ಪ್ರಮುಖ ಸುದ್ದಿ

ಕೊರೊನಾಂತಕ, ವರುಣಾರ್ಭಟ ನಡುವೆ ಕಲ್ಬುರ್ಗಿ ಮಂದಿ ಮೆತ್ತಗೆ

ಕೊರೊನಾಂತಕ, ವರುಣಾರ್ಭಟ ನಡುವೆ ಕಲ್ಬುರ್ಗಿ ಮಂದಿ ಮೆತ್ತಗೆ

ಕಲ್ಬುರ್ಗಿಃ ಕಳೆದ 8 ತಿಂಗಳಿಂದ ಕೊರೊನಾರ್ಭಟ ಒಂದಡೆಯಾದರೆ ಅದರ ಜೊತೆಗೆ ಕಳೆದ ತಿಂಗಳಿಂದ ವರುಣಾರ್ಭಟ ಬೇರೆ ಈ ನಡುವೆ ಮಾಧ್ಯಮ ಮತ್ತು ಬಡ‌ ಕುಟುಂಸ್ಥರು ಅಕ್ಷರಶಃ ನಲುಗಿ ಹೋಗಿದ್ದಾರೆ.

ಕಲಬುರ್ಗಿ ಯಲ್ಲಿ ಕೊರೊನಾ ರಣ‌ಕೇಕೆ ಹಾಕಿದರೆ ಅದರ ಜೊತೆಗೆ ವರುಣ‌ ಪೈಪೋಟಿಗಿಳಿದಂತೆ ವರ್ತಿಸುತ್ತಿದ್ದಾನೆ ಎಂದರೆ ತಪ್ಪಿಲ್ಲ.

ತಿಂಗಳಿಂದ ಪದೆ ಪದೇ ಮಳೆಯಾಗುತ್ತಿರುವದರಿಂದ ಸಾಕಷ್ಟು ಜನರ ಬದುಕು‌ ನಿರ್ಣಾಮದತ್ತ‌ ಸಾಗುತ್ತಿದೆ‌ ಎಂಬ ಭಾವ ಬಂದರೂ ಅಚ್ಚರಿ ಪಡಬಡಕಿಲ್ಲ. ನಗರದಲ್ಲಿ‌ ವರುಣಾರ್ಭಟ ಮುಂದುವರೆದಿದ್ದು,‌ ರಾತ್ತಿ‌ ಇಡಿ ಸುರಿದ ಮಳೆ‌ ಪರಿಣಾಮದಿಂದಾಗಿ ಜಿಲ್ಲೆಯ ಹಲವಾರು ಗ್ರಾಮಗಳು ಹಾಗೂ ನಗರದ‌ ಬಹುತೇಕ ಬಡಾವಣೆಗಳು ಜಲಾವೃತಗೊಂಡಿವೆ.

ನಗರದ‌ ಪ್ರಮುಖ ಬೀದಿಗಳು ನೀರಲ್ಲಿ ಮುಳುಗಿವೆ. ವಾರ್ಡ್ ನಂ.6, 49 ಇಂದಿರಾ‌ ನಗರ‌ ಸೇರಿದಂತೆ ಆಶ್ರಯ ಕಾಲೊನಿ, ‌ಧನಲಕ್ಷ್ಮೀ ಲೆಔಟ್,‌ ಸಜ್ಜನ್ ಲೇಔಟ್,‌ ಹಣಮಂತ‌ ನಗರ,‌ ಕುಬೇರ ನಗರ ಸೇರಿದಂತೆ‌‌ ಹಲವಾರು ಕಡೆ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿ ಸಂಗ್ರಹಿಸಿಡಲಾದ ದವಸ ಧಾನ್ಯಗಳು ಇತರೆ ಸಾಮಾಗ್ರಿಗಳು ನೀರು ಪಾಲಾಗಿವೆ.

ಮನೆ ಮುಂದೆ ನಿಲ್ಲಿಸಿದ ಕಾರು, ಬೈಕ್ ಸಹ ನೀರಲ್ಲಿ ಮುಳುಗಿ ದುಸ್ಥಿತಿ ತಲುಪಿವೆ. ಹಲವರು ನಿನ್ನೆ ರಾತ್ರಿ ಇಡಿ ಜಾಗರಣೆ‌ ಮಾಡಿದ್ದಾರೆ. ಮನಯೊಳಗೆ ನುಗ್ಗಿದ ನೀರು ಹೊರ ಹಾಕಲು ಶತ ಪ್ರಯತ್ನ ನಡೆಯುತ್ತಿದೆ. ಮತ್ತೆ ಮೇಲಿಂದ ಮಳೆ ಸುರಿಯುತ್ತಿದೆ.

ಗ್ರಾಮೀಣ ಭಾಗದಲ್ಲಿ ಹಲವಡೆ ಮನೆಗಳು ನೆನೆದು ಕುಸಿತಗೊಂಡಿವೆ. ನಗರದ ವಿವಿಧ ಬಡಾವಣೆ ಸೇರಿದಂತೆ ಗ್ರಾಮೀಣ ಭಾಗದ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಜಿಲ್ಲಾಡಳಿತ ಕುಡಲೇ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಮುಂದಾಗಬೇಕಿದೆ.

ಅಷ್ಟೆ ಅಲ್ಲದೆ ಹೊಲ, ಗದ್ದೆಗಳಿಗೂ ಸಾಕಷ್ಟು ನೀರು ನುಗ್ಗಿದ ಪರಿಣಾಮ‌ ಹತ್ತಿ,‌ ತೊಗರೆ‌‌ ಬೆಳೆ ಸಂಪೂರ್ಣ‌ ನೆಲಕಚ್ಚಿವೆ.

Related Articles

Leave a Reply

Your email address will not be published. Required fields are marked *

Back to top button