ಪ್ರಮುಖ ಸುದ್ದಿ
ಎಐಸಿಸಿ ಆದೇಶ : 14ಜನ ‘ಮಾಜಿ ಶಾಸಕರು’ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ!
ಬೆಂಗಳೂರು: ದೋಸ್ತಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಮುಂಬೈ ಸೇರಿದ್ದ ಅತೃಪ್ತ ಶಾಸಕರು ಈಗಾಗಲೇ ಶಾಸಕ ಸ್ಥಾನದಿಂದಲೇ ಅನರ್ಹಗೊಂಡಿದ್ದಾರೆ. ಇದೀಗ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕೆಪಿಸಿಸಿ ನೀಡಿರುವ ಶಿಫಾರಸ್ಸಿನ ಮೇರೆಗೆ ಎಐಸಿಸಿ 14ಜನ ಅನರ್ಹಗೊಂಡಿರುವ ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಮೂಲಕ ಕ್ರಮ ಕೈಗೊಂಡಿದೆ.
ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ರಮೇಶ ಜಾರಕಿಹೊಳಿ, ಮಹೇಶ ಕುಮಟಹಳ್ಳಿ, ಶ್ರೀಮಂತ ಪಾಟೀಲ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಬಿ.ಸಿ.ಪಾಟೀಲ್, ಎಂ.ಟಿ.ಬಿ.ನಾಗರಾಜ್, ಡಾ.ಸುಧಾಕರ್, ಆನಂದ ಸಿಂಗ್, ಪ್ರತಾಪಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ರೋಷನ್ ಬೇಗ್ ಹಾಗೂ ಆರ್.ಶಂಕರ್ ಅವರನ್ನು ಪಕ್ಷದಿಂದ ಉಚ್ಛಟಿಸಿ ಎಐಸಿಸಿ ಆದೇಶಿಸಿದೆ.