ಪ್ರಮುಖ ಸುದ್ದಿ

ಗಣೇಶ ಹಬ್ಬ : ಕಲಬುರಗಿ to ಬೆಂಗಳೂರು ವಿಶೇಷ ರೈಲು ಸಂಚಾರ

ಕಲಬುರಗಿ : ಗಣೇಶ ಚತುರ್ಥಿ ಸಂದರ್ಭದಲ್ಲಿ ಜನ ಸಂಚಾರ ಹೆಚ್ಚುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ಬೆಂಗಳೂರು ಟು ಕಲಬುರಗಿ ನಡುವೆ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ಆಗಸ್ಟ್ 30ರಂದು ಯಲಹಂಕ ರೈಲು ನಿಲ್ದಾಣದಿಂದ ಸಂಜೆ 5 ಗಂಟೆಗೆ ವಿಶೇಷ ರೈಲು ಹೊರಡಲಿದೆ. ಆಗಸ್ಟ್ 31ರ ಶನಿವಾರ ಬೆಳಗ್ಗೆ 4.20ಕ್ಕೆ ಕಲಬುರಗಿಗೆ ತಲುಪಲಿದೆ. ಸೆಪ್ಟೆಂಬರ್ 2ರ ಸೋಮವಾರ ರಾತ್ರಿ 8.30ಕ್ಕೆ ಕಲಬುರಗಿಯಿಂದ ಹೊರಡುವ ರೈಲು ಮಂಗಳವಾರ ಬೆಳಗ್ಗೆ 7.25ಕ್ಕೆ ಯಲಹಂಕಕ್ಕೆ ತಲುಪಲಿದೆ. ಬೆಂಗಳೂರು-ಬೆಳಗಾವಿ, ಮೈಸೂರು-ವಿಜಯಪುರ ನಡುವೆಯೂ ವಿಶೇಷ ರೈಲು ಸಂಚಾರಿಸಲಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸೂಚನೆಯಂತೆ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ.

 

Related Articles

Leave a Reply

Your email address will not be published. Required fields are marked *

Back to top button