ಕಲಾವಿದ ಹಾಗರಗುಂಡಗಿಗೆ ಪದ್ಮಶ್ರೀ ಪ್ರಶಸ್ತಿ ದೊರೆಯಲಿ- ರಂಜಾನ್ ದರ್ಗಾ
ಕಲಬುರಗಿಯ ವಿಜಯ ಸಿದ್ಧರಾಮಪ್ಪ ಹಾಗರಗುಂಡಗಿ ಅವರು 63 ರ ಹರೆಯದ ಅಭಿಜಾತ ಕಲಾವಿದರು.
ಚಿಕಣಿ (ಮಿನಿಯೇಚರ್) ಕಲೆಯಲ್ಲಿ ಅವರದು ಎತ್ತಿದ ಕೈ. ಅದು ‘ವಿಜಯ ಹಾಗರಗುಂಡಗಿ ಶೈಲಿಯ ಮಿನಿಯೇಚರ್ ಆರ್ಟ್’ ಎಂದೇ ಪ್ರಸಿದ್ಧವಾಗಿದೆ.
ಇಲ್ಲಿಯವರೆಗೆ 700 ಮಿನಿಯೇಚರ್ ಕೃತಿಗಳನ್ನು ರಚಿಸಿದ್ದಾರೆ.
ಪರಂಪರಾಗತವಾದ ಈ ಚಿಕಣಿ ಕಲೆ ಅವರ ಕೈಯಲ್ಲಿ ಆಧುನಿಕ ಸ್ಪರ್ಶ ಪಡೆದಿದೆ. ಜೇಡರ ಬಲೆಗಿಂತಲೂ ಸೂಕ್ಷ್ಮವಾದ ಗೆರೆಗಳ ಮೂಲಕ ಚಿಕಣಿ ಕಲೆಯನ್ನು ಸೃಷ್ಟಿಸಿ ಕಲಾಜಗತ್ತಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
400 ವರ್ಷಗಳ ಇತಿಹಾಸ ಹೊಂದಿರಃವ ಸುರಪುರದ ಗರುಡಾದ್ರಿ ಶೈಲಿಗೆ ಮರುಜೀವ ನೀಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ದೇಶದ ಪ್ರಮುಖ ನಗರಗಳಷ್ಟೇ ಅಲ್ಲದೆ ಲಂಡನ್, ಬುಷೆಲ್ಸ್ ಮುಂತಾದ ಕಡೆಗಳಲ್ಲಿ ಕೂಡ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.
ವಿಜಯ ಹಾಗರಗುಂಡಗಿ ಅವರು ಅನನ್ಯವಾಧ ಪುರಾತನ ಕಲಾತ್ಮಕ ವಸ್ತು, ಮೂರ್ತಿ ಮುಂತಾದ ಸಹಸ್ರಾರು ಕಲಾಕೃತಿಗಳನ್ನು ಸಂಗ್ರಹಿಸಿದ್ದಾರೆ.
ಅವರಿಗೆ ನಾಲ್ಕು ಬಾರಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿಗಳು ದೊರಕಿವೆ. ನವದೆಹಲಿಯ ಆಲ್ ಇಂಡಿಯಾ ಫೈನ್ ಆರ್ಟ್ಸ್ ಸೊಸೈಟಿಯ ಪ್ರಶಸ್ತಿಯೂ ದೊರಕಿದೆ.
ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಗಲ್ಬರ್ಗಾ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಿಕ್ಕಿದೆ.
ವಿಜಯ ಹಾಗರಗುಂಡಗಿ ಅವರು ಎಲ್ಲ ರೀತಿಯಿಂದಲೂ ಪದ್ಮಶ್ರೀ ಪ್ಲಶಸ್ತಿಗೆ ಅರ್ಹರಾಗಿದ್ದಾರೆ.
ನನ್ನ ಆತ್ಮೀಯರು ಮತ್ತು ಇತರ ಗುಣಗ್ರಾಹಿಗಳು, ಈ ನನ್ನ ವಿಚಾರಗಳು ಭಾರತ ಸರ್ಕಾರಕ್ಕೆ ತಲಪುವ ಹಾಗೆ ಶೇರ್ ಮಾಡಬೇಕಾಗಿ ಮನವಿ.
–ರಂಜಾನ್ ದರ್ಗಾ.
ಧಾರವಾಡ.