ಪ್ರಮುಖ ಸುದ್ದಿ
ಪತ್ರಕರ್ತ ರವೀಶಕುಮಾರ್ಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಯ ಗರಿ!
ದೆಹಲಿ: ಖ್ಯಾತ ಪತ್ರಕರ್ತ ರವೀಶ್ ಕುಮಾರ್ 2019ನೇ ಸಾಲಿನ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಧ್ವನಿ ಇಲ್ಲದವರ ಪಾಲಿನ ಧ್ವನಿಯಾಗುವ ಮಾಧ್ಯಮವನ್ನು ಸಾಧನವಾಗಿ ಬಳಸಿಕೊಂಡ ಕಾರಣಕ್ಕೆ ಪ್ರಶಸ್ತಿ ನೀಡಲಾಗಿದೆ ಎಂದು ಮ್ಯಾಗ್ಸೆಸೆ ಫೌಂಡೇಶನ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
NDTVಯಲ್ಲಿ ರವೀಶ್ ಕುಮಾರ್ ನಡೆಸಿ ಕೊಡುವ ಸುದ್ದಿ “ಪ್ರೈಮ್ ಟೈಮ್” ಕಾರ್ಯಕ್ರಮವನ್ನು ಉಲ್ಲೇಖಿಸಿರುವ ಮ್ಯಾಗ್ಸೆಸೆ ಫೌಂಡೇಶನ್ ಈ ಕಾರ್ಯಕ್ರಮ ನಿಜ ಜೀವನದ ಬಗ್ಗೆ, ಸಾಮಾನ್ಯ ಜನರ ಸಮಸ್ಯೆ ಕುರಿತು ಮಾತನಾಡುತ್ತದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ. “ನೀವು ಜನರ ಧ್ವನಿಯಾಗಿದ್ದೀರಿ ಎಂದರೆ ನೀವೊಬ್ಬ ಪತ್ರಕರ್ತರಾಗಿದ್ದೀರಿ” ಎಂದು ಪ್ರಶಸ್ತಿ ಸಮಿತಿ ತಿಳಿಸಿದೆ.