ಪ್ರಮುಖ ಸುದ್ದಿ
ಯಾದಗಿರಿ: ಗೋಡೆ ಕುಸಿತ ಪ್ರಕರಣ, ಓರ್ವನ ಸಾವು
ಶಹಾಪುರಃ ಗೋಡೆ ಕುಸಿತ ಪ್ರಕರಣ, ಓರ್ವನ ಸಾವು
ಶಹಾಪುರ: ತಾಲೂಕಿನ ಮಡ್ನಾಳ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಮನೆಯೊಂದರ ಗೋಡೆ ಕುಸಿದ ಪರಿಣಾಮ 5 ಜನ ಮಕ್ಕಳು ಸೇರಿದಂತೆ ಇಬ್ಬರು ಹಿರಿಯರು ಗಾಯಗೊಂಡ ಘಟನೆ ಕುರಿತು ಬೆಳಗ್ಗೆ ವಿನಯವಾಣಿ ಸುದ್ದಿ ಪ್ರಕಟಿಸಿತ್ತು.
ಗೋಡೆ ಕುಸಿತ ಪ್ರಕರಣದಲ್ಲಿ ಗಾಯಗೊಂಡ 7 ಜನರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರಲ್ಲಿ ಗಂಭೀರ ಗಾಯಗೊಂಡ ಮೂವರಲ್ಲಿ ಹಿರಿಯರದ ಅಯ್ಯಪ್ಪ ತಂದೆ ಮರೆಪ್ಪ ದೊರೆ (70) ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ ಘಟನೆ ನಡೆದಿದೆ. ಆಸ್ಪತ್ರೆ ಎದುರು ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.
ರಾಯಪ್ಪ ತಂದೆ ಬಸವರಾಜ (9), ಶರಣಪ್ಪ ತಂದೆ ಬಸವರಾಜ (10), ಪರಶುರಾಮ ತಂದೆ ಮಲ್ಲಪ್ಪ (8), ಭೀಮಾಶಂಕರ ತಂದೆ ಮರೆಪ್ಪ (11), ರಾಯಪ್ಪ ತಂದೆ ಸಿದ್ದಪ್ಪ (40) ಮತ್ತು ಕಾಶಿನಾಥ ತಂದೆ ಅಶೋಕ (13) ಎಂಬುವರು ಗಾಯಗೊಂಡಿದ್ದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.