ಪ್ರಮುಖ ಸುದ್ದಿ
‘ಲಿಂಗಾಯತ ಧರ್ಮ’ ಪರಾಮರ್ಶೆ ಸಮಿತಿ ರಚನೆ : ರಂಭಾಪುರಿಶ್ರೀ ಆಕ್ರೋಶ
ಗದಗ: ರಾಜ್ಯ ಸರ್ಕಾರ ತರಾತುರಿಯಲ್ಲಿ ಲಿಂಗಾಯತ ಧರ್ಮ ಪ್ರಸ್ತಾವನೆ ಬಗ್ಗೆ ಪರಾಮರ್ಶೆ ಸಮಿತಿ ರಚಿಸಿದೆ ಎಂದು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಶ್ರೀ ಆರೋಪಿಸಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಮನವಿ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಅದ್ಯಾವುದನ್ನು ಪರಿಗಣಿಸಿಲ್ಲ. ಸಿಎಂ ಸಿದ್ಧರಾಮಯ್ಯ ಅವರು ಒಡೆದು ಆಳುವ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರ ಸೌಲಭ್ಯಕ್ಕಾಗಿ ಪ್ರತ್ಯೇಕ ಲಿಂಗಾಯತ ಧರ್ಮದ ಪರ ಹೋರಾಟಕ್ಕೆ ಕೆಲ ಮಠಾಧೀಶರು ಮಾರು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ನಾಳೆ ಗದಗ ನಗರದಲ್ಲಿ ವೀರಶೈವ ಲಿಂಗಾಯತ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಸಾವಿರಾರು ಮಠಾಧೀಶರು, ಐದು ಲಕ್ಷಕ್ಕೂ ಅಧಿಕ ಜನ ಭಾಗಿಯಾಗಲಿದ್ದಾರೆ. ಸಮಾವೇಶದಲ್ಲಿ ಚರ್ಚಿಸಿ ನಮ್ಮ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಂಭಾಪುರಿ ಶ್ರೀ ತಿಳಿಸಿದ್ದಾರೆ.