ಪ್ರಮುಖ ಸುದ್ದಿ
ಕರ್ನಾಟಕ ರಾಜ್ಯಾದ್ಯಂತ ಶನಿವಾರ, ಕರಾವಳಿಯಲ್ಲಿ ಮಾತ್ರ ಶುಕ್ರವಾರ ಈದ್ ಉಲ್ ಫಿತರ್ ಆಚರಣೆ
ಬೆಂಗಳೂರು : ರಾಜ್ಯದಾದ್ಯಂತ ಜೂನ್ 16ರ ಶನಿವಾರ ಮುಸ್ಲಿಂ ಸಮುದಾಯದ ಈದ್ ಉಲ್ ಫಿತರ್ ಆಚರಿಸಲಾಗುತ್ತಿದೆ. ಆದರೆ, ಕರಾವಳಿ ಭಾಗದಲ್ಲಿ ಮಾತ್ರ ನಾಳೆ ಶುಕ್ರವಾರವೇ ಈದ್ ಉಲ್ ಫಿತರ್ ಆಚರಣೆ ಮಾಡಲಾಗುವುದು ಎಂದು ರಾಜ್ಯ ಚಂದ್ರ ದರ್ಶನ ಸಮಿತಿ ಮಾಹಿತಿ ನೀಡಿದೆ.
ಇಂದು ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೋರ್ಡ್‌ನ ಕೇಂದ್ರ ಕಚೇರಿಯಲ್ಲಿ ನಡೆದ ಚಂದ್ರ ದರ್ಶನ ಸಮಿತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೌಲಾನ ಸಗೀರ್ ಅಹ್ಮದ್ ಖಾನ್ ಈ ಬಗ್ಗೆ ತಿಳಿಸಿದ್ದಾರೆ.
ರಾಜ್ಯದ ಯಾವುದೇ ಭಾಗದಲ್ಲಿ ಚಂದ್ರ ದರ್ಶನವಾದ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಶನಿವಾರ ರಮಝಾನ್ ಹಬ್ಬವನ್ನು ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಆದರೆ ಕೇರಳದ ಕ್ಯಾಲಿಕಟ್ ನಲ್ಲಿ ಚಂದ್ರದರ್ಶನವಾದ ಬಗ್ಗೆ ಖಚಿತಪಡಿಸಿರುವ ಖಾಝಿಗಳು ಕರಾವಳಿ ಭಾಗದಲ್ಲಿ ಶುಕ್ರವಾರ ಈದುಲ್ ಫಿತ್ರ್ ಆಚರಿಸಲು ಕರೆ ನೀಡಿದ್ದಾರೆ.