ವಿನಯ ವಿಶೇಷ

ದುಷ್ಟರ ಸಹವಾಸದಿಂದ ದೂರವಿರಲಿ ಆ ರಾಶಿಯವರು..ಉಳಿದ ರಾಶಿ ಹೇಗೆ.?

ಶ್ರೀ ಮಾರುತೇಶ್ವರ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ
ನಕ್ಷತ್ರ : ಪೂರ್ವಭಾದ್ರಪದ
ಋತು : ವರ್ಷ
ರಾಹುಕಾಲ 09:12 – 10:44
ಗುಳಿಕ ಕಾಲ 06:10 – 07:41
ಸೂರ್ಯೋದಯ 06:09:45
ಸೂರ್ಯಾಸ್ತ 18:20:41
ತಿಥಿ : ಹುಣ್ಣಿಮೆ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಈ ದಿನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರೂಪಿಸಿಕೊಂಡು ಸಾಧನೆ ಮಾಡುವಿರಿ. ಕೆಲವರು ನಿಮ್ಮ ಸಮಯ ಹಾಳು ಮಾಡಲು ಪ್ರಯತ್ನ ಮಾಡಬಹುದು ಆದಷ್ಟು ಪ್ರಯತ್ನವನ್ನು ಬಿಡಬೇಡಿ. ಆರ್ಥಿಕ ಚೇತರಿಕೆಗೆ ಇನ್ನು ಸ್ವಲ್ಪ ಸಮಯ ಕಾಯಬೇಕಾಗಿದೆ. ಆಸ್ತಿ ಹಣಕಾಸಿನ ವ್ಯಾಜ್ಯಗಳು ಮುಂದೂಡುವ ಸಾಧ್ಯತೆ ಕಂಡುಬರುತ್ತದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಭಕ್ತಿ ಮತ್ತು ಶಕ್ತಿಗಳ ರೂಪ ಮನಸ್ಸಿನ ಅನುಭವಕ್ಕೆ ಆಗಲಿದೆ. ನಿಮ್ಮನ್ನು ನಿಮ್ಮ ವಿಚಾರಗಳಲ್ಲಿ ಸನ್ನಡತೆ ತರಿಸಲು ಸಂಗಾತಿಯು ಪ್ರೇರಕ ಶಕ್ತಿಯಾಗಿರುವರು. ದೈವ ದರ್ಶನದ ಭಾಗ್ಯ ನಿಮ್ಮದಾಗಲಿದೆ. ನಿಮ್ಮ ಬೆಳವಣಿಗೆಯಿಂದ ಪ್ರಶಂಸೆ ಹೆಚ್ಚಾಗಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಆತ್ಮೀಯರು ನಿಮಗೆ ನೋವು ತರಬಹುದಾಗಿದೆ. ನಿಮ್ಮ ವಿಚಾರಗಳನ್ನು ಬೇರೆಯ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಉದ್ಯೋಗದಲ್ಲಿ ಮುಜುಗರ ತರುವಂಥ ಪ್ರಸಂಗಗಳು ನಡೆಯಬಹುದು. ಆದಷ್ಟು ಈ ದಿನ ವಿವೇಚನೆಯಿಂದ ವರ್ತಿಸುವುದು ಒಳಿತು. ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ ಲಾಭದಾಯಕ ದಿನವಿದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಆತುರದ ನಿರ್ಣಯಗಳಿಂದ ಸಮಸ್ಯೆಗಳಲ್ಲಿ ಸಿಲುಕುವಿರಿ. ನಿಮ್ಮ ನಿರ್ಧಾರಗಳನ್ನು ಆದಷ್ಟು ಪರಿಶೀಲಿಸಿ ಮುಂದುವರಿಯುವುದು ಸೂಕ್ತ. ಹಿರಿಯರ ಉದಾತ್ತ ಗುಣಗಳನ್ನು ಪಾಲಿಸುವುದು ಒಳಿತು. ಕೆಲಸದಲ್ಲಿ ತಪ್ಪಾಗದಂತೆ ಕಾರ್ಯವನ್ನು ಮಾಡಿರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ದುಷ್ಟರ ಸಹವಾಸದಿಂದ ನಿಮ್ಮ ಹೆಸರಿಗೆ ಕಳಂಕಬರಬಹುದು ಎಚ್ಚರವಿರಲಿ, ಆದಷ್ಟು ಸ್ನೇಹವನ್ನು ಅಳೆದು-ತೂಗಿ ಮಾಡುವುದು ಒಳ್ಳೆಯದು. ಆರ್ಥಿಕ ವ್ಯವಹಾರಗಳಲ್ಲಿ ಜಾಗ್ರತೆಯಿಂದ ವರ್ತಿಸಿ. ಕುಲದೇವತಾರಾದನೆ ಮಾಡುವುದು ಒಳ್ಳೆಯದು. ಸಂಗಾತಿಯಿಂದ ವಿಶೇಷ ಸಂಗತಿಗಳನ್ನು ಕಲಿಯಲಿದ್ದೀರಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಈ ದಿನ ಸಮಸ್ಯೆಗಳನ್ನು ಸೂಕ್ತವಾಗಿ ಪರಿಹರಿಸಿಕೊಂಡು ನಿರಾಳರಾಗುವಿರಿ. ಅನಿರೀಕ್ಷಿತವಾಗಿ ಆರ್ಥಿಕ ಮೂಲಗಳು ವೃದ್ಧಿಯಾಗಲಿದೆ. ಹಿರಿಯರಿಂದ ಭವಿಷ್ಯಕ್ಕೆ ಬೇಕಾಗುವ ಅನುಕೂಲಗಳು ಪ್ರಾಪ್ತಿಯಾಗುತ್ತದೆ. ಸಹೋದರ ವರ್ಗದಲ್ಲಿ ಮನಸ್ತಾಪ ಬರಬಹುದು. ಸಂಗಾತಿಯೊಡನೆ ಪ್ರವಾಸ ಮಾಡುವ ಚಿಂತನೆ ನಡೆಸುವಿರಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕೆಲಸದಲ್ಲಿ ಉತ್ತಮ ನಿರ್ವಹಣೆ ತೋರಿಸುತ್ತೀರಿ. ದೃಢವಾದ ನಿರ್ಧಾರಗಳು ಪ್ರಕಟಗೊಳ್ಳಲಿದೆ. ಹಿಡಿದ ಕಾರ್ಯವನ್ನು ಬಿಡದೆ ಮಾಡಿ ಮುಗಿಸುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಪ್ರಶಂಸೆ ಹಾಗೂ ಬೆಂಬಲ ದೊರೆಯಲಿದೆ. ಕುಟುಂಬಸ್ಥರಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುವರು. ಶುಭ ಕಾರ್ಯದ ಬಗ್ಗೆ ಚರ್ಚೆ ನಡೆಯಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ವೃಚ್ಚಿಕ ರಾಶಿ
ಅನಗತ್ಯವಾದ ದುಂದುವೆಚ್ಚಗಳು ಸಮಸ್ಯೆ ತರಬಹುದು ಇದ್ದುದ್ದರಲ್ಲಿಯೇ ಜೀವನವನ್ನು ಸಾಗಿಸುವುದು ಉತ್ತಮ. ಕೆಲಸದಲ್ಲಿ ತೊಂದರೆ ಬಾರದಂತೆ ವ್ಯವಸ್ಥೆ ಮಾಡಿಕೊಳ್ಳಿ. ಮನೆಯಲ್ಲಿ ಶಾಂತ ರೀತಿಯ ವರ್ತನೆ ತೋರಿಸುವುದು ಅಗತ್ಯ. ಪತ್ನಿಯ ಬೆಂಬಲ ಹಾಗೂ ಅವರ ಪ್ರೇಮ ಭರಿತ ನೋಟ ನಿಮ್ಮಲ್ಲಿ ಸಂತೋಷ ತರಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕಲಾಕ್ಷೇತ್ರದಲ್ಲಿ ಉತ್ತಮವಾದ ಪ್ರಗತಿ ಕಾಣಲಿದೆ. ನಿಮ್ಮ ಹೊಸ ಆಲೋಚನೆಗಳಿಗೆ ಸೂಕ್ತ ಮನ್ನಣೆ ದೊರೆಯುವುದು ನಿಶ್ಚಿತ. ಅವಕಾಶಗಳು ಮನೆಯ ಬಾಗಿಲಿಗೆ ಹುಡುಕಿಕೊಂಡು ಬರಲಿದೆ. ತಾಂತ್ರಿಕ ವರ್ಗದವರಿಗೆ ಉತ್ತಮವಾದ ಕೆಲಸದ ಆಯ್ಕೆಗಳು ಸಿಗಲಿದೆ. ಪ್ರವಾಸದಿಂದ ಧನಲಾಭವಾಗುವುದು.