ಪಕ್ಕದ್ಮನೆ ಗೋಡೆ ಕುಸಿದು ತಾಯಿ-ಮಗಳು ಸ್ಥಳದಲ್ಲಿಯೇ ಸಾವು
ಮನೆ ಗೋಡೆ ಕುಸಿದು ತಾಯಿ-ಮಗಳು ಸ್ಥಳದಲ್ಲಿಯೇ ಸಾವು
ವಿಜಯಪುರಃ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ನೆನೆದ ಮನೆಯ ಗೋಡೆಯೊಂದು ಬೆಳಗಿನಜಾವ ಸವಿ ನಿದ್ರಯಲ್ಲಿದ್ದ ತಾಯಿ ಮತ್ತು ಮಗಳ ಮೇಲೆ ಕುಸಿದು ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ಮಂಗಳವಾರ ಬೆಳಗಿನಜಾವ ನಡೆದಿದೆ.
ಶಂಕ್ರಮ್ಮ ರಾಮಚಂದ್ರಪ್ಪ ಔರಾದಿ (60) ಮತ್ತು ಮಗಳು ಮಹಾದೇವಿ ಔರಾದಿ (31) ಮೃತ ದುರ್ದೈವಿಗಳು. ಅದೃಷ್ಟವಶಾತ್ ಮನೆಯ ಹೊರಗಡೆ ಮಲಗಿದ್ದ ಮಗ ಶಿವಪುತ್ರ ಮಾತ್ರ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಟೀನ್ ಶೆಡ್ ನಲ್ಲಿ ವಾಸವಿದ್ದ, ತಾಯಿ, ಮಗ ಮತ್ತು ಮಗಳು ಬಡತನದಲ್ಲಿ ಬದುಕು ಸಾಗಿಸುತ್ತಿದ್ದರು. ಇವರ ಶೆಡ್ ಪಕ್ಕದ ಮನೆಯೊಂದರ ಗೋಡೆ ಮಳೆಗೆ ನೆನೆದಿದ್ದ ಪರಿಣಾಮ ಬೆಳಗಿನಜಾವ 0345 ರ ಸುಮಾರಿಗೆ ಶೇಡ್ ಮೇಲೆ ಬಿದ್ದಿದೆ. ಹೀಗಾಗಿ ಶೆಡ್ನಲ್ಲಿ ಮಲಗಿದ್ದ ಬಡಪಾಯಿಗಳು ಸ್ಥಳದಲ್ಲಿಯೇ ಜೀವ ಬಿಟ್ಟಿದ್ದಾರೆ. ಜಾಗದ ಅಭಾವದಿಂದ ಶೆಡ್ ಹೊರಗಡೆ ಮಲಗಿದ್ದ ಮಗ ಶಿವಪುತ್ರ ೊಬ್ಬಾತ ಬದುಕುಳಿದಿದ್ದಾನೆ ಎನ್ನಲಾಗಿದೆ.
ದುರಂತ ಕಂಡು ಬಡಾವಣೆಯ ಹೆಂಗಳೆಯರು ಕಣ್ಣೀರು ಹಾಕುತ್ತಿದ್ದಾರೆ. ಬಂಧೂ ಬಳಗದ ರೋದನೆ ಮುಗಿಲು ಮುಟ್ಟಿದೆ. ಬಸವನಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.