ಇಂದಿನ ರಾಶಿ ಫಲ ನಿಮ್ಮ ವಿನಯವಾಣಿಯಲ್ಲಿ.! 29-05-2019
ಶ್ರೀ ಗಣಪತಿ ದೇವರ ಅನುಗ್ರಹದಿಂದ ಈ ದಿನದ ರಾಶಿ ಫಲ ವನ್ನು ನೋಡೋಣ.
ಜ್ಯೋತಿಷ್ಯರು ಗಿರಿಧರ ಶರ್ಮ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262
ಮೇಷ ರಾಶಿ
ಕ್ರಿಯಾಶೀಲತೆ ಚಟುವಟಿಕೆಗಳಿಂದ ಆರೋಗ್ಯ ವೃದ್ಧಿಸಿಕೊಳ್ಳಿ. ಆರ್ಥಿಕ ವ್ಯವಹಾರ ಒಪ್ಪಂದಗಳನ್ನು ಆರಿಸಿಕೊಳ್ಳುವಾಗ ಜಾಗ್ರತೆಯಿಂದಿರಿ, ಮೋಸದ ಜಾಲಕ್ಕೆ ಸಿಲುಕುವ ಸಾಧ್ಯತೆ ಇದೆ. ಕುಟುಂಬಸ್ಥರ ಆರೋಗ್ಯದ ಕಡೆಗೆ ಗಮನ ನೀಡುವುದು ಒಳಿತು. ನಿಮ್ಮ ಕೆಲಸದ ಶ್ರದ್ಧೆಯಿಂದ ಆದಾಯವು ಹೆಚ್ಚಾಗುತ್ತದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ವೃಷಭ ರಾಶಿ
ಮನೆಯವರೊಡನೆ ಕಾಲಕಳೆಯುವುದು ನಿಮಗೆ ಸಂತೋಷ ತಂದು ಕೊಡುತ್ತದೆ. ದುಂದುವೆಚ್ಚಗಳಿಗೆ ಕಡಿವಾಣ ಹಾಕದಿದ್ದಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು. ನಿಮ್ಮ ವಿಚಾರಗಳನ್ನು ಅಪಾರ್ಥ ಮಾಡಿಕೊಳ್ಳುವ ಸಂಭವ ತೆಯಿದೆ ಎಚ್ಚರವಿರಲಿ. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ಬರುವತನಕ ಗೋಪ್ಯವಾಗಿ ಇಡುವುದು ಕ್ಷೇಮ. ಪತ್ನಿಯ ಪ್ರೇಮವನ್ನು ಕಡೆಗಣಿಸುವುದು ಒಳ್ಳೆಯದಲ್ಲ. ಮಕ್ಕಳ ಉದ್ಯೋಗದಲ್ಲಿ ಹೆಚ್ಚಿನ ನಿರೀಕ್ಷೆ ಕಾಣಬಹುದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಿಥುನ ರಾಶಿ
ನೀವು ತೆಗೆದುಕೊಳ್ಳುವ ನಿಲುವುಗಳು ಉತ್ತಮ ಮತ್ತು ಯಶಸ್ವಿ ದಾಯಕವಾಗಿರುತ್ತದೆ. ಕೆಲವು ಸಂಗತಿಗಳು ನಿಮ್ಮ ಗೌರವನ್ನು ಹೆಚ್ಚಾಗಿಸುತ್ತದೆ. ಕಾರ್ಯನಿಮಿತ್ತ ಪ್ರಯಾಣ ಕೈಗೊಳ್ಳುವ ನಿರೀಕ್ಷೆಯಿದೆ. ವ್ಯರ್ಥ ಧನಹಾನಿ ನಿಮ್ಮನ್ನು ಸಂಕಷ್ಟಕ್ಕೆ ಎಡೆಮಾಡಿ ಕೊಡುವುದು. ಆರ್ಥಿಕ ಸಂಕಷ್ಟಗಳಿಗೆ ಕುಟುಂಬದ ನೆರವು ದೊರೆಯಲಿದೆ. ನಿಮ್ಮ ಉತ್ಸಾಹಭರಿತ ಚೈತನ್ಯದಾಯಕ ಮನಸ್ಥಿತಿಯಿಂದ ಸಫಲತೆಯನ್ನು ಕಾಣುವಿರಿ. ನಿಮ್ಮ ಪ್ರೀತಿಯ ಜೀವನವನ್ನು ಇನ್ನಷ್ಟು ಉತ್ತಮಪಡಿಸುವ ಕೆಲಸಕ್ಕೆ ಕೈ ಹಾಕಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕಟಕ ರಾಶಿ
ನಿಮ್ಮ ಆರೋಗ್ಯದಲ್ಲಿ ಇಂದು ವ್ಯತ್ಯಾಸ ಕಾಣಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಸ್ಥಾನಮಾನ ನಿರೀಕ್ಷೆ. ಆಕಸ್ಮಿಕವಾಗಿ ಹಳೆಯ ವಸ್ತುಗಳು ನಿಮ್ಮ ಕೈಸೇರಲಿದೆ. ವಿವಾಹಕ್ಕೆ ಉತ್ತಮವಾದ ವಾರ್ತೆ ಕೇಳುವಿರಿ. ಕುಟುಂಬದಲ್ಲಿ ಶುಭಕಾರ್ಯಕ್ಕೆ ಮುಹೂರ್ತ ಇಡುವ ಸಾಧ್ಯತೆ. ವೈಯಕ್ತಿಕವಾಗಿ ಕೆಲವು ಜವಾಬ್ದಾರಿಗಳು ನಿಮ್ಮನ್ನು ಇನ್ನಷ್ಟು ಸದೃಢ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಇಂದು ದೈವ ದೇಗುಲಗಳ ಭೇಟಿನೀಡುವ ಅವಕಾಶ ಸಿಗಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಸಿಂಹ ರಾಶಿ
ಸಕಾರಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ ನಿಮಗೆ ಮತ್ತಷ್ಟು ಬಲವು ಹೆಚ್ಚಾಗಲಿದೆ. ಆರ್ಥಿಕ ವ್ಯವಹಾರದಲ್ಲಿ ಆದಾಯ ನಿರೀಕ್ಷೆ ಮಾಡಿದಂತೆ ನಿಮ್ಮ ಕೈಸೇರುತ್ತದೆ. ಗಣ್ಯವ್ಯಕ್ತಿಗಳ ಜೊತೆಗೆ ಒಡನಾಟ ಹಾಗೂ ಅವರಿಂದ ಕೆಲ ಕಾರ್ಯಸಾಧನೆಗೆ ಅನುಕೂಲವಿದೆ. ನಿಮ್ಮ ಮನದಲ್ಲಿ ಮೂಡಿರುವ ವಿಶೇಷ ಕಾರ್ಯವನ್ನು ತಡಮಾಡದೆ ಪ್ರಾರಂಭಿಸಿ. ಪತ್ನಿಯು ನಿಮಗೆ ಆಶ್ಚರ್ಯ ಪಡುವ ರೀತಿಯಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವರು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ಸೇವನೆ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಹಣದ ಹಿಂದೆ ನಿಮ್ಮ ಕಾರ್ಯತಂತ್ರ ಅತಿವೇಗ ಪಡೆಯಬಹುದಾಗಿದೆ. ಬಂಧುವರ್ಗದವರು ಆಗಮನದಿಂದ ಮನ ಸಂತೋಷ ಆಗುವುದು. ಪರಿಚಯಸ್ತ ರಿಂದ ಉತ್ತಮ ಅವಕಾಶ ಇಂದು ಸಿಗುವುದು. ಕೆಲಸದಲ್ಲಿ ನಿಮ್ಮ ಬದ್ಧತೆಯನ್ನು ಮನಗಂಡು ಬಡ್ತಿ ನೀಡುವ ಸಾಧ್ಯತೆ ಇದೆ. ಪ್ರಣಯಾಸಕ್ತಿ ಸುಮಧುರ ಸಂಜೆ ಕಳೆಯುವಂತೆ ಮಾಡುತ್ತದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ತುಲಾ ರಾಶಿ
ಇಂದು ನಿರೀಕ್ಷಿತ ಕೆಲಸದಲ್ಲಿ ಉತ್ತಮ ಸಾಧನೆ ಆಗಲಿದೆ. ಆತ್ಮವಿಶ್ವಾಸ ಎಂಬುದು ಬಲು ದೊಡ್ಡ ಅಸ್ತ್ರ ನಿಮ್ಮ ಪ್ರತಿಯೊಂದು ಕಾರ್ಯದಲ್ಲಿ ವಿಶ್ವಾಸವನ್ನು ರೂಢಿಸಿಕೊಳ್ಳಿ. ನಿಮ್ಮ ವೈಯಕ್ತಿಕ ಜೀವನದಲ್ಲಿ ಎದುರಾಗುವಂತಹ ಕಷ್ಟಗಳಿಗೆ ಕುಟುಂಬಸ್ಥರ, ಹಿರಿಯರ ಸಹಕಾರ ಪಡೆಯುವುದು ಉತ್ತಮ. ವಾಗ್ದಾನ ನೀಡುವಾಗ ಎಚ್ಚರವಿರಲಿ. ಸ್ನೇಹದಲ್ಲಿ ಉತ್ತಮರನ್ನು ಆಯ್ದುಕೊಳ್ಳಿ ಕೆಲವರು ನಿಮ್ಮಂತೆ ಮಾತನಾಡಿ ಮೋಸಗೊಳಿಸುವ ಸಾಧ್ಯತೆ ಇದೆ. ಕೆಲಸದ ಜಾಗದಲ್ಲಿ ದಿಡೀರನೆ ಸಮಸ್ಯೆ ಉದ್ಭವ ಆಗಬಹುದು ಸಮಸ್ಯೆಗೆ ಪರಿಹಾರ ಹುಡುಕಿ ಒಳಿತಾಗುತ್ತದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಸುಮ್ಮನೆ ಕೆಲಸ ಮಾಡುವುದಲ್ಲ, ಬುದ್ಧಿವಂತಿಕೆ ಕೆಲಸ ಬಹು ಪ್ರಯೋಜನವಾಗುತ್ತದೆ ಎಂಬುದನ್ನು ನೆನಪಿಡಿ. ಇಂದು ಸಭೆ-ಸಮಾರಂಭಗಳಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಳ್ಳುವಿರಿ. ಆರ್ಥಿಕ ಸ್ಥಿತಿ ಸಂಜೆಯ ವೇಳೆಗೆ ಸರಿಹೋಗುತ್ತದೆ. ಅನಗತ್ಯ ಹಣ ಪೋಲು ಮಾಡುವುದು ಒಳ್ಳೆಯದಲ್ಲ, ಉಳಿತಾಯವೇ ಭವಿಷ್ಯದ ಬುನಾದಿ ಎಂಬುದನ್ನು ನೆನಪಿಡಿ. ಮನೆಯಲ್ಲಿ ಉಂಟಾಗುವ ಸಣ್ಣ ಸಮಸ್ಯೆಗಳನ್ನು ಅಲ್ಲಿಯೇ ಮರೆತುಬಿಡುವುದು ಒಳಿತು. ಇಂದು ಪ್ರೇಮಾಂಕುರವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತದೆ. ವ್ಯವಹಾರವನ್ನು ಒಪ್ಪಿಕೊಳ್ಳುವ ಮುಂಚೆ ಅದರ ಸೂಕ್ಷ್ಮವಾಗಿ ಆಳವನ್ನು ತಿಳಿದುಕೊಳ್ಳಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಕೆಲಸದ ಸ್ಥಳದಲ್ಲಿ ಕಷ್ಟದ ವಾತಾವರಣ ಇಂದು ಕಾಣಬಹುದು. ಸ್ಥಳ ಬದಲಾವಣೆಗೆ ಇದು ಸೂಕ್ತ ಸಮಯವಲ್ಲ. ನಿಮ್ಮ ಯೋಜಿತ ವ್ಯವಹಾರಗಳು ಆರ್ಥಿಕ ಮಟ್ಟವನ್ನು ಸುಧಾರಣೆ ಗೊಳಿಸುತ್ತದೆ. ಇಂದು ಪ್ರಕೃತಿ, ಕಲೆ, ಮನರಂಜನೆ, ಪ್ರೀತಿ, ಪ್ರೇಮ, ಪ್ರಣಯಗಳಲ್ಲಿ ಹೆಚ್ಚಿನ
ಆಸಕ್ತಿ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಿಂದ ದೂರ ಸರಿಯುವ ಚಿಂತನೆ ನಿಮ್ಮ ಮನದಲ್ಲಿ ಮೂಡುತ್ತದೆ. ನಿಮ್ಮ ಹಳೆಯ ಹೂಡಿಕೆಗಳು ಇಂದು ಲಾಭವಾಗಿ ನಿಮಗೆ ಸೇರುವುದು. ಕುಟುಂಬದಲ್ಲಿ ಶುಭಸುದ್ದಿ ವಾರ್ತೆಯನ್ನು ಕೇಳುತ್ತೀರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಮಕರ ರಾಶಿ
ಕುಟುಂಬದ ಕಾರ್ಯಕ್ರಮಗಳಲ್ಲಿ ಇಂದು ನೀವು ಪಾಲ್ಗೊಂಡು ಮುನ್ನಡೆಸುವ ಜವಾಬ್ದಾರಿ ತೆಗೆದುಕೊಳ್ಳುವಿರಿ. ನಿಮ್ಮ ಮನಸ್ಸಿನಲ್ಲಿ ಉದ್ಭವವಾಗಿರುವ ಕಾರ್ಯಗಳಿಂದ ಉತ್ತಮ ಆದಾಯ ನಿರೀಕ್ಷೆ ಪಡೆಯಬಹುದು. ನಿಮ್ಮಲ್ಲಿ ಉಂಟಾಗುತ್ತಿರುವ ಕಾಲ್ಪನಿಕ ಚಿತ್ರಣವನ್ನು ವಾಸ್ತವದತ್ತ ಕೊಂಡೊಯ್ಯುವುದು ಪ್ರಮುಖವಾದ ವಿಷಯವಾಗಿದೆ. ದೈವ ದೇಗುಲಗಳಿಗೆ ಭೇಟಿನೀಡುವ ಅವಕಾಶ ನಿಮ್ಮದಾಗಲಿದೆ. ಕುಟುಂಬದಲ್ಲಿ ಉದ್ಭವವಾಗುವ ವಾದವಿವಾದಗಳನ್ನು ಸುಖಾಂತ್ಯ ಗೊಳಿಸಲು ಪ್ರಯತ್ನಿಸಿ. ಕುಟುಂಬದ ಬೇಡಿಕೆಯನ್ನು ಪೂರೈಸಲು ಕಾರ್ಯಕ್ರಮವನ್ನು ರೂಪಿಸುವ ಸಾಧ್ಯತೆಯಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಕುಂಭ ರಾಶಿ
ಭೂಮಿಗೆ ಸಂಬಂಧಪಟ್ಟಂತಹ ಹೂಡಿಕೆಗಳು ಅತ್ಯುತ್ತಮ ಲಾಭ ತಂದುಕೊಡುತ್ತದೆ. ವ್ಯಾಪಾರಸ್ಥರಿಗೆ ಶುಭಫಲಗಳನ್ನು ಇಂದು ಕಾಣಬಹುದು. ನಿಮ್ಮ ಅಜಾಗರೂಕತೆಯಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ನಿಮ್ಮ ಮಾತಿನ ಶೈಲಿ ಹಾಗೂ ಕಾರ್ಯದ ಬದ್ಧತೆ ಹಲವು ಜನರನ್ನು ಆಕರ್ಷಿಸುತ್ತದೆ. ದಾಂಪತ್ಯದಲ್ಲಿ ಸಣ್ಣ ಮಾತು ದೊಡ್ಡ ಬಿರುಕಿಗೆ ಕಾರಣವಾಗಬಹುದು ಎಚ್ಚರವಿರಲಿ. ನಿಮ್ಮ ಬೆಳವಣಿಗೆಗೆ ಹಿತಶತ್ರುಗಳ ಕಾಡಾಟದಿಂದ ಕುಂಠಿತಗೊಳ್ಳುತ್ತಿದೆ, ಸರಿಯಾದ ವಿಚಾರಮಾಡಿ ನಿಮ್ಮ ಕೆಲಸವನ್ನು ಅಡೆತಡೆಯಿಲ್ಲದೆ ನೆರವೇರಿಸಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮೀನ ರಾಶಿ
ಅನಾಯಸವಾಗಿ ಕೊಟ್ಟಿರುವ ಕಾರ್ಯವನ್ನು ಪೂರ್ಣಗೊಳಿಸಿ ಬಿಡುವು ಮಾಡಿಕೊಳ್ಳುವುದು ಇಂದು ನಿಮ್ಮಲ್ಲಿ ಕಾಣಬಹುದು. ನಿಮ್ಮ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಆತ್ಮೀಯ ವರ್ಗದವರು ಹಣಕಾಸಿನ ಸಹಾಯ ಮಾಡುತ್ತಾರೆ. ಕುಟುಂಬದಲ್ಲಿ ಶುಭ ಕಾರ್ಯ ನೆರವೇರಲು ಚರ್ಚೆ ನಡೆಸುವ ಸಾಧ್ಯತೆ ಇದೆ. ಇಂದು ನಿಮಗೆ ಹಣಕಾಸಿನ ಸಾಲಕ್ಕಾಗಿ ನಿಮ್ಮ ಬಳಿ ಬರುವಂತಹವರನ್ನು ನಯವಾಗಿ ಸಾಗಹಾಕಿ, ಕೊಟ್ಟಿರುವ ಹಣ ವಾಪಸ್ಸು ಬರದೆ ಸಮಸ್ಯೆಗೆ ಸಿಲುಕದಿರಿ. ಪತ್ನಿಯ ಸೌಂದರ್ಯಕ್ಕೆ ಇಂದು ಮರುಳಾಗಿ ನಿಜ ಪ್ರೇಮದ ಅರಿವು ನಿಮಗೆ ಆಗಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
—-
ವಿದ್ಯೆ, ಉದ್ಯೋಗ, ವ್ಯಾಪಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ಆರೋಗ್ಯ, ಸಂತಾನ, ದಾಂಪತ್ಯ, ಇನ್ನು ಹಲವು ಗುಪ್ತ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ
9945098262
ಜ್ಯೋತಿಷ್ಯರು ಗಿರಿಧರ್ ಶರ್ಮ