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಮನೆಯ ಅಲಂಕಾರಕ್ಕೆ ಹೆಚ್ಚು ಒತ್ತು ನೀಡುವಿರಿ. ಗೃಹ ಕಟ್ಟಡ ಕಾಮಗಾರಿಗಳು ವೇಗ ಪಡೆಯಲಿದೆ. ವಿದೇಶ ಪ್ರವಾಸದ ಚಿಂತನೆಗೆ ಮೂರ್ತಸ್ವರೂಪ ಪಡೆಯುತ್ತದೆ. ಸಂಗಾತಿಯೊಡನೆ ಇರುವ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಂಡು ಹೋಗುವುದು ಒಳಿತು. ಮಕ್ಕಳಿಂದ ಸಂತೋಷದ ವಾತಾವರಣ ಮನೆಯಲ್ಲಿ ಕಾಣಬಹುದು. ಆತ್ಮೀಯರೊಡನೆ ಮನಸ್ತಾಪ ಮಾಡಿಕೊಳ್ಳುವುದು ಸರಿಯಲ್ಲ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಅನಗತ್ಯವಾಗಿ ನಿಮ್ಮ ಬಗ್ಗೆ ನೀವೇ ಹೇಳಿ ಕೊಳ್ಳುವುದು ಸರಿ ಕಾಣುವುದಿಲ್ಲ. ಇಲ್ಲಸಲ್ಲದ ವಿಚಾರಗಳನ್ನು ತಲೆಯಲ್ಲಿ ಹಾಕಿಕೊಳ್ಳುವುದು ಈ ದಿನ ಕಂಡುಬರುತ್ತದೆ ಆದಷ್ಟು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಇನ್ನೊಬ್ಬರನ್ನು ಮೂರ್ಖರಾಗಿ ಮಾಡಲು ಹೋಗಿ ನೀವೇ ಮೂರ್ಖರಾಗಬಹುದು ಎಚ್ಚರವಿರಲಿ. ನಿಮ್ಮ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಿ. ಕೆಲಸದಲ್ಲಿ ಹಾಗೂ ನಿಮ್ಮ ಶ್ರಮದಲ್ಲಿ ನಂಬಿಕೆ ಇಡಿ ಅಡ್ಡದಾರಿ ಬೇಡವೇ ಬೇಡ. ಸ್ನೇಹದಲ್ಲಿ ಉತ್ತಮ ವ್ಯಕ್ತಿಗಳೊಡನೆ ಬಾಂಧವ್ಯ ಬೆಳೆಸಿಕೊಳ್ಳುವುದು ಒಳಿತು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಮಾತು ಕೇಳುವವರ ಬಳಿಯಲ್ಲಿ ಮಾತನಾಡಿ ಇನ್ನೊಬ್ಬರನ್ನು ಬುದ್ಧಿಮಾತು ಹೇಳುವ ಮೊದಲು ಅವರ ವಿಚಾರಗಳನ್ನು ತಿಳಿದುಕೊಳ್ಳುವುದು ಒಳಿತು, ಇಲ್ಲದಿದ್ದಲ್ಲಿ ನಿಮ್ಮನ್ನು ಅಪಹಾಸ್ಯ ಮಾಡಬಹುದು. ಆತ್ಮೀಯರಿಂದ ನಿಮ್ಮ ಯೋಜನೆಗೆ ಬಂಡವಾಳದ ಸಹಕಾರ ದೊರೆಯುತ್ತದೆ. ಕೆಲಸದಲ್ಲಿ ಯಶಸ್ಸು ನಿಮ್ಮ ಪಾಲಾಗುವುದು. ಹಣಕಾಸಿನ ಮೂಲಗಳು ಉತ್ತಮ ಸ್ವರೂಪವಾಗಿದೆ. ಅನಿರೀಕ್ಷಿತವಾಗಿ ಧನಾಗಮನ ಕಂಡುಬರುತ್ತದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button