ಪ್ರಮುಖ ಸುದ್ದಿ

GST ಬಡವರ ಟ್ಯಾಕ್ಸ್ ಎನ್ನುವುದೇ ಅಪ್ಪಟ ಪಪ್ಪು ಜೋಕ್ – ದೊಡ್ಡಪ್ಪಗೌಡ ನರಬೋಳಿ ಲೇವಡಿ

ಟ್ಯಾಕ್ಸ್ ಕಟ್ಟುವವರು ಬಡವರೇ..? ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಪ್ರಶ್ನೆ

ಕಲಬುರ್ಗಿಃ ಗಬ್ಬರ್ ಸಿಂಗ್ ಹೇಗೆ ಬಡವರ ಹಣ ಲೂಟಿ ಮಾಡುತ್ತಿರುತ್ತಾನೋ ಹಾಗೇ ಪ್ರಧಾನಿ ಮೋದಿಜೀ ದೇಶದಲ್ಲಿ ಬಡವರಿಂದ ಟ್ಯಾಕ್ಸ್ ಲೂಟಿ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕೊಪ್ಪಳದಲ್ಲಿ ಹೇಳಿದ್ದಾರೆ. ರಾಹುಲ್ ಹೇಳಿಕೆ ಅಪ್ಪಟ ಪಪ್ಪು ಜೋಕ್ ಎಂದರೆ ತಪ್ಪಿಲ್ಲ ಎಂದು ಕಲಬುರ್ಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ , ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಬೋಳಿ ಅವರು ವಿನಯವಾಣಿ ಗೆ ತಿಳಿಸಿದ್ದಾರೆ.

ಬಡವರು ಎಂದ ಮೇಲೆ ಮುಗಿಯಿತು ಟ್ಯಾಕ್ಸ್ ಹೇಗೆ ಕಟ್ಟುತ್ತಾರೆ. ಟ್ಯಾಕ್ಸ್ ಕಟ್ಟುವ ಸಾಮರ್ಥ್ಯ ಇದ್ದಲ್ಲಿ ಅವರು ಬಡವರಾಗಲು ಹೇಗೆ ಸಾಧ್ಯ.? ನಿಯಮಾನುಸಾರ ಜಾಸ್ತಿ ಹಣ ಗಳಿಕೆ ಹೊಂದಿದವರು ಅದಕ್ಕನುಗುಣವಾಗಿ  ಟ್ಯಾಕ್ಸ್ ಭರಿಸುವುದು ಕಾನೂನು.

ಟ್ಯಾಕ್ಸ್ ಕಟ್ಟುತ್ತಿದ್ದಾರೆ ಅಂದರೆ ಅವರು ಬಡತನ ರೇಖೆ ದಾಟಿ ಶ್ರೀಮಂತಿಕೆ ರೇಖೆ ಮುಟ್ಟಿದ್ದಾರೆ ಎಂದರ್ಥ. ಇಷ್ಟು ಸಾಮಾನ್ಯ ಜ್ಞಾನ ಸನ್ಮಾನ್ಯ ರಾಹುಲ್ ಗಾಂಧಿಯವರಿಗಿಲ್ಲವೇ..? ಎಂದು ಪ್ರಶ್ನಿಸಿದ ಅವರು, ಇದು ಪಕ್ಕಾ ಪಪ್ಪು ಹೇಳಿಕೆಯೇ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಹಣವಿಲ್ಲದ ಬಡವರು ಟ್ಯಾಕ್ಸ್ ಕಟ್ಟುವ ಅವಶ್ಯಕತೆ ಬರುವದಿಲ್ಲ. ಕಾರಣ ಬಡವರಾರು ಪ್ಯಾಕಿಂಗ್ , ಬ್ರ್ಯಾಂಡೆಡ್ ಎಂದು ಕಿರಾಣಿ ಸಾಮಾಗ್ರಿ ಖರೀಧಿಸಲ್ಲ. ಪ್ಯಾಕಿಂಗ್ ಮಾಡದ ಓಪನ್ ಮಾರ್ಕೇಟ್ ನಲ್ಲಿ 1 ಕೆಜಿ, ಅರ್ಧ ಕೆಜಿ ಧಾನ್ಯ, ಇತರೆ ಸಾಮಾಗ್ರಿ ತೆಗೆದುಕೊಳ್ಳುವವರು. ಚಿಲ್ಲರೆ ವ್ಯಾಪಾರಿಗಳ ಹತ್ತಿರ ಕಿರಾಣಿ ಸಾಮಾಗ್ರಿ ಖರೀಧಿಸಿದರೆ ಅದಕ್ಕೆ ಜಿಎಸ್ಟಿ ಲಾಘು ಆಗುವದಿಲ್ಲ. ಜಿಎಸ್ಟಿ ಕಾನೂನಲ್ಲಿ ಹಲವಾರು ನಿಯಮಗಳಿವೆ.

ಬಡವರಾರು ಫೈವಸ್ಟಾರ್ ಹೊಟೇಲ್ಗೆ ಹೋಗಲ್ಲ. ಅವರ ಮಿತಿಯೊಳಗೆ ಬದುಕು ಸಾಗಿಸುವರಾಗಿದ್ದಾರೆ. ಯಾರು ಹೈಫೈ ಜೀವನ ಸಾಗಿಸುತ್ತಾರೆ ಅವರು ಅದಕ್ಕೆ ತಕ್ಕ ಹಾಗೇ ಟ್ಯಾಕ್ಸ್ ಕಟ್ಟಲೇಬೇಕಾಗುತ್ತದೆ.  ಟ್ಯಾಕ್ಸ್ ಮೂಲಕ ಬಂದ ದುಡ್ಡು ಬಡವರ ಅಭಿವೃದ್ಧಿಗೆ ಬಳಸಲಾಗುತ್ತದೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷರಾದ ರಾಹುಲ್ ತಿಳಿದು ಮಾತನಾಡಬೇಕು.

ಮುಂದುವರೆದು ಮಾತನಾಡಿದ ಅವರು, ಸಿಎಂ ಸಿದ್ರಾಮಯ್ಯನವರ ನೋಡಿ ಕಲಿಯುವಂತೆ ಹೇಳುವ ರಾಹುಲ್ ಗಾಂಧಿಯವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಸಿಎಂ ಅವರ ಮರ್ಡರ್ ರಾಜಕೀಯ, ಕಮಿಷನ್ ದಂಧೆ, ಧರ್ಮ, ಜಾತಿಗಳನ್ನು ಒಡೆದು ಆಳುವದನ್ನು ಕಲಿಯಬೇಕೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಅಂತಹ ಸ್ಥಿತಿ ನಮ್ಮ ಪಕ್ಷಕ್ಕಿಲ್ಲ. ನಮ್ಮದು ದೇಶಾಭಿಮಾನ, ಸ್ವಾಭಿಮಾನ ಸದಾ ದೇಶದ ಸುಭದ್ರತೆಯ ಚಿಂತನೆಯ ಪಕ್ಷ. ಸಬಕಾ ಸಾಥ್ ಸಬಕಾ ವಿಕಾಸ ಧ್ಯೇಯದೊಂದಿಗೆ ದೇಶಾಭಿವೃದ್ಧಿಯಡೆಗೆ ಸಾಗುವ ಪ್ರಧಾನ ಸೇವಕರ ಪಕ್ಷ ಎಂದು ತಿರುಗೇಟು ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button