ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘ ಧರಣಿ
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘ ಧರಣಿ
ಶಹಾಪುರಃ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕು ಕರ್ನಾಟಕ ಪ್ರಾಂತ ರೈತ ಸಂಘದಿಂದ ತಹಶೀಲ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ ಮಹಿಬೂಬಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಚನ್ನಪ್ಪ ಆನೇಗುಂದಿ, ಶೆಟ್ಟಿಕೇರಾ ಗ್ರಾಮದಲ್ಲಿ ಸರ್ವೆ ನಂ- 128/2ರಲ್ಲಿ ಇರುವ ದಲಿತರ ಗುಡಿಸಲುಗಳು ಸಕ್ರಮಗೊಳಸಿಬೇಕು. ಶಹಾಪುರ ದೇವಿನಗರದ 14 ಜನ ನಿರಾಶ್ರಿತ ಕುಟುಂಬಗಳಿಗೆ ನಿವೇಶನ ಒದಗಿಸಬೇಕು. ಇಬ್ರಾಹಿಂಪುರ ರೈತನಿಗೆ ನೀಡಬೇಕಾದ ಪರಿಹಾರ ಶೀಘ್ರ ನೀಡಬೇಕು. ಶೆಟ್ಟಿಕೇರಾ ಕೆರೆ ಒತ್ತುವರಿಯನ್ನು ತೆರವುಗೊಳಸಬೇಕು. ತಿಪ್ಪನಳ್ಳಿ, ವನದುರ್ಗಾ, ಗ್ರಾಮದ ದಲಿತ ಸಮುದಾಯಗಳಿಗೆ ಸ್ಮಶಾನ ಜಾಗ ಒದಗಿಸುವದು ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿದರು.
ದಲಿತ ಬಡವರ ಪರ ಆಡಳಿತದ ಕಾರ್ಯ ವೈಖರಿ ಇರಲಿ. ನ್ಯಾಯಯೋಜಿತ ಬೇಡಿಕೆಗಳಿಗೆ ತಾಲೂಕು ಆಡಳಿತ ಸ್ಪಂಧಿಸುವ ಕೆಸಲ ಮಾಡಬೇಕು. ಸಾಕಷ್ಟು ಕಷ್ಟ ನಷ್ಟದಲ್ಲಿ ರೈತಾಪಿ ಜನರು ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಸರ್ಕಾರಿ ಯೋಜನೆ ಕಾನೂನಾತ್ಮಕವಾಗಿ ಬಡವರ ಮನೆಗೆ ತಲುಪಿಸುವ ಮೂಲಕ ಬಡವರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್.ಎಮ್.ಸಾಗರ, ಹಣಮಂತ್ರಾಯ ದೊರೆ, ತಾಲೂಕಾ ಅಧ್ಯಕ್ಷ ಮಲ್ಲಣಗೌಡ ಪಾಟೀಲ್, ಬಸವರಾಜ ಭಜಂತ್ರಿ ಸೇರಿದಂತೆ ಇತರರಿದ್ದರು.