ಜನಮನಪ್ರಮುಖ ಸುದ್ದಿ
ಕನ್ನಡ ಬಲು ಕಷ್ಟವೆಂದ ನಟಿ ರಶ್ಮಿಕಾ ಮಂದಣ್ಣಗೆ ಬ್ಯಾನ್ ಭೀತಿ!
ಬೆಂಗಳೂರು : ಕನ್ನಡ ಕಷ್ಟವೆಂದು ಹೇಳಿದ ನಟಿ ರಶ್ಮಿಕಾ ಮಂದಣ್ಣ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನನಗೆ ಕನ್ನಡ ಸರಿಯಾಗಿ ಮಾತಾಡಲು ಬರೋದಿಲ್ಲ, ಅಲ್ಲದೇ ಕನ್ನಡ ಮಾತು ಬಲು ಕಷ್ಟ ಎಂದಿರುವ ನಟಿ ರಶ್ಮಿಕಾ ಮಂದಣ್ಣರನ್ನು ಕನ್ನಡ ಚಲನಚಿತ್ರ ರಂಗದಿಂದ ಬಹಿಷ್ಕರಿಸುವಂತೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ರಶ್ಮಿಕಾ ಪರ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಖ್ಯಾತಿಗಳಿಸಿದ್ದಾರೆ. ಆದರೆ, ಖ್ಯಾತಿ ಅಮಲಿನಲ್ಲಿ ಕನ್ನಡವನ್ನೇ ಕಡೆಗಣಿಸಿ ಮಾತಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಶ್ಮಿಕಾ ಮಂದಣ್ಣ ಅವರ ಚಿತ್ರಗಳನ್ನು ಬ್ಯಾನ್ ಮಾಡಿ ಚಿತ್ರರಂಗದಿಂದ ಬಹಿಷ್ಕರಿಸುವಂತೆ ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದಾರೆ.