ರಾಶಿಫಲ ನಿಮ್ಮ ವಿನಯವಾಣಿ ಯಲ್ಲಿ ಓದಿ ಮುಂದೆ ಹೆಜ್ಜೆ ಹಾಕಿ
ಶ್ರೀ ಮಂಜುನಾಥಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.
ಸಮಸ್ಯೆ ಏನೇ ಇರಲಿ ಶಾಸ್ತ್ರೋಕ್ತ ಅಂತಿಮ ಪರಿಹಾರ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262
ಮೇಷ ರಾಶಿ
ಆಕರ್ಷಿತ ವಾದಂತಹ ನಿಮ್ಮ ಕಾರ್ಯವೈಖರಿ ಮೆಚ್ಚುಗೆ ಗಳಿಸುತ್ತದೆ. ಇಂದು ಚುಟುಕು ಪ್ರವಾಸದ ಯೋಚನೆ ನಿಮ್ಮ ಮನದಲ್ಲಿ ಮೂಡುತ್ತದೆ. ಅನ್ಯರ ಮುಂದೆ ನಿಮ್ಮ ಪ್ರಾಬಲ್ಯ ತೋರಿಸಲು ಹೆಚ್ಚು ಹಣ ಖರ್ಚು ಮಾಡುತ್ತೀರಿ. ನಿಮ್ಮ ವರ್ತನೆಯಿಂದ ಹಲವರು ಬೇಸರ ಪಟ್ಟುಕೊಳ್ಳಬಹುದು. ಸ್ನೇಹಿತರನ್ನೇ ಅತಿ ವಿಶ್ವಾಸ ತೆಗೆದುಕೊಳ್ಳುವುದು ಅಷ್ಟು ಸಮಂಜಸವಲ್ಲ. ನಿಮ್ಮ ಯೋಜನೆ ಕಾರ್ಯದ ವಿಳಂಬತೆಯಿಂದ ತಡೆಹಿಡಿಯುತ್ತದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ವೃಷಭ ರಾಶಿ
ನಿಮ್ಮ ಕೆಲಸದ ಬದ್ಧತೆ ಹಾಗೂ ಬಿಡುವಿಲ್ಲದ ಕಾರ್ಯವೈಕರಿ ಹಲವು ಜನಗಳು ಮೆಚ್ಚುಗೆ ಸೂಚಿಸುತ್ತಾರೆ. ನಿರೀಕ್ಷಿತ ಕೆಲಸಗಳಲ್ಲಿ ಶುಭಸೂಚನೆ ಕಾಣಲಿದೆ. ಖರ್ಚುಗಳಿಗೆ ಕಡಿವಾಣ ಹಾಕುವುದು ಒಳಿತು. ನಿಮ್ಮನ್ನು ತೀರಾ ಕೆಳಹಂತದಲ್ಲಿ ನೋಡುವ ಜನರನ್ನು ತಿರಸ್ಕರಿಸಿ. ಕೆಲವು ವಿಷಯಗಳು ಸಂಸಾರವನ್ನು ಸುಭದ್ರಗೊಳಿಸುತ್ತದೆ ಅದೇ ರೀತಿ ಸಂಬಂಧಗಳನ್ನು ಹಾಳುಮಾಡಬಹುದು, ಯಾವುದೇ ಬಿರುಗಾಳಿ ಬೀಸದಂತೆ ನೋಡಿಕೊಳ್ಳುವುದು ನಿಮ್ಮ ಕಾರ್ಯ. ಕ್ರೀಡಾ ಚಟುವಟಿಕೆಗಳು ನಿಮ್ಮಲ್ಲಿ ಹೆಚ್ಚಿನ ಹುಮ್ಮಸ್ಸು ತಂದುಕೊಡುತ್ತದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮಿಥುನ ರಾಶಿ
ಹೊಸ ಆರ್ಥಿಕ ವ್ಯವಹಾರ ನಿಮಗೆ ಇಂದು ಕೈಗೂಡಿ ಬರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಬೆಳವಣಿಗೆಯ ಹಂತ ನೋಡಬಹುದು. ಸ್ಥಳ ಬದಲಾವಣೆ ಯೋಚನೆ ನಿಮ್ಮಲ್ಲಿದ್ದರೆ ಅಗತ್ಯ ಕೆಲಸ ಆಗಲಿದೆ. ವ್ಯವಹಾರದಲ್ಲಿ ನಿಮ್ಮ ಮಾತುಗಳು ಸ್ಪಷ್ಟ ಮತ್ತು ಧೈರ್ಯದಿಂದ ಇರಲಿ ಖಂಡಿತ ಕಾರ್ಯ ಯಶಸ್ಸು ಆಗಲಿದೆ. ಮಡದಿಯೊಂದಿಗೆ ವಸ್ತುಗಳ ಖರೀದಿಗೆ ಹೋಗುವ ಸಾಧ್ಯತೆ ಹಾಗೂ ಅವರೊಡನೆ ಕಳೆಯುವ ಕಾಲ ಅವಿಸ್ಮರಣೀಯ ವಾಗಿರುತ್ತದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕಟಕ ರಾಶಿ
ಮನಸ್ಸು ಮರ್ಕಟ ಇದ್ದಂತೆ, ಹೆಚ್ಚು ವಿಚಾರಗಳಿಗೆ ಚಿಂತನೆ ಮಾಡುತ್ತಾ ಅಥವಾ ಬೇರೆಯವರ ವಿಷಯಗಳಲ್ಲಿ ಯೋಚಿಸುವುದು ಅಷ್ಟೊಂದು ಸರಿ ಕಾಣುವುದಿಲ್ಲ. ಆರೋಗ್ಯದಲ್ಲಿ ಗಮನವಹಿಸುವುದು ಒಳ್ಳೆಯದು. ಅನಿರೀಕ್ಷಿತವಾಗಿ ಉದ್ಯೋಗ ಸ್ಥಳದಲ್ಲಿ ಸಮಸ್ಯೆ ಕಾಣಬಹುದು ಅದನ್ನು ಪರಿಹರಿಸಲು ನಿಮ್ಮ ವಿವೇಚನೆಯನ್ನು ಉಪಯೋಗಿಸಿ. ಜಮೀನು ಅಥವಾ ಗೃಹ ಖರೀದಿಗೆ ಉತ್ತಮವಾದ ದಿನವಿದು. ಕುಟುಂಬದ ಸಣ್ಣ ಸಮಸ್ಯೆಗಳನ್ನು ದೊಡ್ಡದಾಗಿ ಬಿಂಬಿಸಿ ಆಡಿಕೊಳ್ಳುವ ಹಾಗೆ ಮಾಡಬೇಡಿ. ಕೆಲಸದ ನಿರ್ಧಾರಗಳು ಉತ್ತಮ ಲಾಭಾಂಶ ತಂದುಕೊಡುತ್ತದೆ. ಇಂದು ನೀವು ವ್ಯವಹಾರದ ಕೆಲವು ಸೂಕ್ಷ್ಮ ವಿಚಾರಗಳನ್ನು ಕಲಿಯುತ್ತೀರಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಸಿಂಹ ರಾಶಿ
ನಭೂತೋ ನಭವಿಷ್ಯತಿ ಎಂಬಂತೆ ಸಾಧನೆಯ ಮಹಾಪರ್ವ, ಯಾರಿಂದಲೂ ಸಾಧ್ಯವಾಗದೆ ಇದ್ದದ್ದು ನಿಮ್ಮಿಂದ ಮಾತ್ರ ಸಾಧ್ಯವಾಗಲಿದೆ, ಇದಕ್ಕೆ ನಿಮ್ಮ ಇಚ್ಚಾಶಕ್ತಿ ಅವಶ್ಯಕ. ಕೋಪ ಆವೇಶವನ್ನು ಬದಿಗಿಟ್ಟು ಜೀವನದ ಪ್ರಯಾಣ ಮುಂದುವರಿಸಿ. ಕುಟುಂಬದ ಸಮಸ್ಯೆಗೆ ಸೂಕ್ತ ಪರಿಹಾರಗಳನ್ನು ಹುಡುಕಿ. ಉದ್ಯೋಗದಲ್ಲಿ ನವೀನ ತಂತ್ರಜ್ಞಾನ ಹಾಗೂ ಉತ್ತಮ ಕುಶಲತೆಗೆ ಒತ್ತು ನೀಡಿ. ರಾಜಕೀಯ ಸಾಮಾಜಿಕವಾಗಿ ಉತ್ತಮವಾದ ಶ್ರೇಷ್ಠಮಟ್ಟದ ಸಾಧನೆ ಕಾಣಬಹುದು. ಹಣಕಾಸಿನಲ್ಲಿ ನಿಮ್ಮ ನಿರೀಕ್ಷೆ ಮೀರಿ ಲಾಭಾಂಶ ಪಡೆಯಬಹುದಾದ ದಿನ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ನಿಮ್ಮಲ್ಲಿ ಮೂಡುವ ಸಾತ್ವಿಕ ಯೋಚನೆಗಳು ನಿಮ್ಮ ಗುರಿ ನೆರವೇರಲು ಸಹಕಾರ ನೀಡುತ್ತದೆ. ಇಂದು ಮನೆ ದೇವರ ಆಶೀರ್ವಾದ ಪಡೆಯಲು ಬಯಸುತ್ತೀರಿ. ಕುಟುಂಬದಲ್ಲಿ ನಿಮ್ಮ ಬಗ್ಗೆ ಕೆಲವು ಊಹಾಪೋಹ ಮಾತುಗಳು ಬರುವ ಸಾಧ್ಯತೆ ಇದೆ. ನಿಮ್ಮ ಕೆಲವು ನಿರೀಕ್ಷಿತ ಕೆಲಸಗಳು ವಿಳಂಬ ಆಗಲಿದೆ. ಮನೆಯಲ್ಲಿ ಆರೋಗ್ಯದ ಸಮಸ್ಯೆ ನಿಮ್ಮನ್ನು ಹೆಚ್ಚು ಕಾಡಬಹುದು. ನಿಮ್ಮ ಕೆಲಸದಲ್ಲಿ ಸ್ಥಳ ಬದಲಾವಣೆಯಾಗುವ ನಿರೀಕ್ಷೆ ಇದೆ. ನಿಮ್ಮ ಪತ್ನಿಯನ್ನು ಪ್ರೇಮದಿಂದ ಕಾಣುವುದು ಒಳಿತು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ತುಲಾ ರಾಶಿ
ಪದವಿ ಪೂರ್ವ ಪುಣ್ಯನಾಂ ಎಂಬ ಮಾತಿನಂತೆ ನಿಮ್ಮ ಕಾರ್ಯಗಳಿಂದ ಭವಿಷ್ಯವನ್ನು ಸದೃಢಗೊಳಿಸಿ ಕೊಳ್ಳುವಿರಿ. ನಿಮ್ಮ ವಿಚಾರಗಳು ಹೆಚ್ಚಿನ ಮಾನ್ಯತೆ ಪಡೆಯುತ್ತದೆ. ಹಲವು ದಿನಗಳ ನಂತರ ಆತ್ಮೀಯರು ನಿಮ್ಮನ್ನು ಸಂಧಿಸುವ ಸಮಯ. ಮಕ್ಕಳ ಅಭಿವೃದ್ಧಿಯಿಂದ ಕುಟುಂಬದ ಸಂಕಷ್ಟ ದೂರಮಾಡಲಿದೆ. ಹಣಕಾಸಿನಲ್ಲಿ ವಿಶೇಷವಾದ ಧನಲಾಭ ಆಗುವ ಮುನ್ಸೂಚನೆ ಕಾಣಬಹುದು. ವಿದ್ಯಾರ್ಥಿಗಳಿಗೆ ಹಲವು ಚಟುವಟಿಕೆಗಳಲ್ಲಿ ಅಧ್ಯಯನ ಮಾಡಲು ಬಯಸುವರು.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ವೃಚಿಕ ರಾಶಿ
