ಪ್ರಮುಖ ಸುದ್ದಿ

ತಮಿಳುನಾಡಿನಲ್ಲಿ ಕನ್ನಡ ಡಿಂಡಿಮ ಮೊಳಗಿಸಿದ ನಟ ರಜನೀಕಾಂತ!

ಚನ್ನೈ: ನಾನು ಕಲಿತದ್ದು ಕರ್ನಾಟಕದಲ್ಲಿ, ಬೆಳೆದದ್ದು ಕನ್ನಡದಲ್ಲಿ ಎಂದು ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ್ದಾರೆ. ಟಿ.ನಗರದಲ್ಲಿ ನಡೆದ ಐದನೇ ದಿನದ ಅಭಿಮಾನಿಗಳ ಸಭೆಯಲ್ಲಿ ನಟ ರಜನೀಕಾಂತ್ ಕನ್ನಡಾಭಿಮಾನ ಮೆರೆದಿದ್ದಾರೆ. ಮೊನ್ನೆಯಷ್ಟೇ ವರನಟ ಡಾ.ರಾಜಕುಮಾರ್ ಅವರ ಗುಣಗಾನ ಮಾಡಿದ್ದ ರಜನೀಕಾಂತ್, ನಾನು ರಾಜಕುಮಾರ್ ಅವರ ಪಾದಸ್ಪರ್ಶ ಮಾಡಿದ್ದು ಅವಿಸ್ಮರಣೀಯ ಎಂದಿದ್ದರು.

ನನಗೆ ಮೊದಲಿಗೆ ತಮಿಳು ಬಾಷೆ ಸರಿಯಾಗಿ ಬರುತ್ತಿರಲಿಲ್ಲ. ನಿರ್ದೇಶಕ ಬಾಲಚಂದರ್ ಅವರ ಸೂಚನೆ ಮೇರೆಗೆ ತಮಿಳು ಚಿತ್ರರಂಗಕ್ಕೆ ಬಂದಮೇಲೆ ತಮಿಳು ಕಲಿತೆ. ನನ್ನ ಕುಟುಂಬದವರೂ ತಮಿಳು ಚನ್ನಾಗಿ ಮಾತನಾಡಬಲ್ಲರು. ಆದರೆ, ನನಗೆ ಸುಲಲಿತವಾಗಿ ತಮಿಳಿನಲ್ಲಿ ಮಾತನಾಡುವುದು ಕಷ್ಟ ಎಂದು ನಟ ರಜನೀಕಾಂತ್ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button