ದಿಕ್ಷೀತರು ಕಂಡ ಕನಸು ಪ್ರಸ್ತುತ ಸಂದರ್ಭ ನೆನಪು
ಸ್ವದೇಶಿ ವಸ್ತುಗಳ ಮಹತ್ವ ನೀಡಿದ್ದ ರಾಜೀವ್ ದಿಕ್ಷೀತ್
ಯಾದಗಿರಿ; ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ ಹಾಗೂ ವಸ್ತುಗಳಿಗೆ ಭಾರತೀಯರು ಮಾರು ಹೋಗುತ್ತಿರುವುದನ್ನು ಗಮನಿಸಿದ ಯುವಕ ದೇಶ ಪ್ರೇಮಿ ಸ್ವದೇಶಿ ಜಾಗರಣ ಮಂಚ ಸ್ಧಾಪಕ ದಿ. ರಾಜೀವ ದಿಕ್ಷೀತ್ ಎರಡು ದಶಕಗಳ ಕಾಲ ದೇಶದಲ್ಲಿ ಸುತ್ತಾಡಿ ದೇಶಿಯ ಗೋವಿನ ಉತ್ಪನ್ನಗಳ ಹಾಗೂ ಸಾವಯುವ ಕೃಷಿ ಪದ್ದತಿಯ ಮಹತ್ವವನ್ನು ಜನರಿಗೆ ತಿಳಿಸುವ ಮೂಲಕ ಅವರಲ್ಲಿ ಸ್ವಾವಲಂಬನೆಯ ಬದುಕು ರೂಪಿಸಿದರು.
ಜನರಲ್ಲಿ ವಿಶೇಷವಾಗಿ ಸ್ವದೇಶಿ ವಸ್ತುಗಳ ಬಳಕೆ ಮಾಡಲು ದಿಕ್ಷೀತ್ ಅರಿವು ಮೂಡಿಸಿ ಜನರಲ್ಲಿ ಕಾಣುವ ಅನೇಕ ಮಾರಾಣಾಂತಿಂಕ ರೋಗಗಳಿಗೆ ದೇಶದ ಆರ್ಯವೇದ ಚಿಕಿತ್ಸೆಯ ಲಾಭ ತಿಳಿಸಿದರು.
ಇಂದು ದೇಶದಲ್ಲಿ ಕರೋನಾ ವೈರಸ್ ನಿಂದ ಜನರು ತತ್ತರಿಸಿ ಸಂಕಷ್ಟಕೀಡಾಗಿದ್ದಾರೆ. ಕೇಂದ್ರ ಸರ್ಕಾರವು ಕೂಡ ಆರ್ಯುವೇದ ಔಷಧಿ ಗಳ ಬಳಕೆಗೆ ಜನರಿಗೆ ತಿಳಿಸುವ ಮೂಲಕ ಮನುಷ್ಯರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನವಿ ಮಾಡಿದ್ದಾರೆ.
ಕಳೆದ ೯ ವರ್ಷಗಳ ಹಿಂದೆ ರಾಜೀವ ದಿಕ್ಷೀತ ನಿಧನರಾದರು. ಆದರೆ ಅವರು ಆರ್ಯುವೇದ ಔಷದಿಗಳ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಿರುವುದು. ಇಂದು ಅವರ ಸಾಧನೆ ನೆನಪು ಹಾಕುವುದು ಸಾಂದರ್ಭಿಕವಾಗಿದೆ. ಅವರು ೧೦ ವರ್ಷ ಗಳ ಹಿಂದೆ ಮುಂಬಯಿಂದ ರೈಲಿನಲ್ಲಿ ಯಾದಗಿರಿ ಮೂಲಕ ಬೆಂಗಳೂರಿಗೆ ತೆರಳುತ್ತಿರವ ಸಂದರ್ಭದಲ್ಲಿ ನಾನು ನನ್ನ ಸ್ನೇಹಿತನೊಂದಿಗೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಅವರಿಗೆ ಊಟವನ್ನು ಕೊಟ್ಟು ಭೇಟಿಯಾದ ಕ್ಷಣ ಎಂದಿಗೂ ಮರೆಯಲಾರದ ಘಟನೆ.