ಸಿಗುವ ಕೆಲಸವನ್ನು ಬಿಡದೆ ಪಡೆಯುವುದು ಆರ್ಥಿಕ ಸುಧಾರಣೆಗೆ ಇದು ಉತ್ತಮ ಅಂಶವಾಗಿದೆ. ಉದ್ಯೋಗದಲ್ಲಿ ಇಲ್ಲಸಲ್ಲದ ಅಪಪ್ರಚಾರ ನಿಮ್ಮ ವಿರುದ್ಧ ನಡೆಯಬಹುದು ಇದು ನಿಮ್ಮ ಮನಃಶಾಂತಿ ಹಾಳುಮಾಡಬಹುದು, ಚಿಂತಿಸದಿರಿ ಕೆಲಸದ ನಿಜವಾದ ಶ್ರದ್ಧೆ ಪ್ರಾಮಾಣಿಕತೆ ನಿಮ್ಮಲ್ಲಿ ಇರುವುದರಿಂದ ಯಾವುದೇ ಅಳುಕಿಗೆ ಹೆದರುವ ಅವಕಾಶವಿಲ್ಲ. ನಿಮ್ಮ ಅಧಿಕ ಹಣಕಾಸು ಪೋಲು ಮಾಡುವ ಸ್ವಭಾವವನ್ನು ತೆಗೆದುಹಾಕಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ವಸ್ತುಗಳನ್ನು ಜೋಪಾನವಾಗಿ ಕಾಪಾಡುವುದು ನಿಮ್ಮ ಕರ್ತವ್ಯ. ಕುಟುಂಬಸ್ಥರ ಅನುಗ್ರಹದಿಂದ ಉತ್ತಮ ಯೋಜನೆಗೆ ತೊಡಗಿಸಿಕೊಳ್ಳುವ ಸಾಧ್ಯತೆ. ವಿದ್ಯಾರ್ಥಿಗಳಲ್ಲಿ ಕೆಲವು ಬದಲಾವಣೆಗಳು ಕಾಣಬಹುದು ಅವರ ಇಷ್ಟ ಪೂರೈಸಲು ಹೆಣಗಾಡುವ ಸ್ಥಿತಿ ನಿಮ್ಮದಾಗಿರುತ್ತದೆ. ವಾಗ್ದಾನ ನೀಡುವಾಗ ಅದರ ಬದ್ಧತೆ ನಿಮ್ಮಿಂದ ಸಾಧ್ಯವೇ ನೋಡಿಕೊಳ್ಳಿ. ಶತ್ರುಬಾದೆ ನಿಮಗೆ ಇನ್ನಿಲ್ಲದಂತೆ ತೊಂದರೆ ನೀಡಬಹುದು ಆದಷ್ಟು ಎಚ್ಚರದಿಂದಿರುವುದು ಒಳ್ಳೆಯದು. ಆರ್ಥಿಕ ವ್ಯವಹಾರಗಳನ್ನು ಸುಖಾಸುಮ್ಮನೆ ಎಲ್ಲರೊಡನೆ ಹಂಚಿಕೊಳ್ಳಬೇಡಿ. ಪತ್ನಿಯ ಇಚ್ಚಾಶಕ್ತಿ ನಿಮ್ಮ ಭವಿಷ್ಯದ ಅಡಿಪಾಯಕ್ಕೆ ಸೂಕ್ತವಾಗಿರುತ್ತದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಕರ ರಾಶಿ
ಆತುರದ ನಿರ್ಣಯ ಗಳಿಂದ ಅನಗತ್ಯ ವಿವಾದಗಳು ನಿಮ್ಮ ಮೇಲೆ ಎಳೆದುಕೊಳ್ಳುವ ಸಾಧ್ಯತೆ. ಕೆಲವೊಂದು ವಿಷಯಗಳಿಗೆ ವೆಚ್ಚ ಮಾಡುವುದು ತಪ್ಪೇನಲ್ಲ ಅಧಿಕ ಜಿಪುಣತನದ ವರ್ತನೆ ಒಳ್ಳೆಯದಲ್ಲ. ನೆನೆಗುದಿಗೆ ಬಿದ್ದಿರುವ ಕಾರ್ಯಗಳಿಗೆ ಮರುಹುಟ್ಟು ನೀಡುವ ಸಮಯ ಬರಲಿದೆ ಕೆಲವು ಆತ್ಮೀಯ ಜನರು ಇದಕ್ಕೆ ಸಹಕಾರ ನೀಡಲಿದ್ದಾರೆ. ಆರ್ಥಿಕಸ್ಥಿತಿ ಉತ್ತಮವಾಗಿದ್ದು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಮಾತಿನಲ್ಲಿ ತಾಳ್ಮೆ ಇರಲಿ, ಕೆಲಸದಲ್ಲಿ ಶ್ರದ್ಧೆ ಇರಲಿ, ಮುಖದಲ್ಲಿ ನಗುವಿರಲಿ, ನೀವು ಎಲ್ಲವನ್ನೂ ಗೆದ್ದು ಬಿಗುವಿರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಕುಂಭ ರಾಶಿ
ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಕಾಣುವುದು ಇಂದು ಕಠಿಣವಾಗಲಿದೆ. ಕೆಲವು ಕೆಲಸಗಳು ನಿಮಗೆ ಹೆಚ್ಚು ಆಯಾಸ ತಂದೊಡ್ಡಬಹುದು. ನಿಮ್ಮ ವೈಯಕ್ತಿಕ ಅಭಿರುಚಿ ಹೊಂದಿರುವ ಇಷ್ಟ ಕಾರ್ಯಗಳು ನೆನೆಗುದಿಗೆ ಬೀಳಲಿದೆ. ಹಣಕಾಸಿನ ಪರಿಸ್ಥಿತಿ ತುಂಬಾ ತಳಮಟ್ಟದಲ್ಲಿ ನಿಮ್ಮ ಮನಸ್ಸು ಕಾಡುತ್ತದೆ. ಸೂಕ್ತ ತಿಳುವಳಿಕೆ ಜ್ಞಾನವನ್ನು ಕೆಲಸದಲ್ಲಿ ವೃದ್ಧಿಸಿಕೊಳ್ಳಿ. ಕೆಲವು ತಪ್ಪುಗಳಿಂದ ಹಲವು ಸಮಸ್ಯೆಗಳು ಬರುತ್ತದೆ. ಪತ್ನಿಯ ಹಿತಾಸಕ್ತಿಯಿಂದ ಸಮಸ್ಯೆ ನಿವಾರಣೆಯಾಗಲಿದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಮೀನ ರಾಶಿ
ಸ್ನೇಹ ಮಧುರವಾದದ್ದು ಅದು ಉತ್ತಮ ದಾರಿಯಿಂದ ಕೂಡಿದ್ದರೆ ಮಾತ್ರ, ನಿಮಗೆ ಅರಿವಿಲ್ಲದೆ ಕೆಲವು ದುರಭ್ಯಾಸಗಳು ಹೆಚ್ಚಾಗುತ್ತದೆ ಅದನ್ನು ಬಿಡುವುದು ಒಳಿತು. ಕುಟುಂಬದಲ್ಲಿ ನಿಮ್ಮ ಜವಾಬ್ದಾರಿಯುತ ಸ್ಥಾನ ಉತ್ತಮಗೊಳ್ಳಲಿದೆ. ಆರ್ಥಿಕತೆಯು ನಿಮ್ಮ ನಿರೀಕ್ಷೆಯನ್ನು ಇಂದು ಹುಸಿಗೊಳಿಸಬಹುದಾದ ಸಾಧ್ಯತೆ ಇದೆ. ನಿಮ್ಮ ಲಾಭಾಂಶದ ಕೆಲಸವು ನೆರವೇರಲು ಅಗತ್ಯ ಸಿದ್ಧತೆ ಈಗಲೇ ಮಾಡಿಕೊಳ್ಳಿ. ದೂರದ ಊರಿನ ಪ್ರಯಾಣ ಮಾಡುವ ನಿರೀಕ್ಷೆಯಿದೆ. ಪ್ರಯಾಣದಿಂದ ನಿಮ್ಮಲ್ಲಿ ಚೈತನ್ಯ ಸೃಷ್ಟಿಯಾಗಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ
ವಿದ್ಯೆ, ಉದ್ಯೋಗ, ವ್ಯಾಪಾರ, ಪ್ರೇಮ ವಿಚಾರ, ಹಣಕಾಸು, ಸಾಲಬಾದೆ, ಆರೋಗ್ಯ, ದಾಂಪತ್ಯ ಕಲಹ, ಸಂತಾನ, ಇನ್ನೂ ಹಲವು ಗುಪ್ತ ವಿಷಯಗಳಿಗೆ ಪರಿಹಾರ ಹಾಗೂ ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262