ದೇವಸ್ಥಾನಕ್ಕೆ ನುಗ್ಗಿದ ನೀರು: ಮುಸ್ಲಿಂರಿಂದ ಸ್ವಚ್ಛತಾ ಕಾರ್ಯ
ಮಳೆ ಅವಾಂತರಕ್ಕೆ ಸಿಲಿಕಾನ್ ಸಿಟಿ ತಲ್ಲಣ
ಬೆಂಗಳೂರ: ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ವಿಲ್ಸನ್ ಗಾರ್ಡನ್ ಹತ್ತಿರದ ವಿನಾಯಕ ದೇವಸ್ಥಾನಕ್ಕೆ ನುಗ್ಗಿದ ಮಳೆ ನೀರು ತೆಗೆದು ಸ್ವಚ್ಛಗೊಳಿಸುವಲ್ಲಿ ಮುಸ್ಲಿಂ ಬಾಂಧವರು ನೆರವು ನೀಡುವ ಮೂಲಕ ಸಹೋದರ ಭ್ರಾತೃತ್ವ ಮೆರೆದರು.
ಸೋಮವಾರ ಇಡಿ ರಾತ್ರಿ ಸುರಿದ ಮಳೆಯಿಂದಾಗಿ ಬೆಂಗಳೂರ ನಗರ ಅಕ್ಷರಸಹಃ ತಲ್ಲಣಗೊಂಡಿದೆ. ರಾತ್ರಿ ಹನ್ನೊಂದು ಹನ್ನೊಂದುವರೆಗೆ ಶುರುವಾದ ಮಳೆ ರಾತ್ರಿಯಿಡಿ ಸುರಿದಿದ್ದು, ಹಲವು ನಗರಗಳ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಕೆರೆಯಂತಾಗಿವೆ. ಅಲ್ಲದೆ ನೀರಲ್ಲಿ ಹಲವು ಕ್ರಿಮಿ ಕೀಟಗಳು ಸೇರಿದಂತೆ ಹಾವುಗಳು ತೇಲಿ ಬರುತ್ತಿವೆ. ಹೀಗಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇಡಿ ದೇಶ ಸ್ವಾತಂತ್ರ್ಯ ಸಂಭ್ರಮದಲ್ಲಿ ಮುಳಿಗಿದ್ದರೆ, ಬೆಂಗಳೂರಿನ ನಿವಾಸಿಗರು ಮಾತ್ರ ರಾತ್ರಿ ಸುರಿದ ಮಳೆಯಿಂದ ತೊಂದರೆ ಅನುಭವಿಸುವಂತಾಗಿದೆ. ಸಾಕಷ್ಟು ಮನೆಗಳು ಜಲಾವೃತಗೊಂಡಿದ್ದು, ಬದುಕು ಬೀದಿಗೆ ಬಂದಿದೆ. ಹೀಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಎಸ್.ಟಿ.ಬೆಡ್ ಲೇಔಟ್, ಹಲಸೂರು, ಜೆ.ಪಿ.ನಗರ, ಹೆಚ್.ಎಸ್.ಆರ್.ಲೇಔಟ, ಕೋರಮಂಗಲ ಭಾಗ ಮತ್ತು ಮಾರೆನ್ಸ್ ಶಾಲೆ, ಐಟಿ ಕಚೇರಿ, ನಮ್ ರೇಡಿಯೋ ಕಚೇರಿಗೆ ನುಗ್ಗಿದ ನೀರು, ಸೇರಿದಂತೆ ಹಲವು ನಗರ ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ರಸ್ತೆ ಮೇಲೆ 3ರಿಂದ 4 ಅಡಿ ನೀರು ನಿಂತಿದೆ.
ಒಟ್ಟಾರೆ ಬೆಂಗಳೂರಿನ ಜನತೆಗೆ 71 ನೇ ಸ್ವಾತಂತ್ರ್ಯದ ದಿನಾಚರಣೆಗೆ ಮಳೆ ಅಡೆತಡೆ ತಂದಂತಾಗಿದೆ. ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ಜನರು ಸಂಕಷ್ಟದಲ್ಲಿ ಮುಳುಗಿದ್ದಾರೆ. ಸಿಲಿಕಾನ್ ಸಿಟಿ ನೀರಿನಲ್ಲಿ ಮುಳುಗಡೆಯಾಗಿದ್ದು, ಸಾಕಷ್ಟು ತೊಂದರೆಯಾಗುತ್ತಿದ್ದು, ಬಸ್, ಕಾರು ನೀರಲ್ಲಿ ಮುಳುಗಿ ನಿಂತಿವೆ. ಹಲವಡೆ ಬೈಕ್‍ಗಳು ನೀರಲ್ಲಿ ಮುಳುಗಿದ್ದು, ಅವುಗಳನ್ನು ಹೊರ ತೆಗೆಯಲು ಬಾರದಷ್ಟು ನೀರು ನಂತಿವೆ.
ಕೆಲ ತಗ್ಗು ಪ್ರದೇಶದ ನಗರದಲ್ಲಿ ವಾಸವಿದ್ದ ಜನರ ಸಂಕಷ್ಟ ಕೇಳ ತೀರದು, ಅವರಲ್ಲಿಗೆ ತಲುಪುವುದು ಕಷ್ಟವಇದೆ ಎನ್ನಲಾಗಿದೆ. ಬಿಬಿಎಂಪಿ ಸಿಬ್ಬಂದಿ ಸಮರ್ಪಕ ಪರಿಹಾರಕ್ಕೆ ತೊಡಕಾಡುತ್ತಿದ್ದು, ಕ್ರಮಕ್ಕೆ ಮುಂದಾಗಿದೆ. ಆದಾಗ್ಯು ಜನರ ಕಷ್ಟಕ್ಕೆ ನೆರವು ನೀಡಲು ಅಸಾಧ್ಯ ವಾತಾವರಣ ಮೂಡಿದೆ. ಎಲ್ಲೆಂದರಲ್ಲಿ ನೀರು ತುಂಬಿ ಹರಿಯುತ್ತಿದ್ದು, ಜನರನ್ನು ಸಂಪರ್ಕಿಸಲು ಪರದಾಡುವಂತಾಗಿದೆ ಎಂದು ತಿಳಿದು ಬಂದಿದೆ.