ಇಂದು ದೇಶದ ಜನರು ದಿಕ್ಷೀತ ನೀಡಿದ ಆರ್ಯುವೇದ ಔಷಧಿಗಳನ್ನು ಬಳಕೆ ಮಾಡಿಕೊಂಡು ಹತ್ತು ಹಲವು ರೋಗಗಳಿಂದ ಸಧಾರಣೆ ಹೊಂದುತ್ತಿದ್ದಾರೆ. ಶ್ರೀ ರಾಮದೇವ ಬಾಬಾ ಅವರೊಂದಿಗೆ ಕೈಜೋಡಿಸಿದ್ದ ದಿಕ್ಷೀತ್ ಅವರು ಪತಂಜಲಿಯ ಮೂಲಕ ಇಡಿ ದೇಶಕ್ಕೆ ಆಯುರ್ವೇದ ಸಾರವನ್ನು ಅದರ ಮಹಾಶಕ್ತಿಯನ್ನು ತೋರಿದ್ದಾರೆ ಅಂದರೆ ತಪ್ಪಿಲ್ಲ.
ಪ್ರಸ್ತುತ ಕೊರೊನಾ ವೈರಸ್ ತಡೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹಿಂದೆ ದಿಕ್ಷೀತ್ ಅವರು ಹೇಳಿದ ಆಯುಷ್ ಮಾರ್ಗಸೂಚಿಯನ್ನೆ ಇಂದು ಆಯುಷ್ ಇಲಾಖೆ, ಕೇಂದ್ರ ಸರ್ಕಾರ ಹೇಳುತ್ತಿದೆ ಇಂದ ದಿಕ್ಷೀತ್ ಅವರ ಜೀವಂತಿಕೆಯನ್ನ ನೆನಪಿಸುತ್ತಿದೆ. ಆಜಾದಿ ಬಚಾವ್ ಆಂದೋಲನದ ರೂವಾರಿ ದಿಕ್ಷೀತ್ ರು ಅಂದು ನುಡಿದ ಪ್ರತಿ ಮಾತುಗಳು ಸತ್ಯವೆನಿಸುತ್ತುವೆ.
ವಿದೇಶಿ ವಸ್ತುಗಳನ್ನು ಬಳಸದಿರಲು ಮತ್ತು ವಿದೇಶಿ ವಸ್ತು ತಯಾರಾಗುವ ಸ್ಥಿತಿಗತಿ ಅದರಲ್ಲಿ ಇರುವ ಅಂಶ ಎಲ್ಲವನ್ನು ಅಂದು ತಿಳಿಸಿ ಸ್ವದೇಶ ವಸ್ತು ಗಳನ್ನು ಬಳಸಿ ದೇಶ ಬೆಳಸಿ ಆರೋಗ್ಯಯುತ ದೇಶ ಕಟ್ಟಲು ಸಹಕರಿಸಿ ಎಂಬ ಅಂದಿನ ಅವರ ಕೂಗು ಇಂದು ಪ್ರತಿಧ್ವನಿಸುತ್ತಿದೆ.
ಅಂದು ಅವರಾಡುವ ಮಾತು ದೇಶದ ಸಂಪತ್ತು ಅಭಿವೃದ್ಧಿ ಗೆ ತೊಟ್ಟ ಪಣ ಅವರಾಡುವ ಮಾತು ಕೇಳಿ ಕೆಲವರು ಹುಚ್ಚ ಎಂದವರುಂಟು ಅಸಡ್ಡೆ ತೋರಿದವರೇ ಇಂದು ಸ್ವದೇಶಿ ಮಾತನಾಡುತ್ತಿದ್ದಾರೆ, ಹರ್ಬಲ್, ಸ್ವದೇಶಿ ಆಹಾರ ಪದ್ದತಿ ಅನುಸರಿಸುತ್ತಿರುವದು ಹೆಮ್ಮೆಯ ವಿಷಯ.
ಸ್ವದೇಶಿ ವಸ್ತುಗಳನ್ನೆ ಬಳಸಿ ರೋಗಮುಕ್ತರಾಗಿ ಆರೋಗ್ಯಯುತವಾಗಿ ಬದುಕಿ. ದೇಶದ ಸರ್ವಾಂಗೀಣ ಅಭಿವೃದ್ಧಿ ಗೆ ಕೈಜೋಡಿಸಿ. ಜೈ ಸ್ವದೇಶಿ..
–ಮಲ್ಲಿಕಾರ್ಜುನ ಹತ್ತಿಕುಣಿ. ಪತ್ರಕರ್ತ.
ಯಾದಗಿರಿ.