ಪ್ರಮುಖ ಸುದ್ದಿ
ಪೋಷಕರೇ ಗಮನಿಸಿ: ರಾಜ್ಯದಲ್ಲಿ ಮಕ್ಕಳನ್ನೇ ಹೆಚ್ಚು ಬಾಧಿಸುತ್ತಿದೆ ಡೆಂಗ್ಯೂ!

ರಾಜ್ಯದಲ್ಲಿ 1 ರಿಂದ 18 ವರ್ಷದವರಲ್ಲಿ ಹೆಚ್ಚಾಗಿ ಡೆಂಗ್ಯೂ ಪತ್ತೆಯಾಗುತ್ತಿದ್ದು ಪೋಷಕರು ಎಚ್ಚರವಹಿಸಬೇಕು ಎಂದು ಕರ್ನಾಟಕ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 8658 ಪ್ರಕರಣಗಳು ದಾಖಲಾಗಿವೆ. ಡೆಂಗ್ಯೂಗೆ 7 ಜನ ಮೃತಪಟ್ಟಿದ್ದಾರೆ. ಆದರೆ ಕಳೆದ 24 ಗಂಟೆಯಲ್ಲಿ 1 ವರ್ಷದಿಂದ 18 ವರ್ಷದೊಳಗಿನ 154 ಮಕ್ಕಳಿಗೆ ಡೆಂಗ್ಯೂ ಬಂದಿದೆ.
ಒಂದು ವಾರದ ಹಿಂದೆ 1 ವರ್ಷದಿಂದ 18 ವರ್ಷದೊಳಗಿನ 44 ಮಕ್ಕಳಿಗೆ ಡೆಂಗ್ಯೂ ಬಾಧಿಸಿತ್ತು. ಜನವರಿಯಿಂದ ಇಲ್ಲಿಯವರೆಗೆ ಒಟ್ಟು 2395 ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ.