ಕಥೆ

ಯಾರು ಶ್ರೇಷ್ಠರು.? ಸಣ್ಣ ಕಥೆ ಅದ್ಭುತ ಸಂದೇಶ

ದೊಡ್ಡವರಾರು?

ಒಂದು ಸಾಂಕೇತಿಕ ಕಥೆ. ಒಮ್ಮೆ ನಾಲ್ಕು ಜನರು ನೌಕೆಯಲ್ಲಿ ಕುಳಿತು ಹೊರಟರು. ಅವರಲ್ಲಿ ಒಬ್ಬ ಸಿರಿವಂತನಿದ್ದ. ಇನ್ನೊಬ್ಬ ವಿದ್ಯಾವಂತ. ಮತ್ತೊಬ್ಬ ಸ್ಜಕ್ತಿವಂತ. ಮಗದೊಬ್ಬ ರೂಪವಂತ. ಪ್ರತಿಯೊಬ್ಬರೂ ತಾವೇ ‘ಶ್ರೇಷ್ಠರು’ ಎಂದು ಒಳಗೊಳಗೇ ಭಾವಿಸಿ ಬೀಗುತ್ತಿದ್ದರು. ಇನ್ನೊಬ್ಬರನ್ನು ಕಡೆಗಣಿಸುತ್ತಿದ್ದರು.

ಅಷ್ಟರಲ್ಲಿ ನೌಕೆಯು ಸಾಗರದ ಮಧ್ಯಭಾಗ ತಲುಪಿತು. ಆಕಸ್ಮಿಕವಾಗಿ ಬಿರುಗಾಳಿ ಬೀಸಿ ನೌಕೆ ಬುಡಮೇಲಾಗುವಂತಾಯಿತು. ಭಯಗೊಂಡ ನಾಲ್ವರೂ ‘ನಮ್ಮನ್ನು ಕಾಪಾಡು’ ಎಂದು ಜಲದೇವತೆಯನ್ನು ಪ್ರಾರ್ಥಿಸಿದರು.

ಇವರ ಮನೋಗತವನ್ನೆಲ್ಲ ತಿಳಿದಿದ್ದ ಜಲದೇವತೆ ಹೇಳಿದಳು. “ನಿಮ್ಮಲ್ಲಿ ಯಾರು ಶ್ರೇಷ್ಠರೋ, ಅವರು ಉಳಿದವರನ್ನೆಲ್ಲ ಕಾಪಾಡಿ!” ನಾಲ್ವರೂ ಒಟ್ಟಾಗಿ ಹೇಳಿದರು, “ನಾವು ಯಾರೂ ಶ್ರೇಷ್ಠರಲ್ಲ, ದೊಡ್ಡವರಲ್ಲ. ನೀನೇ ದೊಡ್ಡವಳು, ದಯಾಮಯಿ ನಮ್ಮನ್ನು ಕಾಪಾಡು!” “ಹಾಗಾದರೆ ನೀವು ಯಾರನ್ನೂ ದ್ವೇಷಿಸದೇ ಪರಸ್ಪರ ಪ್ರೀತಿಯಿಂದಿರಿ” ಎಂದು ಹೇಳಿ ಜಲದೇವತೆಯು ಅವರನ್ನು ಸಾಗರದಿಂದ ಪಾರು ಮಾಡಿ ಸಂರಕ್ಷಿಸಿದಳು!.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button