ಪ್ರಮುಖ ಸುದ್ದಿ
ಕನ್ನಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತು ಕೇಳಿದಿರಾ!
ನವದೆಹಲಿ : ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ದೇಶವಾಸಿಗಳನ್ನುದ್ದೇಶಿಸಿ ಸುದೀರ್ಘ ಭಾಷಣವನ್ನು ಮಾಡಿದ್ದರು. ಆ ಭಾಷಣದ ಕನ್ನಡ ಅನುವಾದವನ್ನು ಟ್ವೀಟರ್ ನಲ್ಲಿ ಪ್ರಧಾನಿ ಶೇರ್ ಮಾಡಿದ್ದಾರೆ. ನನ್ನ ಸಹ -ಭಾರತೀಯರನ್ನು ಉದ್ದೇಶಿಸಿ ಮಾತನಾಡಲು ಗೌರವ ಎನ್ನಿಸುತ್ತದೆ ಎಂದಿರುವ ಪ್ರಧಾನಿ ಮೋದಿ ಅಂದಿನ ಭಾಷಣವನ್ನು ಕನ್ನಡದಲ್ಲಿ ಹಂಚಿಕೊಳ್ಳುತ್ತಿದ್ದೇನೆಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಭಾಷಣದ ಕನ್ನಡ ಅನುವಾದವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದು ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ಸಾವಿರಾರು ಕನ್ನಡಿಗರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಮತ್ತು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಐತಿಹಾಸಿಕ ಕೆಂಪುಕೋಟೆಯಿಂದ ನನ್ನ ಸಹ-ಭಾರತೀಯರನ್ನುದ್ದೇಶಿಸಿ ಮಾತನಾಡಲು ಗೌರವವೆನಿಸುತ್ತದೆ. ನನ್ನ ಭಾಷಣವನ್ನು ಕನ್ನಡದಲ್ಲಿ ಹಂಚಿಕೊಳ್ಳುತ್ತಿದ್ದೇನೆ. https://t.co/ouMwl4GH1C
— Narendra Modi (@narendramodi) August 16, 2019