ವಿನಯ ವಿಶೇಷ

ದಿನದ ನಿಮ್ಮ ಭವಿಷ್ಯ ವಾಣಿ ನೋಡಿ ಮುನ್ನಡೆಯರಿ

ಶ್ರೀ ದತ್ತಾತ್ರೇಯ ಸ್ವಾಮಿಯ ನೆನೆಯುತ್ತ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಮಾಘ
ಋತು : ಗ್ರೀಷ್ಮ
ರಾಹುಕಾಲ 09:06 – 10:42
ಗುಳಿಕ ಕಾಲ 5:54 – 07:30
ಸೂರ್ಯೋದಯ 05:53:55
ಸೂರ್ಯಾಸ್ತ 18:43:47
ತಿಥಿ : ಸಪ್ತಮಿ
ಪಕ್ಷ : ಶುಕ್ಲ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕುತೂಹಲಕಾರಿ ಆದಂತಹ ವಿಷಯಗಳಲ್ಲಿ ಅತಿ ಹೆಚ್ಚು ಆಸಕ್ತಿ ಮೂಡುತ್ತದೆ. ಯಾವುದೇ ವಿಚಾರಗಳನ್ನು ಸುಮ್ಮನೆ ಒಪ್ಪಿಕೊಳ್ಳುವುದು ಬೇಡ ಅದರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಮಕ್ಕಳಲ್ಲಿ ಕೆಲವು ರೀತಿಯಾದಂತಹ ವರ್ತನೆ ನಿಮಗೆ ಕಸಿವಿಸಿ ತರಬಹುದು ಆದಕಾರಣ ಅವರನ್ನು ಸರಿದಾರಿಗೆ ತೆಗೆದುಕೊಂಡು ಬನ್ನಿ. ನಿಮ್ಮ ಕೆಲಸದಲ್ಲಿ ಅತ್ಯುನ್ನತ ಪ್ರಶಂಸೆ, ಸ್ಥಾನ, ಮಾನ ಎಲ್ಲವೂ ಗಳಿಸುವಿರಿ. ಸಾಂಸಾರಿಕ ಜೀವನದಲ್ಲಿ ಕಷ್ಟನಷ್ಟಗಳು ಸಾಮಾನ್ಯ ಆದಷ್ಟು ಕುಟುಂಬಕ್ಕೆ ಸ್ಪಂದನೆ ನೀಡಿ, ಉತ್ತಮ ವಾತಾವರಣವನ್ನು ಕಲ್ಪಿಸಿಕೊಡುವುದು ಒಳ್ಳೆಯದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ವೃಷಭ ರಾಶಿ
ಹೊಸ ವ್ಯವಹಾರ ನಿಮ್ಮ ಕೈ ಹಿಡಿಯಲಿದೆ, ಅಗತ್ಯ ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ. ಮನೆಯಲ್ಲಿ ಶುಭ ವಾರ್ತೆಯನ್ನು ಕೇಳಿ ಆನಂದಿಸುವ ಸಮಯವಿದು. ಸ್ನೇಹಿತರೊಡನೆ ಮೋಜು-ಮಸ್ತಿ ಮನರಂಜನೆಗೆ ಹೋಗುವ ಸಾಧ್ಯತೆ ಕಾಣಬಹುದು. ಕುಟುಂಬದವರ ವಿಪರೀತ ಖರ್ಚು ನಿಮಗೆ ಸಂಕಷ್ಟ ತಂದೊಡ್ಡಬಹುದು. ಅನಗತ್ಯ ವ್ಯವಹಾರಗಳನ್ನು ಬದಿಗಿಟ್ಟು ಆಗುವ ಕೆಲಸವನ್ನು ಮಾತ್ರ ನೋಡಿ. ವಿದ್ಯಾರ್ಥಿಗಳಿಗೆ ಪ್ರಶಸ್ತಕರವಾದ ದಿನವಾಗಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಮಿಥುನ ರಾಶಿ
