RALLY FOR RIVERS ; ಒಂದು ಮಿಸ್ಡ್ ಕಾಲ್ ನದಿಯನ್ನು ರಕ್ಷಿಸುವುದು ಹೇಗೆ ಗುರೂಜಿ?
‘ಮಜಾ ಟಾಕೀಸ್’ನಲ್ಲೊಂದು ಅಚ್ಚರಿ ಸಿರೀಸ್ : ಜಗಧೀಶ ವಾಸುದೇವ ಗುರೂಜಿ ಹೇಳಿದ್ದು…
80009 80009 ಗೆ ಮಿಸ್ಡ ಕಾಲ್ ಮಾಡಿ RALLY FOR RIVERS ಗೆ ಸಪೋರ್ಟ್ ಮಾಡಿ
ನಾವು ಇದನ್ನು ಅರ್ಥ ಮಾಡಿಕೊಳ್ಳಬೇಕು. ನದಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಏಕಕಾಲೀನ ವಿಷಯವಾಗಿದೆ. ಅಂದರೆ ಕೇಂದ್ರ ಸರ್ಕಾರವು ಒಂದು ಕಾನೂನನ್ನು ತಂದರೆ ರಾಜ್ಯ ಸರ್ಕಾರವು ಉತ್ಸಾವನ್ನು ತೋರಿದರೆ ಆ ಕಾನೂನು ಜಾರಿಯಾಗುತ್ತದೆ. ಇಲ್ಲದಿದ್ದರೆ ಅದು ಜಾರಿ ಆಗುವುದಿಲ್ಲ. ಕಾವೇರಿಯ ವಿಷಯದಲ್ಲಿ ಕೇಂದ್ರ ಸರ್ಕಾರ ಏನು ಹೇಳಿದರೂ ಕರುನಾಡು ಹಾಗೂ ತಮಿಳುನಾಡು ಸರ್ಕಾರಗಳು ಅವುಗಳ ಮನಸ್ಸಿಗೆ ಬಂದಂತೆ ಮಾಡುತ್ತವೆ. ಸುಪ್ರೀಂ ಕೋರ್ಟ್ ಎಲ್ಲದರ ಮದ್ಯೆ ಪ್ರವೇಶಿಸಲು ನೋಡುತ್ತದೆ. ಇದು ಯಾಕೆಂದರೆ ನದಿ ಏಕಕಾಲೀನ ವಿಷಯವಾಗಿದೆ. ಇದು ಕೇಂದ್ರ ಸರ್ಕಾರದ ಕೈಯಲ್ಲಿಲ್ಲ. ಅಂತರಾಜ್ಯಗಳ ನಡುವೆ ಹರಿವ ನದಿಗಳು ಕೇಂದ್ರ ಸರ್ಕಾರದ ಅಧೀನದಲ್ಲಿವೆ. ಆದರೂ ಕೂಡ ಜಾರಿಗೊಳಿಸುವ ಕಾರ್ಯ ರಾಜ್ಯಮಟ್ಟದಲ್ಲೇ ಆಗಬೇಕು. ಈ ಏಕಕಾಲೀನತೆಯನ್ನು ತರಲು ರಾಜ್ಯಮಟ್ಟದಲ್ಲೇ ಆಗಬೇಕು. ಈ ಏಕಕಾಲೀನತೆಯನ್ನು ತರಲು ನಾವು ಈ ನದಿಗಳ ಅಭಿಯಾನವನ್ನು ಮಾಡುತ್ತಿದ್ದೇವೆ. ಇದೇ ಕಾರಣಕ್ಕಾಗಿ ನಾನು ಕನ್ಯಾಕುಮಾರಿಯಿಂದ ಹಿಮಾಲಯದ ತಪ್ಪಲಿನವರೆಗೆ ಖುದ್ದಾಗಿ ಗಾಡಿಯನ್ನು ಚಲಾಯಿಸುತ್ತೇನೆ.
