ಪ್ರಮುಖ ಸುದ್ದಿ
ಕೊರೊನಾ ವೈರಸ್ ಗೆ ಮೋದಿ ಶರಣಾದಂತಿದೆ – ರಾಹುಲ್ ಟೀಕೆ
ಕೊರೊನಾ ತಡೆಗಟ್ಟುವಲ್ಲಿ ಮೋದಿ ವಿಫಲ – ರಾಹುಲ್ ಆರೋಪ
ನವದೆಹಲಿಃ ಮಹಾಮಾರಿ ಕೋವಿಡ್ -19 ಜಾಗತಿಕವಾಗಿ ಅತಿ ವೇಗದಲ್ಲಿ ಹರಡುತ್ತಿದ್ದು, ವೈರಸ್ ಹರಡದಂತೆ ತಡೆಗಟ್ಟುವಲ್ಲಿ ಪ್ರಧಾನಿ ಮೋದಿಯವರು ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟ್ ಮೂಲಕ ಆರೋಪಿಸಿದ್ದಾರೆ.
ದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಸೋಂಕಿತರ ಸಂಖ್ಯೆ ದಾಟಿದ್ದು, ಸೋಂಕು ಹರಡದಂತೆ ತಡೆಯಲು ಸಮರ್ಪಕ ಯೋಜನೆಗಳು ರೂಪಿಸುವಲ್ಲಿ ಕೇಂದ್ರ ಸರ್ಕಾರ ವೈಫಲ್ಯತೆ ಎದ್ದು ಕಾಣುತ್ತಿದೆ.
ದೇಶದ ಜನ ಸಂಕಷ್ಟದಲ್ಲಿದ್ದಾರೆ. ಮೋದಿಯವರು ವೈರಸ್ ಗೆ ಶರಣಾದಂತೆ ಕಾಣುತ್ತಿದೆ. ಸಾಂಕ್ರಮಿಕ ರೋಗದ ವಿರುದ್ಧ ಹೋರಾಡುವಲ್ಲಿ ವಿಫಲವಾಗಿದ್ದು, ಮೌನವಹಿಸಿರುವದು ಅವರ ಶರಣಾಗತಿ ತೋರುತ್ತದೆ ಎಂದು ಟ್ವಿಟರ್ ಮೂಲಕ ರಾಹುಲ್ ಟೀಕಿಸಿದ್ದಾರೆ.