ಪ್ರಮುಖ ಸುದ್ದಿ
ಯಾದಗಿರಿ ರೈಲು ನಿಲ್ದಾಣದಲ್ಲಿ ಅವಘಡಃ ಪ್ರಯಾಣಿಕನ ಸಾವು
ಚಲಿಸುವ ರೈಲು ಹತ್ತಲು ಹೋದ ಪ್ರಯಾಣಿಕ ಸಾವು
ಯಾದಗಿರಿಃ ಚಲಿಸುತ್ತಿರುವ ರೈಲನ್ನು ಪ್ರಯಾಣಿಕನೋರ್ವ ಹತ್ತಲು ಹೋಗಿ ಆಯ ತಪ್ಪಿ ಕೆಳಗಡೆ ರೈಲಿನಡಿ ಸಿಲುಕಿ ಸಾವನ್ನಪ್ಪಿದ ಘಟನೆ ಇಲ್ಲಿನ ರೈಲು ನಿಲ್ದಾಣದಲ್ಲಿ ನಡೆದಿದೆ.
ಮನಗುರು – ಕೊಲ್ಲಾಪುರ ಎಕ್ಸ್ಪ್ರೆಸ್ ರೈಲು ಹತ್ತುವ ವೇಳೆಯೇ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಮೃತ ಪ್ರಯಾಣಿಕನ ಗುರುತು ಪತ್ತೆಯಾಗಿರುವದಿಲ್ಲ. ಆತನ ಹತ್ತಿರವು ಯಾವುದೇ ಗುರುತಿನ ಕಾರ್ಡ್, ಚೀಟಿ ದೊರೆತಿರುವದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರಾಯಚೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.