ರಾಹುಲ್ ಗಾಂಧಿ ಸ್ವಾಗತಿಸಲು ದಿಡೀರನೆ ಜನ್ಮತಾಳಿದ ಗಿಡಗಳು.!
ರಾಹುಲ್ ಗಾಂಧಿಗೆ ಹಸಿರು ಗಿಡಗಳ ಆಹ್ವಾನ
ಕಲಬುರ್ಗಿಃಜಿಲ್ಲೆಯ ಜೇವರ್ಗಿ ತಾಲೂಕಿಗೆ ಇದೇ 12-13 ರಂದು ಕಾಂಗ್ರೆಸ್ ಪಕ್ಷದ ರಾಷ್ಟ್ರಧ್ಯಕ್ಷ ರಾಹುಲ್ ಗಾಂಧಿ ಅಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಹೆದ್ದಾರಿ ಮಾರ್ಗ ಮಧ್ಯದಲ್ಲಿ ಈ ಮೊದಲೇ ಬೆಳೆದಂತೆ ಟೆಂಗಿನ ಗಿಡಮರಗಳನ್ನು ನೆಡಲಾಗುತ್ತಿದೆ.
ಇಲ್ಲಿನ ಶಾಸಕ ಅಜೇಯ ಸಿಂಗ್ ಅವರು ಈ ಕಾರ್ಯವನ್ನು ಮುತುರ್ವಜಿವಹಿಸಿ ಮಾಡಲಾಗುತ್ತಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಬರದನಾಡಲ್ಲಿ ಕೃತಕ ಮಾರ್ಗ ಅನುಸರಿಸಿ ದಿಢೀರನೆ ಹಸಿರು ಬೆಳೆಸಲು ನಿಂತ ಶಾಸಕರ ಕಾರ್ಯಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ರೂ. ದುಡ್ಡು ಖರ್ಚು ಮಾಡಿ ರಡಿಮೇಡ್ ಹಸಿರುಕರಣಕ್ಕೆ ಮುಂದಾಗಿರುವುದು ಎಷ್ಟರಮಟ್ಟಿಗೆ ಸರಿ. ಕ್ಷೇತ್ರದ ಅಭಿವೃದ್ಧಿಗೆ ಹಸಿರು ಬಹುಮುಖ್ಯವಾಗಿದ್ದು, ಕ್ಷೇತ್ರದಲ್ಲಿ ಅರಣ್ಯ ಬೆಳೆಸುವ ಕಾರ್ಯ ಮಾಡಲಿಲ್ಲ ಈಗ ಎಐಸಿಸಿ ಅಧ್ಯಕ್ಷರು ಕ್ಷೇತ್ರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ತಮ್ಮ ನಾಯಕರಿಗೆ ಇಡಿ ಕ್ಷೇತ್ರವನ್ನು ಸುಂದರಗೊಳಿಸಿ ತೋರುವ ಕೆಲಸ ಮಾಡಲಿಲ್ಲವೆಂದು ಬಿಜೆಪಿ ಕಾರ್ಯಕರ್ತು ಆರೋಪ ಕೇಳಿಬರುತ್ತಿದೆ.
ಒಂದೆರಡು ಜನ ಒಮ್ಮಿಂದೊಮ್ಮೆಲೇ ನಡು ರಸ್ತೆಯಲ್ಲಿ ಗಿಡ ಮರ ಬೆಳೆದು ನಿಂತಿರುವುದು ಕಂಡು ಆಶ್ಚರ್ಯದ ಜೊತೆಗೆ ಆನಂದವು ವ್ಯಕ್ತಪಡಿಸುತ್ತಿದ್ದಾರೆ.