ನೆರೆ ಸಂತ್ರಸ್ತರಿಗೆ 1 ಕೋಟಿಗೂ ಅಧಿಕ ಸಾಮಾಗ್ರಿ ಸಂಗ್ರಹ-ರಾಮಲಿಂಗಾರಡ್ಡಿ
ಉಕ ನೆರೆ ಸಂತ್ರಸ್ತರಿಗೆ 6 ಟ್ರಕ್ ಸಾಮಾಗ್ರಿ ನೆರವು-ರಾಮಲಿಂಗಾರಡ್ಡಿ ಚಾಲನೆ
ಬೆಂಗಳೂರಃ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ಸಲುವಾಗಿ ಬಿಟಿಎಂ ವಿಧಾನಸಭಾ ಕ್ಷೇತ್ರದಿಂದ ಸಂಗ್ರಹಿಸಿದ್ದ ₹1.10 ಕೋಟಿ ಮೊತ್ತದ ಪರಿಹಾರ ಸಾಮಗ್ರಿಗಳನ್ನು ಹುನಗುಂದ ಮತ್ತು ನರಗುಂದ ತಾಲ್ಲೂಕು, ಬಾಗಲಕೋಟೆ ಮತ್ತು ಮುಧೋಳ ತಾಲ್ಲೂಕು ಹಾಗೂ ಬೀಳಗಿ ತಾಲ್ಲೂಕಿನ ವಿವಿಧ ಭಾಗಗಳಿಗೆ ತೆರಳಲು ಶಾಸಕರಾದ ಶ್ರೀ ರಾಮಲಿಂಗಾರೆಡ್ಡಿ ಅವರು ವಿವಿಧ ಸಾಮಾಗ್ರಿಗಳು ತುಂಬಿದ್ದ 6 ಟ್ರಕ್ ಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಕ್ಷೇತ್ರದ ಎಲ್ಲಾ ವಾರ್ಡ್ ಗಳ ಪಾಲಿಕೆ ಸದಸ್ಯರಾದ ಶ್ರೀ ಬಿ.ಎನ್. ಮಂಜುನಾಥ ರೆಡ್ಡಿ, ಶ್ರೀ ಜಿ. ಮಂಜುನಾಥ್, ಶ್ರೀಮತಿ ಮಂಜುಳಾ ಸಂಪತ್, ಶ್ರೀ ಚಂದ್ರಪ್ಪ, ಶ್ರೀ ರಾಮಚಂದ್ರ , ಶ್ರೀ ಅಶೋಕ್ ರೆಡ್ಡಿ, ಅನೇಕ ಮುಖಂಡರು, ವ್ಯಾಪಾರಿಗಳು ಮತ್ತು ಜನರಿಂದ ಈ ಪರಿಹಾರ ಕಾರ್ಯಕ್ಕೆ ಉದಾರ ಸ್ಪಂದನೆ ದೊರೆತಿದ್ದು, ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಶ್ರೀ ರಾಮಲಿಂಗಾರೆಡ್ಡಿ ರವರು ಧನ್ಯವಾದ ಅರ್ಪಿಸಿದರು.
ಕಷ್ಟದಲ್ಲಿರುವ ಜನರಿಗೆ ಅಪಾರ ಸಹಾಯ ಹಸ್ತ ಚಾಚಿದ ಜನರ ಮಾನವೀಯತೆಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಮನುಷ್ಯನ ಸಂಕಟ ಮನುಷ್ಯತ್ವ ಇರುವವರಿಗೆ ಅರಿವಿಗೆ ಬರಲಿದೆ. ಮನುಷ್ಯರೇ ಸಹಾಯ ಸಹಕಾರ ತೋರುವದು ನಮ್ಮೆಲ್ಲರ ಕರ್ತವ್ಯ ಜನರ ಸ್ಪಂಧನೆ ಅತೀವ ತೃಪ್ತಿ ತಂದಿದೆ ಎಂದರು.