ಪ್ರಮುಖ ಸುದ್ದಿ
ಮೋದಿ ರೀಯರ್ ವೀವ್ ಮಿರರ್ ನೋಡಿ ಗಾಡಿ ಓಡಿಸ್ತಾರೆ – ರಾಹುಲ್ ಗಾಂಧಿ
ಹೊಸಪೇಟೆ : ಪ್ರಧಾನಿ ನರೇಂದ್ರ ಮೋದಿ ರೀಯರ್ ವೀವ್ ಮಿರರ್ ನೋಡಿ ವಾಹನ ಚಲಾಯಿಸುತ್ತಾರೆ. ಪ್ರತಿಸಲ ಹಿಂದಿನ ಕಾಂಗ್ರೆಸ್ ಆಡಳಿತದ ನೆಪ ಹೇಳುತ್ತಾರೆ. ಹೀಗೆ ಹಿಂದಿನ ನೋಟ ಕಾಣುವ ಮಿರರ್ ನೋಡಿ ವಾಹನ ಚಲಾಯಿಸದರೆ ಅಪಘಾತ ಗ್ಯಾರಂಟಿ. ಗುಂಡಿಗೆ ಬೀಳುವುದು ಖಚಿತ ಎಂದು ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ನಗರದಲ್ಲಿ ನಡೆದ ಜನಾಶೀರ್ವಾದ ಸಮಾವೇಶ ಉದ್ಘಾಟಿಸಿ ರಾಹುಲ್ ಮಾತನಾಡಿದರು. ಹಿಂದಿನ ನೋಟದ ಮಿರರ್ ನೋಡಿಯೇ ಮೋದಿ ಅವರು ಗಬ್ಬರ ಸಿಂಗ್ ಟ್ಯಾಕ್ಸ್ ಹಾಕಿದ್ದಾರೆ. ನ್ಯೋಟ್ ಬ್ಯಾನ್ ಕ್ರಮದ ಮೂಲಕ ಸಾಮಾನ್ಯ ಜನರನ್ನು ಸಂಕಟಕ್ಕೆ ಸಿಲುಕಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.