ಯೂತ್ ಐಕಾನ್ವಿನಯ ವಿಶೇಷ

ರಾಘವೇಂದ್ರ ಹಾರಣಗೇರಾ ಅವರ ಸಾಹಿತ್ಯ ಮತ್ತು ಬೋಧನಾ ಪಯಣ

ಯುವ ಬರಹಗಾರ ಸಾಯಿ ಇಜೇರಿ ಬರಹ

ರಾಘವೇಂದ್ರ ಹಾರಣಗೇರಾ ಅವರ ಸಾಹಿತ್ಯ ಮತ್ತು ಬೋಧನಾ ಪಯಣ

ಸಮಾಜದ ಸ್ಥಿತ್ಯಂತರಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಅಕ್ಷರಗಳ ಮೂಲಕ ಅವುಗಳಿಗೆ ಜೀವ ತುಂಬುವ ಕೆಲವು ವ್ಯಕ್ತಿಗಳು ಇರುತ್ತಾರೆ. ಅಂತಹ ಅಪರೂಪದ ಪ್ರತಿಭೆಗಳಲ್ಲಿ ರಾಘವೇಂದ್ರ ಹಾರಣಗೇರಾ ಅವರ ಹೆಸರು ಸದಾ ಸ್ಮರಣೀಯ. ಕೇವಲ ಒಬ್ಬ ಉಪನ್ಯಾಸಕರಾಗಿ ಉಳಿಯದೆ, ಅವರು ತಮ್ಮ ಲೇಖನಿಯ ಮೂಲಕ ಸಮಾಜದ ಶಿಲ್ಪಿಯಾಗಿದ್ದಾರೆ.
ಜ್ಞಾನದ ಉಪನ್ಯಾಸಕ, ಅರಿವಿನ ಸೇವೆ
ಗುಲ್ಬರ್ಗಾ ವಿಶ್ವವಿದ್ಯಾಲಯದ ವಿದ್ಯಾಕೇಂದ್ರದಲ್ಲಿ ಸಮಾಜಶಾಸ್ತ್ರದ ಆಳವನ್ನು ಅರಿತ ಹಾರಣಗೇರಾ ಅವರು, ಇಂದು ಜ್ಞಾನದ ದೀವಿಗೆಯಾಗಿ ನಿಂತಿದ್ದಾರೆ. “ಸಮಾಜದ ಶಿಲ್ಪಿ, ಜ್ಞಾನದ ಉಪನ್ಯಾಸಕ, ಹಾರಣಗೇರಾ ಅವರೇ, ನೀವು ಪೀಳಿಗೆಯ ದ್ಯೋತಕ” ಎಂಬ ಸಾಲುಗಳು ಅವರ ವೃತ್ತಿ ಬದ್ಧತೆಯನ್ನು ಸಾರುತ್ತವೆ. ಪಾಠ ಹೇಳುವ ವೃತ್ತಿಯನ್ನು ಕೇವಲ ಒಂದು ಕೆಲಸವಾಗಿ ನೋಡದೆ, ಅರಿವಿನ ಸೇವೆಯಾಗಿ ಸ್ವೀಕರಿಸಿದ್ದಾರೆ. ಅವರ ಪ್ರತಿಯೊಂದು ಮಾತು ವಿದ್ಯಾರ್ಥಿಗಳ ಮನಸುಗಳಿಗೆ ಮುಟ್ಟುವ ಸತ್ಯದ ಕಾವೇರಿಯಂತೆ ಹರಿದು, ತಲೆಮಾರುಗಳಿಗೆ ದಾರಿದೀಪವಾಗುತ್ತಿದೆ.

ಉಪನ್ಯಾಸಕ, ಲೇಖಕ, ಸಾಹಿತಿ, ಪತ್ರಕರ್ತ ಬಹುಮುಖ ಪ್ರತಿಭೆ ರಾಘವೇಂದ್ರ ಹಾರಣಗೇರ.

