ರಮೇಶ ಆತ್ಮಹತ್ಯೆಗೆ ಓನ್ಲಿ ಐಟಿ ಕಾರಣವಾ.? ಬೇರೆ ಇನ್ನೇನೋ ಇದೆನಾ.?
ರಮೇಶ ಆತ್ಮಹತ್ಯೆಗೆ ಕಾರಣವೇನು.?
ರಮೇಶ ಆತ್ಮಹತ್ಯೆಗೆ ಐಟಿ ಕಿರುಕುಳ ಎಂದರೆ ನಂಬಲರ್ಹವೇ.?
–ಮಲ್ಲಿಕಾರ್ಜುನ ಮುದನೂರ
ಮಾಜಿ ಡಿಸಿಎಂ ಜಿ.ಪರಮೇಶ್ವರರ ಆಪ್ತ ಸಹಾಯಕನಾಗಿದ್ದ ರಮೇಶ ಹತ್ಯೆಗೆ ಐಟಿ ಅಧಿಕಾರಿಗಳೇ ಕಾರಣ ಎಂದು ಕಾಂಗ್ರೆಸ್ ನ ಹಿರಿಯ ನಾಯಕರೆಲ್ಲರೂ ಆರೋಪಿಸುತ್ತಿದ್ದಾರೆ. ಆದರೆ ಐಟಿ ಅಧಿಕಾರಿಗಳು ರಮೇಶ ಮನೆ ಮೇಲೆ ದಾಳಿಯೇ ನಡೆಸಿರುವದಿಲ್ಲ. ವಿಚಾರಣೆಯೂ ಮಾಡಿಲ್ಲ ಎಂದು ಸ್ಪಷ್ಟನೆ ನೀಡುತ್ತಿದೆ.
ಆದಾಗ್ಯು ವಿಚಾರಣೆ ನಡೆಸುವ ವೇಳೆ ಐಟಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಅದರಿಂದಲೇ ರಮೇಶ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ.
ಅಲ್ಲದೆ ರಮೇಶ ಆತ್ಮಹತ್ಯೆಗೂ ಮುಂಚೆ ಸ್ನೇಹಿತರ ಜೊತೆ ಮಾತನಾಡಿದ್ದಾನೆ. ಡೆತ್ ನೋಟ್ ಬರೆದಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಇದೆಲ್ಲಾ ನಿಜವಾ..ಡಿಸಿಎಂ ಆಪ್ತ ಸಹಾಯಕನಾಗಿ ಕೆಲಸ ನಿರ್ವಹಿಸುವ ರಮೇಶನಿಗೆ ಐಟಿ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಕುಬ್ಜ ಮನಸ್ಸುಳ್ಳವನಾಗಿದ್ದನಾ.? ಪರಮೇಶ್ವರರ ಆಪ್ತ ಸಹಾಯಕ.
ಅಷ್ಟೊಂದು ತಾಳ್ಮೆ ಅಥವಾ ಅಷ್ಟೊಂದು ಕಾನೂನಿನ ಜ್ಞಾನ ಹೊಂದಿರದ ವ್ಯಕ್ತಿಯಾಗಿದ್ದನಾ ರಮೇಶ. ಮತ್ತು ಇಂತಹ ವ್ಯಕ್ತಿಯನ್ನ ಪರಮೇಶ್ವರರು ತಮ್ಮ ಆಪ್ತ ಸಹಾಯಕನ ಹುದ್ದೆ ನಿಭಾಯಿಸುವ ಜವಬ್ದಾರಿ ನೀಡಿದ್ದರಾ.? ಹಾಗಾದರೆ, ಅಕ್ರಮವಾಗಿ ಹಣ ಗಳಿಸಿಟ್ಟಿದ್ದೇ ನಿಜವಿದೆ, ನನ್ನ ಮಾನ ಹರಾಜಾಯಿತು ಎಂದುಕೊಂಡು ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವದೇ ಸತ್ಯವೇ.? ಇಂತಹ ಹತ್ತು ಹಲವು ಪ್ರಶ್ನೆಗಳು ಜನರ ಮನದಲ್ಲಿ ಕೊರೆಯುತ್ತಿವೆ.