ಈ ಅಭಿಯಾನ ಒಟ್ಟು 16 ರಾಜ್ಯಗಳು ಮತ್ತು 23 ಪ್ರಮುಖ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ನನ್ನ ಪ್ರಯಾಣ 32ದಿನಗಳದ್ದಾಗಿರುತ್ತದೆ. ಒಂದಾನೊಂದು ಕಾಲದಲ್ಲಿ ನಾನು ಮೋಟಾರ್ ಬೈಕಿನಲ್ಲಿ ಭಾರತದುದ್ದಕ್ಕೂ ತಿರುಗಾಡಿದ್ದೇನೆ. ಈ ಅಭಿಯಾನದ ಒಂದು ಒಳ್ಳೆ ವಿಷಯವೇನೆಂದರೆ ನಾನು ಮತ್ತೆ ಮೋಟಾರ್ ಬೈಕಿನ ಸವಾರಿಯನ್ನು ಅಲ್ಲಿ ಇಲ್ಲಿ ಮಾಡಲಿದ್ದೇನೆ. ಈ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇದು ಏಕಕಾಲೀನತೆಯ ಸಂಕೇತ. ಯಾರೂ ಎಲ್ಲಾ ಮುಖ್ಯಮಂತ್ರಿಗಳು ಭಾಗವಹಿಸುತ್ತಾರೆ ಎಂದು ಯೋಚಿಸಿರಲಿಲ್ಲ. ನಾವು ಪ್ರಚಾರ ಕೂಡ ಮಾಡಿರಲಿಲ್ಲ. ಒಬ್ಬರು ಅಥವಾ ಇಬ್ಬರು ಮುಖ್ಯಮಂತ್ರಿಗಳನ್ನು ಭೇಟಿ ಆದೆವು. ಉಳಿದವರಿಗೆ ನಾವು ಪತ್ರ ಬರೆದೆವು. ಹದಿನೈದು ದಿನದೊಳಗೆ ಎಲ್ಲರೂ ಅವರ ಉಪಸ್ಥಿತಿಯನ್ನು ದೃಢೀಕರಿಸಿದರು. ಎಲ್ಲ ಮುಖ್ಯಮಂತ್ರಿಗಳು ಹೀಗೆ ಭಾಗವಹಿಸಿ ಈಗಿರುವ ನದಿಗಳ ಕಾರ್ಯನೀತಿಯನ್ನು ಬದಲಾಯಿಸಿ ಅವುಗಳನ್ನು ಪುನರುಜ್ಜೀವನಗೊಳಿಸಬೇಕೆಂದು ಒಟ್ಟಾಗಿ ಹೇಳುತ್ತಿರುವುದು ಇದೇ ಮೊದಲು.
ಇಲ್ಲಿಯವರೆಗೆ ನದಿಯ ಕಾರ್ಯನೀತಿಗಳು ನದಿಯ ನೀರನ್ನು ಹಂಚಿಕೊಳ್ಳುವುದು ಹೇಗೆ ಅನ್ನುವುದೊಂದನ್ನೇ ಹೇಳುತ್ತವೆ. ಹೇಗೆ ನದಿಗಳನ್ನು ರಕ್ಷಿಸಬೇಕು, ಅವುಗಳನ್ನು ಹೇಗೆ ಜೀವಂತ ಮಾಡಬೇಕು ಎಂದು ಹೇಳುವುದಿಲ್ಲ. ಆದ್ದರಿಂದ ನದಿಯನ್ನು ಜೀವಂತಗೊಳಿಸಿ ವರ್ಷದುದ್ದಕ್ಕೂ ಹರಿಯುವಂತೆ ಮಾಡುವುದು ಕೇವಲ ಬೆಂಗಳೂರು ನಗರದ ನೀರಿಗೋಸ್ಕರ ಅಲ್ಲ. ಭಾರತದಲ್ಲಿ ಸುಮಾರು ಸಾವಿರ ಜಾತಿಗಳ ಮತ್ತು ಹಲವು ಜಲಚರ ಪ್ರಾಣಿಗಳು ಸಿಹಿನೀರಿನಲ್ಲಿ ವಾಸಿಸುತ್ತವೆ. ಇಡೀ ಜಗತ್ತಿನಲ್ಲಿ ನಮ್ಮ ದೇಶದಲ್ಲಿ ಮಾತ್ರ ಸಿಹಿನೀರಿನಲ್ಲಿ ಇಷ್ಟೊಂದು ಜೀವಿಗಳಿವೆ. ನಮ್ಮ ನದಿಗಳು ರುತುವಿಗೆ ತಕ್ಕಾಗೆ ಹರಿದರೆ ಈ ಜೀವಿಗಳು ಸಾಯುತ್ತವೆ. ಸದ್ಯಕ್ಕೆ ಇಂತಹ ಜೀವಿಗಳಲ್ಲಿ ಯಾವುದು ಅಳಿದು ಹೋಗಿದೆ ಎಂದು ಏನು ಹೇಳಲು ಯಾವ ಸಂಶೋಧನೆ ಕೂಡ ನಡೆದಿಲ್ಲ. ಒಂದು ವೇಳೆ ನೀವು ಸಂಶೋಧನೆ ಮಾಡಿದರೆ ಅದರ ಫಲಿತಾಂಶಗಳು ಆಘಾತಕಾರಿ ಆಗಿರುವುದರಲ್ಲಿ ಯಾವ ಸಂಶಯವಿಲ್ಲ. ಇದು ಏಕೆಂದರೆ ಪ್ರಮುಖ ನದಿಗಳು ಬತ್ತಿ ಹೋಗುತ್ತಿವೆ.
