ಜೂನ್ ನಲ್ಲಿ ರಾಜ್ಯಸಭೆಯ ನಾಲ್ಕು ಸ್ಥಾನ ಖಾಲಿಃ ಈಗಲೇ ಲಾಬಿ ಶುರು
ಬೆಂಗಳೂರಃ ಬರುವ ಜೂನ್ ತಿಂಗಳಲ್ಲಿ ರಾಜ್ಯದ ನಾಲ್ಕು ರಾಜ್ಯಸಭಾ ಸದಸ್ಯರ ಅವಧಿ ಅಂತ್ಯಗೊಳ್ಳಲಿದ್ದು, ಈಗಾಗಲೇ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಲಾಬಿ ಶುರುವಾಗಿದೆ.
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಜೆಪಿಯ ಪ್ರಭಾಕರ್ ಕೋರೆ, ಜೆಡಿಎಸ್‍ನ ಉಪೇಂದ್ರ ರಡ್ಡಿ ಮತತು ಕಾಂಗ್ರೆಸ್‍ನ ಡಾ.ರಾಜೀವ್ ಗೌಡ ಮತ್ತು ಬಿ.ಕೆ.ಹರಿಪ್ರಸಾದ ಇವರ ಅವಧಿ ಇದೇ ಜೂನ್‍ಗೆ ಮುಕ್ತಾಯಗೊಳ್ಳಲಿದೆ.
ಹೀಗಾಗಿ ಜೂನ್ ನಲ್ಲಿ ಈ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆದರೆ ಪ್ರಸ್ತುತ ಪಕ್ಷಗಳ ಬಲಾಬಲ ನೋಡಿದಲ್ಲಿ ಈ ಬಾರಿ ಬಿಜೆಪಿ ಎರಡು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದು, ಕಾಂಗ್ರೆಸ್ ಒಂದು ಸ್ಥಾನ ಗೆಲ್ಲಬಹುದಾಗಿದೆ. ಆದರೆ ನಾಲ್ಕನೇ ಸ್ಥಾನದ ಗೆಲುವಿಗೆ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಜೆಡಿಎಸ್ ಬೆಂಬಲ ಅಗತ್ಯವಿದೆ.
ಆ ಹಿನ್ನೆಲೆಯಲ್ಲಿ ಜೆಡಿಎಸ್ ಯಾರಪರ ಒಲವು ತೋರಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ. ಕಾಂಗ್ರೆಸ್ ಪರವಾಗಿ ಜೆಡಿಎಸ್ ನಿಂತಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದ ತಲಾ ಒಂದು ಸ್ಥಾನವನ್ನು ಗೆಲ್ಲಲುಸಾಧ್ಯವಿದೆ. ಇಲ್ಲವಾದಲ್ಲಿ ಕಾಂಗ್ರೆಸ್‍ಗೆ ಬೆಂಬಲಿಸಿ ಸ್ಥಾನವನ್ನು ಬಿಟ್ಟುಕೊಟ್ಟರೂ ಅಚ್ಚರಿ ಪಡುವಂತಿಲ್ಲ. ಬಿಜೆಪಿಯಲ್ಲಿ ಮತ್ತೊಮ್ಮೆ ಹಾಲಿ ಸದಸ್ಯ ಪ್ರಭಾಕರ ಕೋರೆ ರಾಜ್ಯಸಭಾ ಸ್ಥಾನ ಪಡೆಯಲು ಮುಂಚೂಣಿಯಲ್ಲಿದ್ದರೆ, ಇನ್ನೊಂದು ಸ್ಥಾನದ ಮೇಲೆ ಬಿಜೆಪಿ ವಕ್ತಾರ ಗೋಮಧುಸೂದನ ಕಣ್ಣಿಟ್ಟಿರುವದು ತಿಳಿದು ಬಂದಿದೆ.
ಕಾಂಗ್ರೆಸ್‍ನಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಬಾರಿ ರಾಜ್ಯಸಭಾ ಸದಸ್ಯರನ್ನಾಗಿಸಲು ಮುಂದಾಗಿದ್ದು ಒಂದಡೆಯಾದರೆ ವಿ.ಎಸ್.ಉಗ್ರಪ್ಪ ಸಹ ಸ್ಥಾನ ಪಡೆಯುವಲ್ಲಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಜೆಡಿಎಸ್ ನಲ್ಲೂ ಈ ಬಾರಿ ದೊಡ್ಡ ಗೌಡರನ್ನು ರಾಜ್ಯಸಭಾ ಸದಸ್ಯರನ್ನಾಗಿಸಿ ದೆಹಲಿಗೆ ಕಳುಹಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.