ಅಕ್ಷರ ಲೋಕದಲ್ಲಿ ಅವರದ್ದು ಬಹುಮುಖ ಪ್ರತಿಭೆ. ಕೇವಲ ಬೋಧನೆಗೆ ಸೀಮಿತವಾಗದೆ, ಅವರು ಸಾಹಿತ್ಯದ ಕೃಷಿಯಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. “ಕವಿತೆಯ ಹಾದಿ, ಪ್ರಬಂಧದ ಕೃಷಿ, ಅಕ್ಷರಗಳಲಿ ಮೂಡಿದೆ ನಿಮ್ಮ ಪ್ರತಿಭಾ ರಸಿ” ಎಂಬುದು ಅವರ ಸೃಜನಾತ್ಮಕತೆಯ ಪ್ರತೀಕ. ಲೇಖನ, ಕವನ ಮತ್ತು ಪ್ರಬಂಧಗಳ ನಿತ್ಯ ರಚನೆಯಲ್ಲಿ ತೊಡಗಿ, ತಮ್ಮ ಅನುಭವ, ನೋಟ ಹಾಗೂ ಚಿಂತನೆಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. ಅವರ ಪ್ರತಿಭೆ ಎಷ್ಟು ಸೂಕ್ಷ್ಮ ಮತ್ತು ಸಜ್ಜನಿಕೆಯದ್ದೆಂದರೆ, ಅವು ನಿರಂತರವಾಗಿ ವಿವಿಧ ದಿನಪತ್ರಿಕೆಗಳ ಪುಟಗಳಲ್ಲಿ ಪ್ರಕಟಗೊಂಡು ಓದುಗರ ಮನಸ್ಸನ್ನು ತಟ್ಟಿವೆ.

ಹಾರಣಗೇರಾ ಅವರ ಬರಹದ ಹೃದಯ ಬಡಿತವೇ ಸಮಾಜ. ಸಮಾಜದಲ್ಲಿನ ಪ್ರತಿಯೊಂದು ನೋವು ಮತ್ತು ನಲಿವಿನ ಮಾತುಗಳು ಅವರ ಲೇಖನಿಯಿಂದ ಹೊರಬರುತ್ತವೆ. ಅವರ ಬರಹದಲಿ ಮಾನವೀಯತೆಯ ಸ್ಪಂದನ ಮತ್ತು ಜೀವನದ ಆಳವಾದ ಅನುಭೂತಿಗಳು ಸದಾ ಮಿಡಿಯುತ್ತಿರುತ್ತವೆ. ಎಂಬಂತೆ, ಅವರು ಕೇವಲ ಘಟನೆಗಳನ್ನು ವಿವರಿಸದೆ, ಅವುಗಳ ಹಿಂದಿನ ಮಾನವೀಯ ನೆಲೆಯನ್ನು ಅನ್ವೇಷಿಸುತ್ತಾರೆ. ಅವರ ಹೆಸರು ಅಕ್ಷರವೇ ಭೂಷಣವಾಗಿದ್ದು, ಅವರು ಸಾಹಿತ್ಯದ ಹಾದಿಯಲ್ಲಿ ಒಂದು ಹೊಸ ಶೋಧನೆಗೆ ಕಾರಣರಾಗಿದ್ದಾರೆ.
ರಾಘವೇಂದ್ರ ಹಾರಣಗೇರಾ ಅವರ ಲೇಖನ ಮತ್ತು ಬೋಧನೆಯ ಪಯಣವು ಕನ್ನಡಮ್ಮನ ಸೇವೆಯಾಗಿ ಸದಾ ಮುಂದುವರೆಯಲಿ. ಅವರ ಬರಹದ ಸಿರಿಯು ಇನ್ನಷ್ಟು ಕಾಲ ಪ್ರಕಾಶಿಸಿ, ಕೋಟ್ಯಂತರ ಓದುಗರ ಮನ ಮುಟ್ಟಿ, ಅವರ ಬದುಕು ಎಂದೆಂದೂ ಪ್ರಕಾಶಿಸಲಿ ಎಂದು ಹಾರೈಸೋಣ.

Oplus_16908288

*ಸಾಯಿಕುಮಾರ ಇಜೇರಿ.

Related Articles

Leave a Reply

Your email address will not be published. Required fields are marked *

Back to top button