ಅತಿ ಹೆಚ್ಚು ಆಹಾರ ಸೇವನೆಯಿಂದ ಹಾಗೂ ದೇಹದ ತೂಕ ಹೆಚ್ಚಾಗುವುದರಿಂದ ಜಡತ್ವ ಹೆಚ್ಚಾಗಬಹುದು, ಆದಕಾರಣ ದೈಹಿಕ ವ್ಯಾಯಾಮ ಮಾಡುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಆರ್ಥಿಕವಾಗಿ ಬಲ ಹೀನಸ್ಥಿತಿ ಕಾಣಬಹುದಾಗಿದೆ ಆದರೆ ಸಂಜೆವೇಳೆಗೆ ನಿಧಾನವಾಗಿ ನಿಮ್ಮ ಕಾರ್ಯ ಕೈಗೂಡಬಹುದು. ಕೆಲವು ವ್ಯವಹಾರ ಮಾಡುವ ಮುನ್ನ ಪರಿಣಿತರ ಸಹಕಾರ ಪಡೆಯುವುದು ಒಳಿತು. ರಾಜಿ ಪಂಚಾಯಿತಿಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳ ಬೇಡಿ. ಕೆಲಸದ ಒತ್ತಡ ಕಡಿಮೆಯಿದ್ದು ನೀವು ಇಂದು ಪ್ರಶಾಂತರಾಗಿ ಇರುವಿರಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಕಟಕ ರಾಶಿ
ಭೂಮಿಯ ವಿಚಾರಗಳಲ್ಲಿ ನಿರೀಕ್ಷಿತ ಫಲ ಕಾಣಬಹುದು. ಬಹುದಿನದ ಕನಸೊಂದು ನನಸಾಗುವ ಸಂದರ್ಭ ಎದುರಾಗುತ್ತದೆ. ನಿಮ್ಮ ಸ್ನೇಹಿತ ವರ್ಗ ಹಾಗೂ ಕುಟುಂಬವರ್ಗದ ನೆರವು ನಿಮಗೆ ಅವಿಸ್ಮರಣೀಯವಾಗಿ ಇರುತ್ತದೆ. ಉದ್ಯೋಗದ ಜಾಗದಲ್ಲಿ ಕೆಲವು ಕಿರುಕುಳ ಅನುಭವಿಸುವ ಸಾಧ್ಯತೆ ಇದೆ. ಮಕ್ಕಳ ಜ್ಞಾನಾರ್ಜನೆಗೆ ವಿಶೇಷ ಸವಲತ್ತುಗಳನ್ನು ನೀವು ನೀಡುವಿರಿ. ಆಸ್ತಿಪಾಸ್ತಿಯ ಸಂಬಂಧಪಟ್ಟ ಸಮಸ್ಯೆಗಳನ್ನು ಹಿರಿಯರ ಸಮ್ಮುಖದಲ್ಲಿ ಪರಿಹರಿಸಿಕೊಳ್ಳುವುದು ಉತ್ತಮ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಸಿಂಹ ರಾಶಿ
ನಿಮ್ಮ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಭವಿಷ್ಯದ ಏಳಿಗೆಗೆ ತಯಾರಾಗುವುದು ಒಳಿತು. ಬೇರೆಯವರ ವಿಚಾರಗಳನ್ನು ಕೇಳುವುದು ಆದಷ್ಟು ಬಿಟ್ಟುಬಿಡಿ. ಆದಾಯ ಹಣಕಾಸಿನಲ್ಲಿ ಹೆಚ್ಚಿನ ಶಕ್ತಿ ತುಂಬಲು ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಹಣಕಾಸಿನಲ್ಲಿ ಖರ್ಚುಗಳ ಪಟ್ಟಿ ಹೆಚ್ಚಾಗಬಹುದು. ಉದ್ಯೋಗರಂಗದಲ್ಲಿ ನಿಮ್ಮ ಕಾರ್ಯಶೈಲಿಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳು ಉದ್ಭವ ವಾಗಲಿದೆ ಎಚ್ಚರವಹಿಸಿ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ನಿಮ್ಮ ಆರೋಗ್ಯಯುತ ಹೆಜ್ಜೆ ಸಾಧನೆಗೆ ಪ್ರೇರಣೆ ನೀಡುವುದು. ಕೆಲವು ಮೋಸದ ಜಾಲಗಳು ನಿಮಗೆ ಆವರಿಸಬಹುದು ಎಚ್ಚರವಿರಲಿ. ನಿಮ್ಮಲ್ಲಿ ಪ್ರೇಮಾಕರ್ಷಣೆ ಆಗುವಂತಹ ಲಕ್ಷಣಗಳನ್ನು ಕಾಣಬಹುದು. ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಸಂಪರ್ಕ ಮಾಧ್ಯಮ ಹೆಚ್ಚಾಗಬಹುದು. ನಿಮ್ಮಲ್ಲಿ ಪ್ರೀತಿ ಹಾಗೂ ಪ್ರಣಯದ ಹೆಚ್ಚು ಆಸಕ್ತಿ ಇಂದು ಬರಲಿದೆ. ಉತ್ತಮ ಉದ್ಯೋಗದ ಅವಕಾಶಗಳು ನಿಮಗೆ ಸಿಗುವುದು ಖಚಿತ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ತುಲಾ ರಾಶಿ
