ಪ್ರಮುಖ ಸುದ್ದಿ

ಮಹಾನಾಯಕ ಡಾ.ಅಂಬೇಡ್ಕರ ಕುರಿತ ಧಾರವಾಹಿ‌‌ ನೋಡಿ

ದೇವರಗೋನಾಲದಲ್ಲಿ ಮಾನವತಾವಾದಿ ಡಾ. ಅಂಬೇಡ್ಕರ್ ಅವರ ‘ಮಹಾನಾಯಕ’ ಬ್ಯಾನರ್ ಅನಾವರ

ಇತ್ತೀಚೆಗೆ ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಪ್ರಬುದ್ಧ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ” ಮಹಾನಾಯಕ” ಧಾರವಾಹಿಯ ಬ್ಯಾನರ್ ಅನಾವರಣ ಸಮಾರಂಭವು ಗ್ರಾಮದ ಸರ್ವ ಸಮುದಾಯದ ಜನರು ವಿಜೃಂಭಣೆಯಿಂದ ಜರುಗಿಸಿದರು.

ಡೊಳ್ಳಿನ ವಾಲಗದೊಂದಿಗೆ ಮೆರವಣಿಗೆ ಮೂಲಕ ಪ್ರಾರಂಭವಾದ ಸಮಾರಂಭದಲ್ಲಿ ಊರಿನ ಅನೇಕ ಮುಖಂಡರು, ಹಿರಿಯರು, ಯುವಕರು, ಸಾಹಿತಿಗಳು, ಚಿಂತಕರು ಮುಂತಾದವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗನ್ನು ತಂದರು.

ಈ‌ ಸಂ‌‌ದರ್ಭದಲ್ಲಿ ಕಾರ್ಯಕ್ರಮ ಉದ್ದೆಶಿಸಿ ಮಾತನಾಡಿದ ಬಿ.ಜೆ.ಪಿ ಮುಖಂಡ ದೊಡ್ಡ ದೇಸಾಯಿ,  ಸರ್ವ ಜನಾಂಗಗಳ, ಸಮುದಾಯಗಳ ಏಳಿಗೆಗೆ ಹಾಗೂ ತಳ ಸಮುದಾಯಗಳ ಬದುಕಿನ ಜೀವನ ಮಟ್ಟ ಸುಧಾರಿಸಲು ಹಗಲಿರುಳು ಶ್ರಮಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಯ ಕುರಿತಾದ ಮಹಾನಾಯಕ ಧಾರವಾಹಿ ಎಲ್ಲಾ ಸಮುದಾಯಗಳ ಜನರಿಗೆ ಆದರ್ಶವಾಗಿದೆ. ಮತ್ತು ಮಕ್ಕಳಿಗೂ, ವಿದ್ಯಾರ್ಥಿಗಳಿಗೂ, ಯುವ ಸಮುದಾಯಕ್ಕೆ ಸ್ಪೂರ್ತಿದಾಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನ್ಯಾಯವಾದಿ ಎಚ್.ಎಸ್. ಬಳಬಟ್ಟಿ ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರು ಯಾವುದೇ ಜಾತಿ, ಜನಾಂಗಕ್ಕೆ ಸೀಮಿತವಾದವರಲ್ಲ ಅವರು ವಿಶ್ವವನ್ನೇ ಗೌರವಿಸುವ ಮಹಾನ್ ನಾಯಕ, ಚಿಂತಕರಾಗಿದ್ದಾರೆ. ಅವರು ರಚಿಸಿದ ಸಂವಿಧಾನ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಅಂತಹ ಮಹಾನ್ ಚೇತನ ಡಾ.ಅಂಬೇಡ್ಕರ್ ಅವರ ದಾರವಾಹಿಗೆ ಕೆಲವರು ವಿರೋಧಿಸುತ್ತಿರುವುದು ಸರಿಯಾದುದಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಡಾ.ಹಣಮಂತ ಚಂದ್ಲಾಪೂರ ಮತ್ತು ಕೈದಾಳ ಕೃಷ್ಣಮೂರ್ತಿ ಅವರು ಮಾತನಾಡಿ, ಸಮಾನತೆಯ ಹರಿಕಾರ ಡಾ.ಬಿ.ಆರ್ ಅಂಬೇಡ್ಕರ್ ಅವರು ಜಾತಿಯ ನಿರ್ಮೂಲನೆ ಮತ್ತು ಸಾಮಾಜಿಕ ಪರಿವರ್ತನೆ ತರಲು ಶಿಕ್ಷಣ, ಸಂಘಟನೆ, ಹೋರಾಟಗಳ ಮೂಲಕ ಅಪೇಕ್ಷಿಸಿದ್ದ ಮಹಾನ್ ಚಿಂತಕರಾಗಿದ್ದರು. ಆದರೆ ಇವತ್ತು ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ, ಅವರ ತತ್ವ ವಿಚಾರಗಳಿಗೆ ದಕ್ಕೆ ತರುವಂತಹ ಘಟನೆಗಳು ನಡೆಯುತ್ತಿವೆ.

ಇಂತಹ ಘಟನೆಗಳನ್ನು ಸರ್ವರೂ ಕೂಡಿ ಸಂಘಟಿತರಾಗಿ ವಿರೋಧಿಸಬೇಕು. ಸಾಂಸ್ಕೃತಿಕ ಪರಂಪರೆಯ ಮಹತ್ವದ ಗೋನಾಲ ಗ್ರಾಮದಲ್ಲಿ ಸರ್ವ ಜನರೂ ಕೂಡಿ ಮಾಡಿದ ಈ ಅರ್ಥಪೂರ್ಣ ಸಮಾರಂಭ ಹೊಸ ಸಾಧ್ಯತೆಗಳಿಗೆ ನಾಂದಿಯಾಡಿದೆ ಎಂದು ತಿಳಿಸಿದರು.

ಮುಖಂಡರಾದ ಸಣ್ಣ ದೇಸಾಯಿ, ಸಿದ್ದಯ್ಯ ಸ್ಥಾವರಮಠ, ಶರಣಪ್ಪ ಎಲ್.ಐ.ಸಿ, ವೆಂಕಟೇಶ ಹೊಸಮನಿ, ಬಲಬೀಮ ದೇಸಾಯಿ, ಮಲ್ಲಿಕಾರ್ಜುನ ಹಿರೇಮಠ, ಲಿಂಗಣ್ಣ ಗೋನಾಲ, ಕೈದಾಳ ಕೃಷ್ಣಮೂರ್ತಿ, ಮಾಳಪ್ಪ ಕಿರದಳ್ಳಿ, ನಾಗಣ್ಣ ಕಲ್ಲದೇವನಹಳ್ಳಿ, ಭೀಮರಾಯ ಸಿಂಧಗೇರಿ, ಮೂರ್ತಿ ಬೊಮ್ಮನಹಳ್ಳಿ, ಮಲ್ಲಿಕಾರ್ಜುನ ಕಮತಗಿ, ಮಹಾಂತೇಶ ಗೋನಾಳ, ಹಣಮಂತ ಚಂದ್ಲಾಪೂರ, ಮಲ್ಲು ಕೆ.ಸಿ.ಬಿ. ಮಲ್ಲಿಕಾರ್ಜುನ ಹಾದಿಮನಿ, ಶರಣಪ್ಪ ತಳವರಗೇರಾ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button