ಕೊಟ್ಟ ಜವಬ್ದಾರಿ ನಿಭಾಯಿಸಬೇಕುಃ ಶಾಸಕ ರಾಜೂಗೌಡ
ಮಂಡಳಿ ನಿಗಮಃ ಅಧಿಕಾರ ಸ್ವೀಕರಿಸಿದ ರಾಜೂಗೌಡ
ಬೆಂಗಳೂರಃ ಮುಖ್ಯಮಂತ್ರಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ವಹಿಸಿಕೊಟ್ಟ ಜವಬ್ದಾರಿ ನಿಭಾಯಿಸಬೇಕಾಗುತ್ತದೆ. ವಿಶ್ವಾಸವಿಟ್ಟು,ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷನನ್ನಾಗಿ ನೇಮಿಸಿದ್ದು, ಅದನ್ನು ಸಮರ್ಥವಾಗಿ ಸರಿದೂಗಿಸಿಕೊಂಡು ಹೋಗುವ ಜವಬ್ದಾರಿ ನನ್ನ ಮೇಲಿದೆ ಎಂದು ಸುರಪುರ ಮತಕ್ಷೇತ್ರದ ಬಿಜೆಪಿ ಶಾಸಕ ನರಸಿಂಹ ನಾಯಕ್ (ರಾಜೂಗೌಡ) ಅಭಿಪ್ರಾಯಪಟ್ಟರು.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನದ ಅಧಿಕಾರವಹಿಸಿಕೊಂಡು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಪಕ್ಷದಲ್ಲಿ ಎಲ್ಲರೂ ಒಂದೇ ಪಕ್ಷ ನೀಡಿದ ಜವಬ್ದಾರಿ ವಹಿಸಿಕೊಂಡು ಸಮರ್ಪಕವಾಗಿ ಕೆಲಸ ಮಾಡಬೇಕು. ಕೊಟ್ಟ ಕುದರೆ ಏರಲಾಗದೇ ಮತ್ತೊಂದು ಕುದುರೆ ಬೇಕಂದಂತಾಗಬಾರದು.
ದೂರದ ಪಯಣಕ್ಕಾಗಿ ಇಲ್ಲವೇ ಕಾಳಗದ ಕಣಕ್ಕೆ ತೆರಳಲು ಕೊಟ್ಟಿರುವ ಕುದುರೆಯನ್ನು ಹತ್ತಿ, ಅದನ್ನು ಹತೋಟಿಯಲ್ಲಿಟ್ಟುಕೊಂಡು ಸವಾರಿ ಮಾಡುವ ಮುನ್ನಡೆಸುವ ಕುಶಲತೆ ಹೊಂದಿರಬೇಕು ಅದು ಬಿಟ್ಟು ಈ ಕುದರೆ ಬೇಡ ಬೇರೆ ಕುದುರೆ ಕೊಟ್ಟಿದ್ದರೆ ಚನ್ನಾಗಿತ್ತು ಎಂದುಕೊಂಡರೆ ತಲುಪಬೇಕಾದ ಗುರಿ, ಮಾಡಬೇಕಾದ ಕೆಲಸ ಆಗುವದಿಲ್ಲ. ನಮಗ್ಯಾವ ಕುದುರೆ ಕೊಟ್ರು ಸವಾರಿ ಮಾಡುವ ಕಲೆ ಗೊತ್ತಿದೆ ಅದನ್ನು ಗೆಲುವಿನತ್ತ ಒಯ್ಯುತ್ತೇವೆ ಎಂದು ನಗೆ ಬೀರಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ, ಎಂ.ಪಿ.ರೇಣುಕಾಚಾರ್ಯ, ಆರಗ ಜ್ಞಾನೇಂದ್ರ ಮತ್ತು ಯಾದಗಿರಿ ಜಿಲ್ಲೆಯ ಶಹಾಪುರದ ಮಾಜಿ ಶಾಸಕ ಗುರು ಪಾಟೀಲ್, ಯಾದಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ದೇವಿಂದ್ರನಾಥ ನಾದ್, ವೆಂಕಟರಡ್ಡಿ ಅಬ್ಬೆ ತುಮಕೂರ ಇತರರು ಶುಭಕೋರಿ ಗೌರವಿಸಿದರು.