ಕಾವೇರಿ ಸುಮಾರು ಮೂರರಿಂದ ಮೂರುವರೆ ತಿಂಗಳು ಬತ್ತಿಹೋಗುತ್ತದೆ. ಸಾಗರ ಸೇರಲು ಇನ್ನೂ 120ಕಿಲೋ ಮೀಟರ್ ದೂರ ಇದ್ದಾಗ ಕಾವೇರಿ ಬತ್ತಿ ಹೋಗುತ್ತದೆ. ಕಾವೇರಿಯ ಒಟ್ಟೂ ಉದ್ದ 870 ಕಿಲೋ ಮೀಟರ್. ತಮಿಳುನಾಡಿನಲ್ಲಿ ಅದು 430 ಕಿ.ಮೀ ಹರಿಯುತ್ತದೆ. ಹಾಗಾಗಿ, ನಾನು ತಮಿಳುನಾಡಿನ ರೈತರ ಜೊತೆ ಮಾತನಾಡುತ್ತಿದ್ದೆ. ಇನ್ನೂ 25ವರ್ಷಗಳಲ್ಲಿ ಹೋರಾಡಲು ನಿಮಗೆ ಏನೂ ಇರುವುದಿಲ್ಲ. ಏಕೆಂದರೆ ನಿಮ್ಮ ರಾಜ್ಯದಲ್ಲಿ ಕಾವೇರಿ ಹರಿಯುವುದಿಲ್ಲ ಅಂದು ಹೇಳಿದೆ. ಆದ್ದರಿಂದ ರಾಜ್ಯಗಳ ಏಕಕಾಲೀನತೆ ಬಹಳ ಮುಖ್ಯ. ಹಾಗಾಗಿ ನಾವು 16 ರಾಜ್ಯಗಳ ಪ್ರವಾಸ ಕೈಗೊಂಡಿದ್ದೇವೆ. ಈ ಎಲ್ಲ ರಾಜ್ಯಗಳಲ್ಲಿ ಬಹಳ ಕೃಷಿ ಕಾರ್ಯಗಳು ನಡೆಯುತ್ತವೆ. ಈಶಾನ್ಯ ರಾಜ್ಯಗಳು ಅಷ್ಟೊಂದು ಕೃಷಿ ಪ್ರಧಾನ ರಾಜ್ಯಗಳಲ್ಲ. ಅವುಗಳಲ್ಲಿ ಶೇಕಡಾ 25ರಷ್ಟು ಕಾಡುಗಳಿವೆ.
