ಪ್ರಮುಖ ಸುದ್ದಿ
ರಂಜನ್ ಗೊಗೊಯ್ ಇಂದು ನಿವೃತ್ತಿಃ z+ ಭದ್ರತೆ ಮುಂದುವರಿಕೆ
ನ್ಯಾಯಮೂರ್ತಿ ರಂಜನ್ ಗೊಗೊಯ್ ಇಂದು ನಿವೃತ್ತಿ
ನವದೆಹಲಿಃ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಇಂದು ನ.17 ರಂದು ನಿವೃತ್ತಿ ಹೊಂದಲಿದ್ದಾರೆ.
ನಿವೃತ್ತಿ ನಂತರದ ಜೀವನವನ್ನು ಅವರು ಅಸ್ಸಾಂನಲ್ಲಿ ಕಳೆಯಲಿದ್ದಾರೆ ಎನ್ನಲಾಗಿದೆ. ಅಯೋಧ್ಯ ತೀರ್ಪು ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇತರೆ ನಾಲ್ವರು ನ್ಯಾಯಮೂರ್ತಿ ಗಳಿಗೆ z+ ಭದ್ರತೆ ನೀಡಲಾಗಿದೆ.
ಅಯೋಧ್ಯ ಪ್ರಕರಣದ ಬಹು ಸೂಕ್ಷ್ಮತೆ ಅರಿತ ಕೇಂದ್ರ ಸರ್ಕಾರ, ಪೊಲೀಸ್ ಇಲಾಖೆ ನ್ಯಾಯಮೂರ್ತಿ ಗಳ ಭದ್ರತೆಯನ್ನು z+ ಗೆ ಏರಿಸಲಾಗಿದೆ ಎಂದು ತಿಳಿದು ಬಂದಿದೆ.