ಪ್ರಮುಖ ಸುದ್ದಿ
ರಾಜ್ಯಾದ್ಯಂತ ಇನ್ನೂ 3 ದಿನ ಭಾರಿ ಮಳೆ, ಯಾದಗಿರಿ ಜಿಲ್ಲೆಯಲ್ಲೂ ಅಲರ್ಟ್ ಡಿಸಿ ಸೂಚನೆ
ರಾಜ್ಯಾದ್ಯಂತ ಇನ್ನೂ 3 ದಿನ ಭಾರಿಮಳೆ, ಯಾದಗಿರಿ ಜಿಲ್ಲೆಯಲ್ಲೂ ಅಲರ್ಟ್ ಡಿಸಿ ಮುನ್ಸೂಚನೆ
ಯಾದಗಿರಿಃ ರಾಜ್ಯಾದ್ಯಂತ ಇನ್ನೂ ಮೂರು ದಿನಗಳ ಜಾಲ ಭಾರಿ ಮಳೆಯಾಗುವ ಸಾಧ್ಯತೆ ಇದ್ದುಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಯಾದಗಿರಿ ಜಿಲ್ಲಾದ್ಯಂತ ಮೂರು ದಿನ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಇಲ್ಲಿನ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಪೂರ್ವ ಸಿದ್ಧತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಳೆ ಪರಿಣಾಮ ಎದುರಾಗುವ ಸಮಸ್ಯೆ ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ರಾಗಾಪ್ರಿಯ ಸೂಚಿಸಿದ್ದು, ಅಲ್ಲದೆ ಪ್ರಮುಖವಾಗಿ ನದಿ ಪಾತ್ರದ ಜನರು ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆವಹಿಸಲು ಸೂಚಿಸಿದ್ದಾರೆ.
ಮತ್ತೆ ಪ್ರವಾಹ ಭೀತಿ ಎದುರಾಗಿದ್ದು, ನದಿ ಪಾತ್ರದ ಜನತೆ ಮುಂಜಾಗೃತವಾಗಿ ಎಚ್ಚರಿಕೆವಹಿಸಬೇಕು ಎಂದು ತಿಳಿಸಿದ್ದಾರೆ.