಸಾಹಿತ್ಯದಲ್ಲಿ ತಾಯ್ತನ ವಿಷಯ ಕುರಿತು ಮಾತನಾಡಿ, ಗಂಡು ಹೆಣ್ಣಿಗೆ ಸಂಸ್ಕಾರ ಕೊಡುವಳು ತಾಯಿ. ಹಿಡಿ ಸಂಸಾರವನ್ನು ನೆಮ್ಮದಿಯಿಂದ ನಡೆಸಿಕೊಂಡು ಹೊಗುವ ಹೊಣೆಗಾರಿಕೆ ತಾಯಿಯದ್ದಾಗಿರುತ್ತೆ. ಹೆಣ್ಣು ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆಯ ಜ್ಯೋತಿ ಬೆಳಗುತ್ತಾಳೆ.
ಮಗಳು ಗಂಡನ ಮನೆಗೆ ಹೋಗುವಾಗ ನೀತಿ ನಿಯಮ ಸಂಸ್ಕಾರ ಸಂಸ್ಕøತಿ ಸಂಪ್ರದಾಯ ತಾಯಿ ತನ್ನ ಜಾನಪಾದ ಹಾಡಿನ ಮೂಲಕ ಹಾಡಿ ಕಣ್ಣೀರು ಹಾಕಿ ಕಳುಹಿಸುವ ಕಾರ್ಯ ಭಾವನೆಯಲ್ಲಿರುವ ದುಖಃ, ಪ್ರೀತಿ ಅಗಲಿಕೆಯ ಸಾಂತ್ವನ ನಡೆಯುವ ಹೋಗುವ ಮನೆಯ ಕೀರ್ತಿಯನ್ನು ಹೆಚ್ಚಿಸುವ ಧೈರ್ಯವನ್ನು ತುಂಬು ಶಕ್ತಿ ಆ ಜನಪದದಲ್ಲಿದೆ ಎಂದರು.
ಇದೇ ಸಂದರ್ಭದಲ್ಲಿ ಮುತೈದರಿಗೆ ಉಡಿ ತುಂಬುವ ಶುಭ ಕಾರ್ಯ ಜರುಗಿತು. ವೇದಿಕೆ ಮೇಲೆ ವೀರ ಮಹಾಂತ ಶಿವಾಚಾರ್ಯರು, ಚಿಕ್ಕಮಠದ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು ಉಪಸ್ಥಿತರಿದ್ದರು.