ಈಗ ಇನ್ನೊಂದು ಒಳ್ಳೆಯ ಸಂಗತಿಯೇನೆಂದರೆ ಇಂಥ ಕಾನೂನನ್ನು ತಂದರೆ ನೀವು ಬಹಳ ಪ್ರಯತ್ನಿಸಿದರೆ ಹತ್ತರಿಂದ ಹದಿನೈದು ವರ್ಷಗಳು ಇದನ್ನು ಅಳವಡಿಸಬೇಕು. ಒಂದು ವೇಳೆ ಅಳವಡಿಸಿದರೆ ನದಿಗಳ ನೀರು ಹೆಚ್ಚಾಗಲು ಇನ್ನೂ 5-10 ವರ್ಷಗಳವರೆಗೆ ಕಾಯಬೇಕು. ಅಂದರೆ ಈ ಕಾರ್ಯನೀತಿ ಫಲಿಸಬೇಕಾದರೆ 20-25ವರ್ಷಗಳು ಕಾಯಬೇಕು. ಇದು ಚುನಾವಣೆ ಗೆದ್ದು ಕೊಡುವ ಕಾರ್ಯತಂತ್ರವಲ್ಲ. ಆದರಿಂದ ನಾವು ಮತ ಶಬ್ದವನ್ನು ಪ್ರಯೋಗಿಸುತ್ತಿದ್ದೇವೆ. ಇದು ನದಿಗಳಿಗಾಗಿ ನಿಮ್ಮ ಮತ. ನೀವು ಕಾಂಗ್ರೆಸ್ ಅಥವಾ ಬಿಜೆಪಿಗೆ ಹಾಕುವ ಮತವಲ್ಲ. ನೀವು ನದಿಗಳಿಗೆ ಮತ ಹಾಕುವಿರಿ. ನಮಗೆ 30 ಕೋಟಿ ಕರೆಗಳ ಅಗತ್ಯವಿದೆ. ಇದು ಏಕೆಂದರೆ 20-25ವರ್ಷಗಳ ತರುವಾಯ ಫಲಿತಾಂಶ ಕೊಡುವ ಈ ಕಾರ್ಯನೀತಿಯನ್ನು ಜಾರಿಗೆ ತರಲು ಸರಕಾರಕ್ಕೆ ಹಣಕಾಸು ಸಮಸ್ಯೆಗಳು ಮತ್ತು ಕಾರ್ಯಗತಗೊಳಿಸಲು ಬಹಳ ತೊಂದರೆಗಳು ಆಗುತ್ತವೆ. ಆದರೆ ನಾವು ಧೃಡ ಮನಸ್ಸು ಮಾಡಿದರೆ ಭಾರತೀಯರು ನಾವು ಪ್ರೌಢ ಪ್ರಜೆಗಳು ಎಂದು ಸಾಬೀತು ಪಡಿಬೇಕು.
ಕೇವಲ ಒಂದು ಸೀರೆಗೋಸ್ಕರ ಒಂದು ಧೋತಿಗೋಸ್ಕರ ಇಲ್ಲಾ ಸ್ವಲ್ಪ ಹಣಕ್ಕೋಸ್ಕರ ಮತ ಕೊಡುವವರು ನಾವಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು. ಇದು ಮುಂದಿನ ಪೀಳಿಗೆಗೋಸ್ಕರ ಮಾಡುವ ಇಂತಹ ಒಂದು ಯೋಜನೆಗೆ ನಮ್ಮ ಬೆಂಬಲವಿದೆ ಎಂದು ನೀವು ಮಿಸ್ಡ್ ಕಾಲ್ ಮೂಲಕ ಹೇಳುವಿರಿ. ಅದು ಬಹಳ ಮುಖ್ಯ. ಪ್ರಜಾತಂತ್ರದ ಸರಕಾರದಲ್ಲಿದ್ದವರು 5ವರ್ಷಗಳಾದ ಮೇಲೆ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಗಳಿಸುವುದು ಹೇಗೆ ಎಂದು ಯೋಚಿಸುತ್ತಿರುತ್ತಾರೆ. ಚುನಾವಣೆಯನ್ನು ಮೀರಿ ರಾಜಕೀಯ ನೇತೃತ್ವದ ವಿಚಾರವನ್ನು ಮೀರಿ ನಮ್ಮ ನೇತಾರರು ಮುಂದಿನ ಪೀಳಿಗೆಯವರಿಗೆ ಒಳ್ಳೆಯದನ್ನು ಮಾಡಲು ಯೋಚಿಸಬೇಕು. ಮಾಡಬೇಕು. ಇದು ಆಗಬೇಕಾದರೆ ನಿಮ್ಮ ಮತವನ್ನು ಸಾರಬೇಕು. ನಿಮ್ಮ ಹೊಣೆಗಾರಿಕೆಯನ್ನು ಸಾರಬೇಕು. ಭಾರತದ ದೂರಾವದಿಯ ಯೋಗಕ್ಷೇಮಕ್ಕೆ ನಮ್ಮ ಬೆಂಬಲವಿದೆ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಬೇಕು.