ಆ ರಾಶಿಗೆ ಹೊಸ ವ್ಯವಹಾರ ಮುಂದೂಡಿಕೆ ಲೇಸು ನಿಮಗೆ
ಶ್ರೀ ಗಣಪತಿ ದೇವರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಪುಷ್ಯ
ಋತು : ವರ್ಷ
ರಾಹುಕಾಲ 12:29 – 14:02
ಗುಳಿಕ ಕಾಲ 07:50 – 09:23
ಸೂರ್ಯೋದಯ 06:16:51
ಸೂರ್ಯಾಸ್ತ 18:41:03
ತಿಥಿ : ತ್ರಯೋದಶಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಬಂದಿರುವ ಅವಕಾಶಗಳನ್ನು ಲಘುವಾಗಿ ಪರಿಗಣಿಸಬೇಡಿ ಆದಷ್ಟು ವಿವೇಚನೆಯಿಂದ ಕಾರ್ಯ ಪ್ರವೃತ್ತರಾಗುವುದು ಒಳಿತು. ಮಾನಸಿಕ ಖಿನ್ನತೆ ಆವರಿಸಬಹುದು ಬರುವ ಒತ್ತಡಗಳನ್ನು ಎದುರಿಸಿ ಸಮತೋಲನ ಕಾಪಾಡಿಕೊಳ್ಳಿ. ಆರ್ಥಿಕ ಉಳಿತಾಯಕ್ಕೆ ಆದಷ್ಟು ಆದ್ಯತೆ ನೀಡುವುದು ಒಳಿತು. ಅತಿಯಾದ ದುಂದುವೆಚ್ಚ ದಿಂದ ಮಾರಕವಾಗಬಹುದು. ದಾಖಲೆಗಳ ಬಗ್ಗೆ ನಿರ್ಲಕ್ಷ ಬೇಡ. ಪತಿ-ಪತ್ನಿಯರು ಒಬ್ಬರನ್ನೊಬ್ಬರು ಅರಿತು ಬಾಳುವುದು ಜೀವನ ಸುಖಾಸುಮ್ಮನೆ ಕದನ ಕಲಹ ದಂತಹ ವಿಚಾರಕ್ಕೆ ಕೈಹಾಕಬೇಡಿ. ನಿಮ್ಮ ಕೌಟುಂಬಿಕ ವಿಷಯಗಳನ್ನು ಗೌಪ್ಯತೆ ಯಿಂದ ಕಾಪಾಡಿಕೊಳ್ಳಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ವೃಷಭ ರಾಶಿ
ಸಾರ್ವಜನಿಕ ಜೀವನದಲ್ಲಿ ಕೆಲವು ಅಪಹಾಸ್ಯ ಅಥವಾ ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗುವ ಪ್ರಸಂಗಗಳು ನಡೆಯಬಹುದು ಎಚ್ಚರವಿರಲಿ. ಪ್ರೀತಿಪಾತ್ರರು ನಿಮ್ಮ ಬರುವಿಕೆಯನ್ನು ಕಾಯುತ್ತಿರುತ್ತಾರೆ ಮತ್ತು ನಿಮ್ಮ ಉಪಸ್ಥಿತಿಯಿಂದ ಅವರಲ್ಲಿ ಪ್ರೌಡಿಮೆ ಗೌರವ ಹೆಚ್ಚಲಿದೆ. ಗಣ್ಯ ವ್ಯಕ್ತಿಗಳ ಜೊತೆಗೆ ಮಾತನಾಡುವಾಗ ಆದಷ್ಟು ತಾಳ್ಮೆ ಇರಲಿ ಹಾಗೂ ಮಾತುಗಳನ್ನು ಕೇಳುವ ಮನಸ್ಥಿತಿ ಅವಶ್ಯಕ. ಉದ್ಯೋಗದ ನಿಮಿತ್ತ ಅನಿರೀಕ್ಷಿತ ಪ್ರಯಾಣ ಎದುರಾಗಲಿದೆ ಇದು ನಿಮ್ಮ ಒತ್ತಡ ಹೆಚ್ಚು ಮಾಡಬಹುದು. ಇಂದು ಪ್ರೇಮಾಂಕುರವಾಗುವ ಲಕ್ಷಣಗಳು ಗೋಚರವಾಗಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಿಥುನ ರಾಶಿ
