ಮತ್ತೆ ಹೆಚ್ವಾಯಿತು ಕೃಷ್ಣಾರ್ಭಟಃ 2.37 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
ಮತ್ತೆ ಕೃಷ್ಣಾ ಪ್ರವಾಹಃ ಸೇತುವೆ ಮುಳುಗುವ ಭೀತಿ, 2.37 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
ಯಾದಗಿರಿಃ ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ರವಿವಾರ ಆ.16 ಸಂಜೆ 7 ಗಂಟೆ ಸುಮಾರಿಗೆ 2.37 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಬೆಳಗಿನಜಾವದವರೆಗೆ ಶಹಾಪುರ ತಾಲೂಕಿನ ಕೊಳ್ಳೂರ (ಎಂ) ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕೊಳ್ಳೂರ(ಎಂ) ಸೇತುವೆ ಮೇಲೆ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗುತಿದ್ದು, ನದಿ ಪಾತ್ರದ ಜನತೆ ಎಚ್ಚರಿಕೆವಹಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಮಹಾರಾಷ್ಟ್ರದಲ್ಲಿ ಸತತ ಮಳೆಯಾಗಿದ್ದರಿಂದ ಕೊಯ್ನಾ ಡ್ಯಾಂ ತುಂಬಿದ್ದು, ಅಲ್ಲದೆ ಡ್ಯಾಂ ಪ್ರದೇಶದಲ್ಲಿ ನಿನ್ನೆ ಲಘು ಭೂಕಂಪ ಬೇರೆ ಸಂಭವಿಸಿದ್ದರಿಂದ ಹೆಚ್ವುವರಿ ನೀರನ್ನು ಬಸವಸಾಗರ ಜಲಾಶಯಕ್ಕೆ ಹರಿದು ಬರಲಿದೆ. ಸ್ಥಳೀಯ ಕೃಷ್ಣಾ ನದಿಪಾತ್ರದಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆವಹಿಸಬೇಕು.
ಬಸವಸಾಗರ ಜಲಾಶಯಕ್ಕೆ ಹರಿದು ಬಂದ ನೀರು ಅಪಾಯದ ಮಟ್ಟ ತಲುಪುವ ಹಿನ್ನೆಲೆ ಕೃಷ್ಣಾ ನದಿಗೆ ಹರಿಬಿಡಲಾಗುತ್ತದೆ. ನದಿ ಪಾತ್ರದಡಿಗೆ ಜನ ಜಾನುವಾರುಗಳು ತೆರಳದಂತೆ ಎಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ ಜಗನ್ನಾಥರಡ್ಡಿ ಮನವಿ ಮಾಡಿದ್ದಾರೆ.