ಪ್ರಮುಖ ಸುದ್ದಿ
ಗೌಡರ ಕೋಟೆಯಲ್ಲಿ JDS ವಿರುದ್ಧ ಗುಡುಗಿದ ರಾಹುಲ್ ಗಾಂಧಿ!
ಹಾಸನ: ಜೆಡಿಎಸ್ ಪಕ್ಷ ಭಾರತೀಯ ಜನತಾ ಪಕ್ಷದ ಬಿಟೀಂ ಇದ್ದಂತೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜೆಡಿಎಸ್ ನಾಯಕರು ನಿರ್ಧಾರಿಸಿದ್ದಾರೆ. ಹಿಂಬಾಗಿಲಿನ ಮೂಲಕ ಬಿಜೆಪಿಗೆ ಸಹಕರಿಸಿದರೆ ಯಾರಿಗೂ ಗೊತ್ತಾಗೋದಿಲ್ಲ ಎಂದು ಅವರು ತಿಳಿದಂತಿದೆ ಎಂದು ಹೇಳುವ ಮೂಲಕ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಜೆಡಿಎಸ್ ನಾಯಕರ ವಿರುದ್ಧ ಗುಡುಗಿದ್ದಾರೆ.
ಹಾಸನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ವೇಳೆ ಗೌಡರ ತವರಲ್ಲೇ ಜೆಡಿಎಸ್ ವಿರುದ್ಧ ರಾಹುಲ್ ಗುಡುಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಆರ್ ಎಸ್ ಎಸ್ ನ ಟೀಂ ಬಿ, ಟೀಂ ಸಿ ಯಾರೇ ಬಂದರೂ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ತಪ್ಪಿಸಲು ಸಾಧ್ಯವಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಆ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಚುನಾವಣೋತ್ತರ ಹೊಂದಾಣಿಕೆಯೂ ದೂರದ ಮಾತು ಎಂಬ ಸಂದೇಶ ರವಾನಿಸಿದ್ದಾರೆ.