Homeಜನಮನಪ್ರಮುಖ ಸುದ್ದಿ
ಮುಡಾ ಹಗರಣ ಪ್ರಕರಣ– ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ವೇದಿಕೆ

ಬೆಂಗಳೂರು : ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಂದೊದಗಿದ ಸಂಕಷ್ಟದ ಬಗ್ಗೆ ಇಂದು ದೆಹಲಿ ಅಂಗಳದಲ್ಲಿ ಚರ್ಚೆ ನಡೆಯಲಿದೆ. ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ವೇದಿಕೆ ಸಿದ್ಧಪಡಿಸುತ್ತಿದೆ.
ಇಂದು ಹೈಕಮಾಂಡ್ ಜೊತೆ ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ವಿಚಾರದ ಸಮರ್ಥನೆಗೆ ಮುಂದಾಗಲಿದ್ದಾರೆ. ಹೈಕಮಾಂಡ್ ಜೊತೆಗಿನ ಇಂದಿನ ಸಭೆ ಸಿದ್ದರಾಮಯ್ಯ ಪಾಲಿಗೆ ನಿರ್ಣಾಯಕ ಸಭೆಯಾಗಲಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜ್ಯಪಾಲರ ವಿರುದ್ಧ ದೂರು ನೀಡಲು ಕಾಂಗ್ರೆಸ್ ನಾಯಕರು ಗುರುವಾರದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದರು. ಹೈಕಮಾಂಡ್ ಅನುಮತಿಸಿದರೆ ದಿನಾಂಕ ನಿಗದಿ ಮಾಡಿ ಎಲ್ಲ ಶಾಸಕರನ್ನು ಸೇರಿಸಿಕೊಂಡು ದೆಹಲಿಯಲ್ಲಿ ರಾಷ್ಟ್ರಪತಿಗಳ ಮುಂದೆ ಪರೇಡ್ ಮಾಡಿಸುವ ಸಿದ್ಧತೆ ಹಾಕಿಕೊಳ್ಳಲಾಗಿದೆ.