ಪ್ರಮುಖ ಸುದ್ದಿ
ನಾನೂ ಸಿದ್ರಾಮಯ್ಯನವರ ಅಭಿಮಾನಿ – ರಾಜೂಗೌಡ
ನಾನೂ ಸಿದ್ರಾಮಯ್ಯನವರ ಅಭಿಮಾನಿ – ರಾಜೂಗೌಡ
ಯಾದಗಿರಿಃ ಸಿದ್ರಾಮಯ್ಯನವರ ಹೆಸರಿನಲ್ಲಿಯೇ ‘ರಾಮ’ ಇದ್ದಾನೆ. ಅವರು ಶ್ರೀರಾಮ ಮಂದಿರ ಕಟ್ಟಲಿಕ್ಕೆ ಕಾಣಿಕೆ ಕೊಡಲ್ಲ ಎಂದಿರಬಹುದು ಮುಂದೆ ಕಾಣಿಕೆ ನೀಡಲಿದ್ದಾರೆ. ಸಿದ್ರಾಮಯ್ಯ, ಬಿ.ಎಸ್.ವೈ ಮತ್ತು ಖರ್ಗೆ ಬರಿ ಪಕ್ಷದ ಆಸ್ತಿ ಅಲ್ಲ ಅವರು ರಾಜ್ಯದ ಆಸ್ತಿ ಎಂದು ಶಾಸಕ, ಮಾಜಿ ಮಂತ್ರಿ ರಾಜೂಗೌಡ ಹೇಳಿದರು.
ಜಿಲ್ಲೆಯ ಸುರಪುರ ತಾಲೂಕಿನ ಖಾನಾಪುರ H.S. ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು,ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ನಾನೂ ಕೂಡ ಸಿದ್ರಾಮಯ್ಯನವರ ಅಭಿಮಾನಿ, ಈ ಮೇಲೆ ತಿಳಿಸಿದ ಮೂವರು ನಾಯಕರು ರಾಜ್ಯದ ಆಸ್ತಿ. ಸಿದ್ರಾಮಯ್ಯನವರು ರಾಮ ಮಂದಿರ ಕಟ್ಟುವ ಸ್ಥಳ ವಿವಾದಿತ ಎಂದಿದ್ದಾರೆ, ಆದರೆಜನನ ಇತ್ತೀಚೆಗೆ ಸುಪ್ರೀಂಕೋರ್ಟ್ ನ ವಿಭಾಗೀಯ ಪೀಠ ವಿವಾದಿತ ಪ್ರದೇಶವನ್ನು ಇತ್ಯರ್ಥಪಡಿಸಿದ್ದಾರೆ ಎಂಬುದು ಗಮನಿಸಬೇಕಿತ್ತು ಎಂದು ಅವರು ತಿಳಿಸಿದ್ದಾರೆ.