ಡಿಂಪಲ್ ಕ್ವೀನ್ ನ್ಯೂವ್ ಲುಕ್ : ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ!
ವಿನಯ ಮುದನೂರ್
ಯಾರೇ ನೀನು ಸುಂದರ ಚೆಲುವೆ ಒಬ್ಬಳೆ ನಿಂತಿರುವೆ ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ…. ರಣಧೀರ ಸಿನೆಮಾದ ಈ ಹಾಡು ಚಂದನವನದಲ್ಲಿ ಹೊಸ ಸಂಚಲನ ಮೂಡಿಸಿದ್ದು ಇತಿಹಾಸ. ಕ್ರೇಜಿಸ್ಟಾರ್ ರವಿಂದ್ರನ್, ಮೋಹಕ ನಟಿ ಖುಷ್ಬು ಅದ್ಭುತ ನಟನೆ ಹಾಗೂ ಅದ್ಭುತ ಹಾಡಿಗೆ ತಲೆದೂಗದವರೇ ಇಲ್ಲ. ಇಂದಿಗೂ ಈ ಹಾಡು ಅನೇಕರಿಗೆ ನೆನಪಾಗಿ ಕಾಡುತ್ತಲೇ ಇರುತ್ತದೆ. ಆದರೆ, ವಿಷಯ ಇದಲ್ಲ. ಇಷ್ಟೆಲ್ಲಾ ಪೀಠಿಕೆಗೆ ಕಾರಣ ಸ್ಯಾಂಡ್ ವುಡ್ ನ ಬುಲ್ ಬುಲ್ ರಚಿತಾ ರಾಮ್.
ಹೌದು, ಚಂದನವನದಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಹಸಿರು ಸೀರೆಯುಟ್ಟ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ನಟಿ ರಚಿತಾ ರಾಮ್ ಅವರು ಸೀರೆ ಅಂಗಡಿಯೊಂದರಲ್ಲೇ ಹಸಿರು ಸೀರೆಯುಟ್ಟು ನಗುಮೊಗದ ಫೋಸ್ ನೀಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಆ ಮೂಲಕ ತುಂಡುಡುಗೆ ತೊಟ್ಟು ಕನ್ನಡ ಬಲು ಕಷ್ಟ ಅನ್ನುವ ಫೋಸ್ ರಾಣಿಯರೇ ಹೆಚ್ಚಾಗಿರುವ ಸಂದರ್ಭದಲ್ಲಿ ರಚಿತಾ ರಾಮ್ ವಿಭಿನ್ನ ಎಂಬುದನ್ನು ಸಾರುವ ಮೂಲಕ ಕನ್ನಡಿಗರ ಮನಸೂರೆಗೊಂಡಿದ್ದಾರೆ.
ಸೀರೆ ಧರಿಸಿದ ಸಿಂಪಲ್ ರಾಣಿ ರಚಿತಾ ರಾಮ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ ಲೋಡ್ ಮಾಡಿ ಲವ್ ಯು ಆಲ್ ಎಂದಿದ್ದಾರೆ. ಸ್ಯಾಂಡಲ್ ವುಡ್ ನ ಬುಲ್ ಬುಲ್ ರಚಿತಾಗೆ ಅಪಾರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು ಐ ಟೂ ಎನ್ನುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾರೆ. ಯುವ ಪಡೆಯಂತೂ ರಚಿತಾ ರಾಮ್ ಅವರ ಪ್ರೀತಿಯ ನಡೆಗೆ ಮನಸೋತಿದೆ.