ಮತ್ತೆ ರಾಹುಲ್ ಗಾಂಧಿ ಬಾಯಿಂದ ಹೊರ ಹೊಮ್ಮಿತು ಸಿದ್ಧರಾಮಯ್ಯ ಭಾಷಣ!?
ಮೈಸೂರು: ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಬಿಜೆಪಿಯೊಂದಿಗೆ ಸೈದ್ಧಾಂತಿಕ ಹೋರಾಟ ಮಾಡುತ್ತಿದೆ. ಕಾಂಗ್ರೆಸ್ ನಾಯಕರೆಲ್ಲರೂ ಒಂದಾಗಿದ್ದು ಚುನಾವಣೆಗಾಗಿ ಕಾಯುತ್ತಿದ್ದೇವೆ. ಬಿಜೆಪಿಗೆ ನಮ್ಮ ಶಕ್ತಿ ತೋರಿಸಬೇಕಿದೆ. ಕರ್ನಾಟಕ ಗೆದ್ದ ಬಳಿಕ ದೇಶದಲ್ಲೂ ಅಧಿಕಾರ ಹಿಡಿಯಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮೈಸೂರಿನ ಮಹಾರಾಜ ಮೈದಾನದಲ್ಲಿ ಜನಾಶಿರ್ವಾದ ಯಾತ್ರೆ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು. ಇದೇ ವೇಳೆ ಜೆಡಿಎಸ್ ಅಂದರೆ ಜನತಾದಳ ಸೆಕುಲರ್ . ಈ ಚುನಾವಣೆಯಲ್ಲಿ ಜನತಾದಳ ಸಂಘ ಪರಿವಾರ ಆಗಿ ಬದಲಾಗಿದೆ. ಜೆಡಿಎಸ್ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬುದನ್ನು ಜೆಡಿಎಸ್ ವರಿಷ್ಠರು ಸ್ಪಷ್ಟಪಡಿಸಬೇಕು ಎಂದು ಪುನರುಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಜೈಲಿಗೆ ಹೋಗಿ ಬಂದಿರುವ ಮಾಜಿ ಮುಖ್ಯಮಂತ್ರಿ ಹಾಗೂ ನಾಲ್ವರು ಮಾಜಿ ಸಚಿವರನ್ನು ಜೊತೆಗಿಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
[textmarker color=”B53F6B” type=”background color”]ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಈ ಹಿಂದಿನ ಟೀಕಾಸ್ತ್ರಗಳನ್ನೇ ಬಳಸಿದರು. ರಾಹುಲ್ ಗಾಂಧಿ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನಿಲುವು ವ್ಯಕ್ತವಾಯಿತು. ಬಹುತೇಕ ಭಾಷಣ ಸಿದ್ಧರಾಮಯ್ಯನವರ ಭಾಷಣ ಹಿಂದಿಗೆ ಅನುವಾದಿಸದಂತೆ ಭಾಸವಾಗುತ್ತಿತ್ತು. ಅಷ್ಟರ ಮಟ್ಟಿಗೆ ಸಿಎಂ ಸಿದ್ಧರಾಮಯ್ಯ ಅವರು ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿಗೆ ಮೋಡಿ ಮಾಡಿದ್ದಾರೆ ಎಂಬ ಅಭಿಪ್ರಾಯ ಹಿರಿಯ ಪತ್ರಕರ್ತರಿಂದ ವ್ಯಕ್ತವಾಯಿತು.[/textmarker]