ಇನ್ನೊಂದಡೆ ಐಟಿ ಅಧಿಕಾರಿಗಳು ರಮೇಶ ಮನೆ ಮೇಲೆ ದಾಳಿ ನಡೆಸಿಲ್ಲ. ವಿಚಾರಣೆ ಸಹ ಮಾಡಿಲ್ಲ. ಆತನ ಮನೆ ಮೇಲೂ ದಾಳಿ ನಡೆಸಿರುವದಿಲ್ಲ. ಕೇವಲ ಪಂಚನಾಮೆ ವೇಳೆ ಮಾತ್ರ ಆತನ ಸಹಿ ಪಡೆಯಲಾಗಿದೆ. ಪರಮೇಶ್ವರರ ಮನೆ ಮೇಲೆ ದಾಳಿ ನಡೆಸಿದಾಗ ರಮೇಶ ಪರಮೇಶ್ವರರ ಮನೆಗೆ ಬಂದಿದ್ದರು. ನಾವು ಪರಶೀಲನೆ ನಡೆಸುತ್ತಿರುವ ವೇಳೆ ಅಲ್ಲಿಯೇ ಇದ್ದರು. ಹೀಗಾಗಿ ಪಂಚನಾಮೆಯಲ್ಲಿ ಆತನ ಸಹಿ ಪಡೆದಿದ್ದೇವೆ ಅಷ್ಟೆ ಎಂದು ಐಟಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಆದರೆ, ರಮೇಶ ಆತ್ಮಹತ್ಯಗೆ ಐಟಿ ಅಧಿಕಾರಿಗಳೇ ಕಾರಣ ಎಂದು ಕಾಂಗ್ರೆಸ್ ನವರಿಂದ ಎಲ್ಲೆಡೆ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ರಮೇಶ ಆತ್ಮಹತ್ಯೆ ಪ್ರಕರಣ ಮುಂದೆ ಯಾವ ಹಂತ ತಲುಪಲಿದೆ, ಯಾರ ಕೊರಳಿಗೆ ಉರುಳಾಗಲಿದೆ ಎಂಬುದು ಕಾಯ್ದು ನೋಡಬೇಕು.
ಇನ್ನೊಂದಡೆ ಈಗಾಗಲೇ ಐಟಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಆತ್ಮಹತ್ಯೆ ಮಾಡಿಕೊಂಡ ರಮೇಶನ ಸಹೋದರ ಸತೀಶ, ಅಣ್ಣನ ಸಾವಿಗೆ ಐಟಿ ಅಧಿಕಾರಿಗಳೇ ಕಾರಣ ಅವರ ವಿರುದ್ಧ ದೂರು ದಾಖಲಿಸುವೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡುತ್ತಿದ್ದಾರೆ.
ಒಟ್ಟಾರೆ ಈ ಪ್ರಕರಣ ಹಲವಾರು ಆಯಾಮಗಳನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಪೊಲೀಸರು ಸಮರ್ಪಕ ತನಿಖೆಕೈಗೊಂಡ ನಂತರವೇ ನಿಜಾಂಶ ಹೊರಬರಲಿದೆ. ಪ್ರಸ್ತುತ ಕಾಲ ಅದರಲ್ಲೂ ರಾಜಕೀಯ ನಾಯಕರ ಒಡನಾಡ ಬಲ್ಲವನಾಗಿದ್ದ ರಮೇಶ ಐಟಿ ದಾಳಿಗೆ ಆತಂಕ ಪಟ್ಟು ತನ್ನ ಜೀವ ಕಳೆದುಕೊಳ್ಳುವಂತ ಸ್ಥಿತಿಗೆ ತಲುಪಿದ್ದಾನೆ ಎಂಬುದು ನಂಬಲಾಗುತ್ತಿಲ್ಲ ಎನ್ನುತ್ತಿವೆ ರಾಜಕೀಯ ತಜ್ಞರ ಅಭಿಪ್ರಾಯ.
ರಾಜಕೀಯದಲ್ಲಿ ಇಷ್ಟೊಂದು ಮೃದು, ಮುಗ್ಧ ಸ್ವಭಾವ ಮತ್ತು ಸ್ವಾಭಿಮಾನ ಹೊಂದಿದ್ದು ರಾಜಕೀಯ ವಲಯದಲ್ಲಿ ಕೆಲಸ ಮಾಡುವದು ತುಸು ಕಷ್ಟದ ಕೆಲಸ ಎನಿಸುತ್ತದೆ. ಆಗಂತ ಎಲ್ಲರೂ ಅಪ್ರಾಮಾಣಿಕರೇ ಇಂತಜ ಕೆಲಸ ಮಾಡುತ್ತಾರೆ ಎಂದರೂ ತಪ್ಪಾಗುತ್ತದೆ.
ರಮೇಶನ ಆತ್ಮಹತ್ಯೆ ಪ್ರಕರಣದಲ್ಲಿ ನಿಜಾಂಶ ಹೊರ ಬರುತ್ತಿಲ್ಲ ಬೇರೆಯದ್ದೆ ಕಥೆ ಇದೆ ಎಂದು ಜನರ ಅಭಿಮತವಾಗಿದೆ. ಕಾಫಿ ಡೇ ಮಾಲೀಕ ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣದಲ್ಲಿ ಹತ್ತು ಹಲವು ರಹಸ್ಯ ಅಡಗಿರುವಂತೆ, ಇಲ್ಲೂ ರಮೇಶನ ಪ್ರಕರಣದಲ್ಲಿ ರಹಸ್ಯ ಅಡಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ನಮಾಜು ಮಾಡಲು ಹೋಗಿ ಮಸೀದಿಯೇ ಕೊರಳಿಗೆ ಬಿತ್ತು ಎನ್ನುವಂತೆ ಮುಂದೆ ಈ ಪ್ರಕರಣ ಹಲವು ಟ್ವಿಸ್ಟ್ ಗೆ ಕಾರಣವಾದರೂ ಅಚ್ಚರಿ ಪಡುವಂತಿಲ್ಲ ಎಂದು ರಾಜಕೀಯ ವಿಚಾರವಂತರ ಅಭಿಪ್ರಾಯವಾಗಿದೆ.