ನಿಮ್ಮ ಕಾರ್ಯಕಲಾಪಗಳಲ್ಲಿ ಹಿರಿಯರಿಂದ ಅಪಶ್ರುತಿ ಕೇಳುವ ಸಾಧ್ಯತೆ ಕಂಡುಬರುತ್ತದೆ. ಈ ದಿನ ಏಕಾಗ್ರತೆಗೆ ಭಂಗತರುವ ಪ್ರಸಂಗಗಳು ನಡೆಯಬಹುದು ಎಚ್ಚರವಿರಲಿ. ಪಾವತಿ ಗಳಲ್ಲಿ ವಿಳಂಬದ ಧೋರಣೆ ಒಳ್ಳೆಯ ಕ್ರಮವಲ್ಲ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಪಡಿಸಲು ಪ್ರಯತ್ನಿಸಿ. ಇಂದು ಅಪರೂಪಕ್ಕೆ ಸಿಗುವ ಅತಿಥಿಗಳಿಂದ ನಿಮ್ಮ ಸಂಜೆಯ ಕೂಟಗಳು ಬಲು ರಂಜನೆ ಇಂದ ನಡೆಯಲಿದೆ. ಧಾರ್ಮಿಕ ವಿಧಿ ವಿಧಾನಗಳಿಗೆ ಆದ್ಯತೆ ನೀಡುವ ಸಾಧ್ಯತೆ ಕಂಡುಬರುತ್ತದೆ. ಕೆಲಸದ ಹೆಚ್ಚಿನ ಒತ್ತಡಗಳಿಂದ ವಿಶ್ರಾಂತಿಗೆ ಸಮಯ ಸಿಗದಿರಬಹುದು. ಬಾಕಿ ಕೆಲಸಗಳನ್ನು ಪೂರ್ಣಪ್ರಮಾಣದಲ್ಲಿ ಮುಗಿಸುವ ಇರಾದೆ ಇರಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಈ ದಿನ ಅದ್ಭುತವಾದ ಶುಭ ಸುದ್ದಿಯನ್ನು ಆಲಿಸುವಂತಹ ಸಾಧ್ಯತೆಗಳು ಕಂಡು ಬರಲಿದೆ, ಇದು ನಿಮ್ಮ ವಿಚಾರಗಳು ಮತ್ತು ಯೋಜನೆಗಳಿಗೆ ಅತ್ಯಂತ ಅವಶ್ಯಕವಾಗಿ ಕಾಣಸಿಗುವುದು. ಆರ್ಥಿಕ ವ್ಯವಹಾರಗಳು ಮುನ್ನಡೆಯಿಂದ ಕೂಡಿದ್ದು ವ್ಯವಸ್ಥಿತ ಕಾರ್ಯ ತಂತ್ರಗಳಿಂದ ಉತ್ತಮ ಯೋಜನೆಗಳನ್ನು ಪ್ರಾಪ್ತಿ ಮಾಡಿಕೊಳ್ಳುವಿರಿ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡುಬರುತ್ತದೆ ಆದಷ್ಟು ಮುತುವರ್ಜಿ ವಹಿಸುವುದು ಕ್ಷೇಮ. ಚುಟುಕು ಪ್ರವಾಸದಂತಹ ಚಟುವಟಿಕೆಗಳಿಗೆ ನೀವು ಆದ್ಯತೆ ನೀಡುವಿರಿ. ನಿಮ್ಮ ಕನಸಿನ ಗುರಿ ಈಡೇರಿಸುವ ಸುಸಂದರ್ಭ ಒದಗಿಬರಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ನಿಮಗೆ ಅನುಕೂಲಕರವಾಗುವ ಕೆಲಸಗಳನ್ನು ಮಾಡಲು ತಯಾರಿ ನಡೆಸುತ್ತೀರಿ. ವಸ್ತುಗಳ ಕ್ರಯವಿಕ್ರಯಗಳಲ್ಲಿ ಹೆಚ್ಚಿನ ಲಾಭಾಂಶ ಕಂಡುಬರಲಿದೆ. ಆಭರಣಗಳಲ್ಲಿ ಹೂಡಿಕೆ ಮಾಡುವುದರಿಂದ ಸಮೃದ್ಧಿ ಕಾಣಬಹುದಾಗಿದೆ. ಕುಟುಂಬದ ವಿಚಾರಗಳಿಗೆ ಆದಷ್ಟು ಮನ್ನಣೆ ನೀಡಿ, ನಿಮ್ಮದೇ ವಿತಂಡವಾದ ಗಳಿಂದ ಇನ್ನೊಬ್ಬರ ಮನ ನೋಯಿಸುವುದು ಒಳ್ಳೆಯದಲ್ಲ. ಜೀವನದ ಕಷ್ಟ-ನಷ್ಟಗಳನ್ನು ಸಂಗಾತಿಯೊಂದಿಗೆ ಹಂಚಿಕೊಂಡು ಸಹಕಾರದಿಂದ ಬಾಳ್ವೆ ಮಾಡುವ ತಯಾರಿ ನಡೆಸಿ. ಆರ್ಥಿಕವಾಗಿ ಉತ್ತಮ ಮಟ್ಟದ ವ್ಯವಸ್ಥೆ ಕಂಡುಬರಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಬದಲಾವಣೆಗೆ ಒಗ್ಗಿಕೊಳ್ಳುವ ಮನಸ್ಥಿತಿ ಕಾಣಬಹುದು. ನಿಮ್ಮ ವಿಚಾರಗಳು ಹಾಗೂ ವ್ಯವಸ್ಥಿತ ಕಾರ್ಯಗಳಿಂದ ಸಂತೋಷ ಪ್ರಾಪ್ತಿಯಾಗಲಿದೆ. ಪ್ರಿಯತಮೆಯಿಂದ ಉಡುಗೊರೆಗಳನ್ನು ಪಡೆಯುವ ಸ್ಥಿತಿ ಕಂಡು ಬರಬಹುದು. ಈ ದಿನ ನಿಮ್ಮ ಸಮಯ ಪ್ರೇಮ ಮಯವಾಗಿ ಪರಿವರ್ತನೆಯಾಗಲಿದೆ. ಹೊಸ ವ್ಯವಹಾರಗಳನ್ನು ಮತ್ತು ನವೀನ ಕಾರ್ಯಚಟುವಟಿಕೆಗೆ ಹೂಡುವ ಬಂಡವಾಳಗಳನ್ನು ಮುಂದೂಡುವುದು ಒಳಿತು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸೂಚನೆಗಳು ಕಂಡು ಬರುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ನಿಮ್ಮ ಕಣ್ಸನ್ನೆಯ ನೋಟದಿಂದ ಸಂಗಾತಿಯನ್ನು ಸಂತೋಷಪಡಿಸುತ್ತೀರಿ. ಇಂದು ಪ್ರೇಮ ಪರವಾಗಿ ಜೀವಿಸಲು ಸಿದ್ಧರಾಗಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ತುಲಾ ರಾಶಿ
ಉದ್ಯೋಗದಲ್ಲಿ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಹೊಣೆಗಾರಿಕೆ ನಿಮ್ಮದಾಗಿದೆ. ಹೂಡಿಕೆಗಳು ಲಾಭಾಂಶದಿಂದ ಕೂಡಿರುತ್ತದೆ. ಮಧ್ಯವರ್ತಿ ಕೆಲಸಗಾರರಲ್ಲಿ ಉತ್ತಮ ಆದಾಯ ನಿರೀಕ್ಷಿಸಬಹುದಾಗಿದೆ. ಮಕ್ಕಳಿಂದ ಸಂತಸದ ವಾತಾವರಣ ಕಂಡುಬರುತ್ತದೆ. ಪ್ರೇಮಿಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯ ತಲೆದೋರಬಹುದು ಆದಷ್ಟು ಲಘುವಾಗಿ ಮಾತನಾಡಿ ಪೇಚಿಗೆ ಸಿಲುಕಬೇಡಿ. ಸೋಲುಗಳು ನಿಮ್ಮ ಜೀವನದ ಬಹುದೊಡ್ಡ ಪಾಠ ಕಲಿಸಿಕೊಡುತ್ತದೆ ಆದಷ್ಟು ದರ್ಪ ಸ್ವಭಾವವನ್ನು ತ್ಯಜಿಸಿ. ಚರ್ಚಾ ಕೋಟಗಳಲ್ಲಿ ವಾದ-ವಿವಾದಗಳು ವಿವಾದ ಸ್ವರೂಪ ಪಡೆಯಬಹುದು ಎಚ್ಚರವಹಿಸಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಸಂಗಾತಿಯ ಮನೋಭಿಲಾಷೆಯನ್ನು ಪೂರ್ಣಗೊಳಿಸುವಿರಿ, ಅವರ ಕಠಿಣ ಸ್ವಭಾವವು ನಿಮ್ಮ ಒಳಿತಿಗಾಗಿ ಇರಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಕೆಲವು ವರ್ತನೆಗಳು ಇರುಸುಮುರುಸು ತಂದುಕೊಡಬಹುದು ಎಚ್ಚರವಿರಲಿ. ಸಹವರ್ತಿಗಳಿಂದ ಕಿರಿಕಿರಿ ಬರಬಹುದು ಆದಷ್ಟು ಈ ದಿನ ತಾಳ್ಮೆಯಿಂದ ಮಾತನಾಡಿ. ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಿ. ಆತುರದಿಂದ ಮಾಡಿದ ಹೂಡಿಕೆಗಳು ನಷ್ಟ ತರಬಹುದಾದ ಸಾಧ್ಯತೆ ಇದೆ. ಸಮಗ್ರ ದೃಷ್ಟಿಕೋನದಿಂದ ಬಂಡವಾಳ ಹೂಡುವುದು ಸೂಕ್ತ. ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ಜಯ ಸಂಪಾದನೆ ಆಗಲಿದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಪರೋಪಕಾರದ ಗುಣಗಳಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಿರಿ. ಆತುರದ ಹೂಡಿಕೆಗಳು ನಷ್ಟದ ಹಾದಿ ಹಿಡಿಯಬಹುದು. ತ್ವರಿತ ಹಣಗಳಿಕೆಯ ಮಾರ್ಗಗಳು ಕಾಣಸಿಗುತ್ತದೆ, ಕೂಲಂಕಶವಾಗಿ ನೀವು ನಡೆಯುವ ದಾರಿಯನ್ನು ಯೋಚನೆ ಮಾಡಿ. ಇಂದು ಕೆಲವರು ಸುಖಾಸುಮ್ಮನೆ ಆಕ್ರಮಣಕಾರಿಯಾದ ವರ್ತನೆ ತೋರುವರು ಆದಷ್ಟು ತಾಳ್ಮೆಯಿಂದ ಮುಂದಿನ ದಾರಿ ನೋಡಿ. ಯೋಜನೆಗಳಲ್ಲಿ ಇತರರ ಹಸ್ತಕ್ಷೇಪದಿಂದ ಅಡ್ಡಿ-ಆತಂಕಗಳು ಸೃಷ್ಟಿಯಾಗಲಿದೆ, ನಿಮ್ಮ ಬುದ್ಧಿವಂತಿಕೆಗೆ ಕೆಲಸ ನೀಡುವುದು ಉತ್ತಮ. ಪಾಲುದಾರರ ವ್ಯವಹಾರಗಳಲ್ಲಿ ಅನುಮಾನಸ್ಪದ ವಾತಾವರಣ ಉಂಟಾಗಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಕರ ರಾಶಿ
ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಕಂಡುಬರಲಿದೆ ಇದನ್ನು ಆದಷ್ಟು ನೀವು ಪರಿಹರಿಸಲು ಮುಂದಾಗುವುದು ಒಳ್ಳೆಯದು. ನಿಮ್ಮ ಕೆಲವು ಆಲೋಚನೆಗಳಿಗೆ ಉದ್ಯೋಗದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತದೆ ಹಾಗೂ ಪ್ರಭಾವಶಾಲಿ ವ್ಯಕ್ತಿಗಳಾಗಿ ಹೊರಹೊಮ್ಮುವಿರಿ. ಈ ದಿನ ಹಲವರೊಡನೆ ಮಾತುಕತೆ ಮತ್ತು ಪರಸ್ಪರ ಯೋಜನೆಗಳನ್ನು ವಿನಿಮಯ ಮಾಡಿಕೊಳ್ಳುವಿರಿ. ಹೊಸ ಸ್ನೇಹಿತರ ಪರಿಚಯ ಆಗಲಿದೆ. ಒಂದು ಸಮೂಹವನ್ನು ಯಶಸ್ವಿಯಾಗಿ ಮುನ್ನಡೆಸುವ ಚಾತುರ್ಯ ನಿಮ್ಮಲ್ಲಿದೆ. ಮನರಂಜನೆಗಾಗಿ ಅವಕಾಶಗಳು ದೊರೆಯುವುದು ಕಂಡುಬರುತ್ತದೆ, ಆದಷ್ಟು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ. ದೈಹಿಕ ಪರಿಶ್ರಮದ ಕಾರ್ಯಗಳು ನಿಮ್ಮಲ್ಲಿ ಆಯಾಸ ತರಲಿದೆ. ಆರೋಗ್ಯದ ಬಗ್ಗೆ ಗಮನವಹಿಸಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಕುಂಭ ರಾಶಿ
ಆತ್ಮಬಲ ಮತ್ತು ಪ್ರಚಂಡ ಉತ್ಸಾಹಗಳು ಈ ದಿನ ನಿಮಗೆ ಅನುಕೂಲಕರವಾದ ಶುಭ ಫಲಿತಾಂಶ ತರಲಿದೆ. ಮನೆಯ ಕಷ್ಟನಷ್ಟಗಳು ಬಗೆಹರಿಯುವ ಸಾಧ್ಯತೆ ಕಾಣಬಹುದು. ಕುಟುಂಬ ಸದಸ್ಯರಲ್ಲಿ ಹೊಂದಾಣಿಕೆ ಮೂಡಲಿದೆ. ಸಂಗಾತಿಯೊಡನೆ ವಿಹಾರಕ್ಕೆ ಹಾಗೂ ಭೋಜನಕೂಟ ಗಳಿಗೆ ಹೋಗುವ ಸಾಧ್ಯತೆ ಕಾಣಬಹುದು. ಪ್ರಣಯದ ಆಸಕ್ತಿ ನಿಮ್ಮಲ್ಲಿ ಹೆಚ್ಚಾಗಿ ಕಂಡುಬರಲಿದೆ. ಉತ್ತಮ ವ್ಯಕ್ತಿಗಳು ಹಾಗೂ ನುರಿತ ವ್ಯವಹಾರಸ್ಥರ ಸಂಘ ಸಹವಾಸದಿಂದ ಭವಿಷ್ಯದ ಕಲ್ಪನೆಗೆ ಮೂರ್ತಸ್ವರೂಪ ದೊರೆಯಲಿದೆ. ಪ್ರಯಾಣದಿಂದ ಲಾಭಗಳು ಕಂಡುಬರಲಿದೆ. ಯೋಜನೆ ವಿಸ್ತರಣೆಗೆ ಆದ್ಯತೆ ದೊರೆಯಲಿದೆ. ಸಂಗಾತಿಯ ನೋಟ ಅದ್ಭುತವಾಗಿ ನಿಮ್ಮ ಮನಸ್ಸಿನಲ್ಲಿ ಮೂಡಲಿದೆ. ಸಂತೋಷ ಮತ್ತು ಆಶ್ಚರ್ಯ ಪಡುವ ವಿಷಯ ಇಂದು ಕೇಳುವ ಸಾಧ್ಯತೆ ಇರಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮೀನ ರಾಶಿ
ಯೋಜನೆ ಮತ್ತು ಕೆಲಸಗಳಲ್ಲಿ ವೈರಾಗ್ಯ ಮೂಡಬಹುದು. ಕೆಲವು ಹೊಟ್ಟೆಕಿಚ್ಚಿನ ಜನಗಳಿಂದ ಒತ್ತಡದ ಪರಿಸ್ಥಿತಿ ಉದ್ಭವವಾಗಬಹುದು. ವಿನಾಕಾರಣ ನಿಮ್ಮ ವಿಚಾರಗಳಿಗೆ ಅಪಪ್ರಚಾರಗಳು ಬರುವ ಸಾಧ್ಯತೆ ಕಂಡುಬರುತ್ತದೆ. ಬಾಕಿ ಇರುವ ಹಣಕಾಸಿನ ವಸೂಲಿಗಾಗಿ ಹೆಚ್ಚಿನ ಶ್ರಮ ಆಗತ್ಯವಿದೆ. ಹೊಸ ಯೋಜನೆ ಪಡೆಯಲು ಪರಿಶ್ರಮ ಅತಿ ಮುಖ್ಯವಾಗಿದೆ. ಕುಟುಂಬಸ್ಥರು ಸಕಾಲಕ್ಕೆ ನಿಮ್ಮ ನೆರವಿಗೆ ಬರಲಿದ್ದಾರೆ. ಹೂಡಿಕೆಗಳಲ್ಲಿ ಆದಷ್ಟು ಎಚ್ಚರಿಕೆಯ ನಡೆ ಅಗತ್ಯವಿದೆ. ಸಂಗಾತಿಯೊಡನೆ ಆಹ್ಲಾದಕರ ಕ್ಷಣಗಳನ್ನು ಕಳೆಯುವಿರಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262