‘ಪೊಲೀಸರು ಇಲ್ಲದಿದ್ದರೆ ನಮ್ಮ ಕೈಯಲ್ಲಿ ತಲವಾರ್ ಇರುತ್ತಿತ್ತು’ – RSS ಮುಖಂಡನ ಕಿಡಿ
ಹುಬ್ಬಳ್ಳಿ: ನಾವೆಲ್ಲಾ ಕಾನೂನು, ಸೈನಿಕರು ಮತ್ತು ಪೊಲೀಸರನ್ನು ನಂಬಿಕೊಂಡಿದ್ದೇವೆ. ನ್ಯಾಯವಾಗಿ ಅವರ ಮೇಲೆ ನಂಬಿಕೆ ಇರಬೇಕು. ಆದರೆ, ಪೊಲೀಸರು ಇಲ್ಲ ಅಂದಿದ್ದರೆ ನಮ್ಮ ಕೈಯಲ್ಲಿ ಧ್ವಜದ ಬದಲು ತಲವಾರ್ ಇರುತ್ತಿತ್ತು. ಈವತ್ತು ನಮ್ಮ ಕೈಯಲ್ಲಿ ಬರೀ ಕಲ್ಲಿದ್ದರೂ ಸಹ ಇಲ್ಲಿನ ಯಾವ ಬಿಲ್ಡಿಂಗಿನ ಗ್ಲಾಸ್ ಗಳು ಸಹ ಉಳಿಯುತ್ತಿರಲಿಲ್ಲ ಎಂದು ಆರ್ ಎಸ್ ಎಸ್ ಮುಖಂಡ ರಘುನಂದನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ನಗರದ ದುರ್ಗದ ಬೈಲ್‌ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ರಘುನಂದನ್ ಮಾತನಾಡಿದರು. ಪೊಲೀಸರು ಕಾನೂನನ್ನು ಸರಿಯಾಗಿ ಪಾಲನೆ ಮಾಡಬೇಕು. ನಾವೇಕೆ ಕಲ್ಲು ಕೈಗೆತ್ತಿಕೊಂಡಿಲ್ಲ ಅಂದರೆ ನಮಗೆ ಪೊಲೀಸರು ಮತ್ತು ಕಾನೂನಿನ ಮೇಲೆ ನಂಬಿಕೆ, ಗೌರವ ಇದೆ. ನಮ್ಮ ನಂಬಿಕೆ ಹುಸಿಯಾದರೆ ಯಾವ ಪೊಲೀಸರು, ದೇಶ ವಿರೋಧಿಗಳು ಉಳಿಯೋದಿಲ್ಲ ಎಂದರು. ಸಭೆಯಲ್ಲಿ ಸಂಸದ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು. ಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹೀಗಾಗಿ, ಈ ವಿವಾದಾತ್ಮಕ ಹೇಳಿಕೆ ಮತ್ಯಾವ ತಿರುವ ಪಡೆದುಕೊಳ್ಳಲಿದೆ. ಪೊಲೀಸರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.