ಉತ್ಪನ್ನ ಹಾಗೂ ಆದ್ಯತಾ ವಲಯಗಳನ್ನು ಗುರುತಿಸಿ ಆರ್ಥಿಕವಾಗಿ ಮುಂಚೂಣಿ ಸ್ಥಾನಕ್ಕೆ ಬರಲಿದ್ದೀರಿ. ನಿಮ್ಮ ಕಟು ಮಾತುಗಳು ಪ್ರೀತಿಪಾತ್ರರನ್ನು ನೋವು ತರಬಹುದಾಗಿದೆ. ಕೆಲವು ವಿವಾದಗಳು ನಿಮ್ಮ ಹಿಂದೆ ಗಿರಕಿ ಹೊಡೆಯುವ ಸಾಧ್ಯತೆ. ಪತ್ನಿಯ ಸಾಂಗತ್ಯದಲ್ಲಿ ಭಾವನಾತ್ಮಕವಾಗಿ ಹಾಗೂ ಪ್ರೇಮ ಮಯವಾಗಿ ಅತಿ ಹೆಚ್ಚು ಸಮಯ ಕಳೆಯುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಅನುಮಾನ, ಇರುಸುಮುರುಸು ಹೆಚ್ಚಾಗುತ್ತದೆ. ನಿಮ್ಮ ಕೆಲವು ಹಾಸ್ಯಗಳು ಸುತ್ತಮುತ್ತಲಿನ ವಾತಾವರಣವನ್ನು ಬದಲಾಯಿಸುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ವೃಚ್ಚಿಕ ರಾಶಿ
ವೈಯಕ್ತಿಕ ಸಮಸ್ಯೆಗಳನ್ನು ಪರಿಹಾರ ಮಾಡಲು ಪ್ರಯತ್ನಿಸಿ. ಮಕ್ಕಳ ವಿದ್ಯೆಯಲ್ಲಿ ಉತ್ತಮ ನಿರೀಕ್ಷೆ. ಉದ್ಯೋಗದಲ್ಲಿ ನಿಮ್ಮ ನಿರೀಕ್ಷೆಯಂತೆ ಆರ್ಥಿಕ ಸ್ಥಿತಿ ಬಲಗೊಳ್ಳುವುದು. ಕೆಲವೊಂದು ಅವಕಾಶಗಳನ್ನು ಪಡೆಯುವಾಗ ಕೃತಕತೆಯನ್ನು ಬಳಸಬೇಡಿ. ಆತುರದ ಕೆಲಸವು ನಿಮಗೆ ಮತ್ತಷ್ಟು ಸಂಕಷ್ಟ ತಂದುಕೊಡುತ್ತದೆ. ನಿಮ್ಮ ಎಲ್ಲಾ ದೃಷ್ಟಿಕೋನಗಳಿಂದ ಕೆಲಸದ ಬದ್ಧತೆಯನ್ನು ಪರಿಶೀಲಿಸಿ. ಅನಗತ್ಯ ದುಂದುವೆಚ್ಚವನ್ನು ಆದಷ್ಟು ತಡೆಗಟ್ಟಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ನಿಮ್ಮನ್ನು ನೀವು ಬೇರೆಯವರಿಗೆ ತಾಳೆ ಹಾಕಿಕೊಂಡು ವ್ಯಥೆ ಪಡಬೇಡಿ. ಉಪಕಸುಬುಗಳಿಂದ ಆದಾಯ ಹೆಚ್ಚಾಗಲಿದೆ. ಸಂಗಾತಿಯ ವಿಚಾರಗಳಿಗೆ ಮನ್ನಣೆ ನೀಡಿ. ನಿಮ್ಮ ಆರ್ಥಿಕ ವ್ಯವಹಾರಕ್ಕೆ ಬಂಡವಾಳ ಸಿಗಲಿದೆ. ಸಕಾರಾತ್ಮಕ ಚಿಂತನೆ ಹಾಗೂ ಕ್ರಿಯಾತ್ಮಕ ಚಟುವಟಿಕೆ ನಿಮ್ಮಲ್ಲಿ ಅತ್ಯವಶ್ಯಕವಾಗಿ ಬೇಕಾಗಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಮಕರ ರಾಶಿ
