ಏಕಾಏಕಿ ಕಾಂಗ್ರೆಸ್ ಯುವರಾಜ ಮಂಗಳೂರು ಸರ್ಕ್ಯೂಟ್ ಹೌಸ್ ಗೆ ಹೋರಟಿದ್ದೇಕೆ?!
ಕರಾವಳಿ ಪ್ರವಾಸದಲ್ಲಿರುವ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮದ್ಯಾನದ ವೇಳೆ ಮೀನೂಟ ಸೇವಿಸಿದ್ದಾರೆ. ಇಂದು ಸಂಜೆ ರಾಹುಲ್ ಗಾಂಧಿ ಗೋಕರ್ಣೇಶ್ವರ ಭೇಟಿ ಕಾರ್ಯಕ್ರಮವಿದೆ. ಆದರೆ, ಮೀನೂಟ ಸೇವಿಸಿ ದೇಗುಲ ದರ್ಶನಕ್ಕೆ ಮುಂದಾಗಿದ್ದಾರೆ ಎಂಬ ಸಂದೇಶಗಳು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡ ತೊಡಗಿವೆ. ಈ ಬಗ್ಗೆ ಮಾಹಿತಿ ಪಡೆದಾಕ್ಷಣ ಪ್ಲಾನ್ ಬದಲಾಯಿಸಿ ಮಂಗಳೂರಿನ ಸರ್ಕ್ಯೂಟ್ ಹೌಸ್ ಗೆ ತೆರಳಿದ್ದಾರೆನ್ನಲಾಗಿದೆ.
ಸಂಜೆ ಹೊತ್ತಿಗೆ ಸ್ನಾನ ಮುಗಿಸಿ ದೇಗುಲಕ್ಕೆ ತೆರಳಲು ರಾಹುಲ್ ಮುಂದಾಗಿದ್ದಾರೆ ಎಂಬ ಮಾಹಿತಿ ಮತ್ತೆ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗಿದೆ. ಹೀಗಾಗಿ, ರಾಹುಲ್ ಗಾಂಧಿ ಮೀನೂಟ ಸೇವಿ ದೇಗುಲಕ್ಕೆ ಹೊರಟಿದ್ದರಾ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಆತ್ಮವಿಮರ್ಶೆಗೊಳಗಾದ ರಾಹುಲ್ ಸ್ನಾನಕ್ಕಾಗಿಯೇ ಮಂಗಳೂರು ಸರ್ಕ್ಯೂಟ್ ಹೌಸ್ ಗೆ ತೆರಳಿದರಾ ಎಂಬುದೀಗ ಪ್ರಶ್ನೆಯಾಗಿಯೇ ಉಳಿದಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮೀನುಂಡು ಧರ್ಮಸ್ಥಳಕ್ಕೆ ತೆರಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ, ತಕ್ಷಣಕ್ಕೆ ಎಚ್ಚೆತ್ತುಕೊಂಡ ರಾಹುಲ್ ಸ್ನಾನ ಮುಗಿಸಿ ದೇಗುಲ ದರ್ಶನದ ಮೂಲಕ ಸಾಫ್ಟ್ ಹಿಂದುತ್ವದ ಹೆಜ್ಜೆ ಇಟ್ಟಿದ್ದಾರೆ. ಆದರೂ, ರಾಹುಲ್ ನಡೆ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.