ಕರ್ನಾಟಕದಲ್ಲಿರುವ ಜಿಲ್ಲೆಗಳೆಷ್ಟು.? ಬಿಜೆಪಿ ರಾಜ್ಯಧ್ಯಕ್ಷರನ್ನೊಮ್ಮೆ ಕೇಳಿ.?
ಜಿಲ್ಲೆಗಳ ಸಂಖ್ಯೆ ಹೇಳುವಲ್ಲಿ ಮತ್ತೆ ಕಟೀಲು ಯಡವಟ್ಟು..
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ಮೋಟಗಿ ಸಭಾಂಗಣದಲ್ಲಿ ಬಿಜೆಪಿಯಿಂದ ನಡೆದ ಜಿಲ್ಲಾ ಮಟ್ಟದ ಸಭೆಗೆ ಆಗಮಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ್, ಪತ್ರಕರ್ತರೊಂದಿಗೆ ಮಾತನಾಡುವಾಗ, ಪಕ್ಷದ ಸಂಘಟನೆ ಇತರೆ ವಿಷಯವಾಗಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿರುವೆ.
ಈಗಾಗಲೇ 33 ಜಿಲ್ಲೆಯಲ್ಲಿ ಸಭೆ ನಡೆಸಿ ಬಂದಿದ್ದೇನೆ ಇದು 34 ನೇ ಜಿಲ್ಲೆ ಇನ್ನೂ ನಾಲ್ಕಾರು ಜಿಲ್ಲೆಗಳಿವೆ ಎಂದು ತಿಳಿಸುವ ಮೂಲಕ ಅಚ್ಚರಿ ಮೂಡಿಸಿದರು.
ಹಾಗಾದರೆ ಬಿಜೆಪಿ ರಾಜ್ಯಧ್ಯಕ್ಷರ ಪ್ರಕಾರ 39 ಕ್ಕೂ ಹೆಚ್ಚು ಜಿಲ್ಲೆಗಳು ಕರ್ನಾಟಕದಲ್ಲಿವೆ ಅಂದಂಗಾಯ್ತು. ಈ ಮೊದಲೊಮ್ಮೆ ಯಾದಗಿರಿ ಸಭೆಯಲ್ಲೂ ಇದೇ ರೀತಿ ಹೇಳಿದ್ದೂ ದೊಡ್ಡ ಸುದ್ದಿಯಾಗಿತ್ತು.
ಆದರೆ ಬಿಜೆಪಿ ಪಕ್ಷದ ಪ್ರಮುಖರೊಬ್ಬರು ಹೇಳುವ ಪ್ರಕಾರ ನಮ್ಮ ಪಕ್ಷದ ಸಂಘಟನೆ ದೃಷ್ಟಿಯಿಂದ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಕರ್ನಾಟಕದಲ್ಲಿ ನಾಲ್ಕಾರು ಪ್ರದೇಶಗಳನ್ನು ಜಿಲ್ಲೆಗಳನ್ನಾಗಿ ಮಾಡಿಕೊಳ್ಳಲಾಗಿದೆ. ಪಕ್ಷದ ಪ್ರಕಾರ ಸಂಘಟನೆಯಲ್ಲಿ ತೊಡಗಿಸಿಕೊಂಡ ರಾಜ್ಯಧ್ಯಕ್ಷರು ಸಾಮಾನ್ಯವಾಗಿ ಅವರು ಮುಗಿಸಿದ ಜಿಲ್ಲಾ ಮಟ್ಟದ ಸಭೆಗಳನ್ನು ಒಟ್ಟಾರೆಯಾಗಿ ಹೇಳಿದ್ದಾರೆ ಎಂದು ವಿನಯವಾಣಿಗೆ ಸಮಜಾಯಿಸಿ ನೀಡಿದರು.