ಮಾನಸಿಕವಾದ ಅಶಾಂತಿಯಿಂದ ಹೊರಬರಲು ಪ್ರಯತ್ನಿಸಿ. ಆಸಕ್ತಿಕರ ಕೆಲಸಕಾರ್ಯಗಳಲ್ಲಿ ಪಾಲ್ಗೊಳ್ಳಿ. ಇಂದು ನಿಮಗೆ ಪ್ರೀತಿಪಾತ್ರರು ನಿಮ್ಮಿಷ್ಟದ ಹಾಗೆ ನಡೆದುಕೊಳ್ಳುತ್ತಾರೆ ಹಾಗೂ ವಿಶೇಷ ಉಡುಗೊರೆ ನೀಡಲು ಬಯಸುವರು. ಕುಟುಂಬಸ್ಥರಿಂದ ಹೋಮ-ಹವನ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಕ್ರಮ ನಡೆಯುವ ಸಾಧ್ಯತೆ. ದಾಂಪತ್ಯ ಜೀವನದಲ್ಲಿ ಸಂತೋಷಕರವಾದಂತಹ ಹಲವು ಘಟನೆಗಳು ಜರುಗಲಿವೆ. ನಿಮ್ಮಲ್ಲಿ ಇರುವಂತಹ ಬುದ್ಧಿವಂತಿಕೆಯಿಂದ ಆರ್ಥಿಕ ಸ್ಥಿತಿಯನ್ನು ಉತ್ತಮತೆಗೆ ಕೊಂಡೊಯ್ಯುವುದು ಒಳಿತು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಕುಂಭ ರಾಶಿ
ಒತ್ತಡರಹಿತವಾಗಿ ಕಾಲಕಳೆಯುವ ದಿನವಿದು. ಪ್ರವಾಸ ಅಥವಾ ಕ್ಷೇತ್ರ ದರ್ಶನಕ್ಕೆ ಪ್ರಯಾಣ ಮಾಡುವ ಸಾಧ್ಯತೆ. ನಿಮ್ಮಲ್ಲಿನ ಸೋಮಾರಿತನದಿಂದ ನಿರ್ದಿಷ್ಟ ಸಮಯದಲ್ಲಿ ಕಾರ್ಯ ಮುಗಿಸದೆ ಮುಂದಿನ ದಿನಗಳಲ್ಲಿ ಪರದಾಡುವಿರಿ. ಹೆಚ್ಚಿನ ಅವಕಾಶಗಳು ಬೇರೆಯವರ ಪಾಲಾಗಬಹುದು ಎಚ್ಚರವಿರಲಿ. ಪತ್ನಿಯೊಂದಿಗೆ ಕೆಲವು ವಿವಾದಗಳು ಹೆಚ್ಚಾಗುವ ಸಂದರ್ಭವಿದೆ. ಕೆಲವು ಕೆಲಸಗಳಿಗಾಗಿ ಇನ್ನೊಬ್ಬರನ್ನು ನಂಬಿ ಕುಳಿತುಕೊಳ್ಳದೆ ರಂಗಕ್ಕೆ ನೀವೇ ಧುಮುಕುವುದು ಒಳಿತು. ಎಲ್ಲರೂ ನಿಮ್ಮ ಮಾತುಗಳನ್ನೇ ಕೇಳುತ್ತಾರೆ ಎಂಬುದು ಶುದ್ಧ ತಪ್ಪು. ಕೆಲವು ವಿಷಯಗಳಿಗಾಗಿ ಸಾಲ ಬೇಡುವಂತಹ ಪರಿಸ್ಥಿತಿ ಬರಬಹುದು.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಮೀನ ರಾಶಿ
ನಿಮ್ಮ ಮಾತೇ ಅಂತಿಮ ಆಗಿರಬೇಕೆಂಬ ಭಾವನೆ ನಿಮ್ಮಲ್ಲಿದ್ದರೆ ತೆಗೆದುಬಿಡಿ. ಕೆಲಸದ ಸ್ಥಳದಲ್ಲಿ ದಿಡೀರನೆ ಸಮಸ್ಯೆ ಉದ್ಭವವಾಗಬಹುದು. ನಿಮ್ಮ ಆಕಾಂಕ್ಷೆ ಅಂತೆಯೇ ಸ್ವಂತ ಉದ್ಯಮ ಪ್ರಾರಂಭ ಮಾಡುವ ಶುಭಘಳಿಗೆ ಹತ್ತಿರದಲ್ಲಿದೆ. ನಿಮ್ಮ ಆಲೋಚನೆ ಶ್ರೇಷ್ಠವಾದದ್ದು ಇದು ನಿಮಗೆ ಆದಾಯ ಹೆಚ್ಚು ಮಾಡಲಿದೆ. ಲೇವಾದೇವಿ ವ್ಯವಹಾರ ಇಂದು ಕೈಹಾಕಬೇಡಿ. ಹೂಡಿಕೆಗಳಲ್ಲಿ ಜಾಗ್ರತೆವಹಿಸಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ
ವಿದ್ಯೆ, ಉದ್ಯೋಗ, ವ್ಯಾಪಾರ, ಹಣಕಾಸು, ಸಾಲಭಾದೆ, ಪ್ರೇಮ ವಿಚಾರ, ಆರೋಗ್ಯ, ಸಂತಾನ, ದಾಂಪತ್ಯ, ಶತ್ರುಬಾಧೆ ಇನ್ನೂ ಇತ್ಯಾದಿ ಹಲವು ಗುಪ್ತ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button