ಪ್ರಮುಖ ಸುದ್ದಿ
ತುಂಗಾಭದ್ರೆ ಆರ್ಭಟಃ ಹೊಲಗದ್ದೆಗಳು ಜಲಾವೃತ
ಆರ್ಭಟಿಸುತ್ತಿರುವ ತುಂಗೆ ಜಲಾವೃತವಾದ ಹೊಲಗದ್ದೆ
ರಾಯಚೂರಃ ತುಂಗಾಭದ್ರಾ ಜಲಾಶಯ ಭರ್ತಿಯಾಗಿದ್ದು, ಹೆಚ್ವುವರಿ ನೀರನ್ನು ನದಿಗೆ ಬಿಟ್ಟ ಪರಿಣಾಮ ಜೆಲ್ಲೆಯ ನದಿ ಪಾತ್ರ ಪ್ರದೇಶದ ಹೊಲ ಗದ್ದೆಗಳು ಜಲಾವೃತಗೊಂಡಿವೆ.
ನದಿ ದಡದಿ ಜಮೀನಲ್ಲಿ ಹಾಕಲಾದ ಅಪಾರ ಪ್ರಮಾಣದ ಬೆಳೆ ಹಾಳಾಗಿದೆ. ಹೀಗಾಗಿ ರೈತರು ಮತ್ತೆ ಸಂಕಷ್ಟದಲ್ಲಿ ಸಿಲುಕುವಂತಾಗಿದೆ.
ಜಿಲ್ಲೆಯ ಮಾನ್ವಿ ತಾಲೂಕಿನ ನದಿ ದಡದಲ್ಲಿರುವ ಹಲವಾರು ಗ್ರಾಮಗಳ ಜಮೀನಗಳಿಗೆ ನೀರು ನುಗ್ಗಿರುವ ಕಾರಣ ಬಿತ್ತನೆ ಮಾಡಿದ್ದ ಹತ್ತಿ, ಭತ್ತದ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ.
ಅಲ್ಲದೆ ವಿದ್ಯುತ್ ಪರಿವರ್ತಕ ಹಾಗೂ ಪಂಪ್ಸೆಟ್ಗಳು, ವಿದ್ಯುತ್ ಕಂಬಗಳು ಮುಳಗಿದ್ದು, ಅಲ್ಲದೇ ಚಿಕಲಪರ್ವಿ ಗ್ರಾಮದ ಬಳಿ ಬರುವ ಐತಿಹಾಸಿಕ ವಿಜಯದಾಸರ ಕಟ್ಟೆಗೆ ನೀರು ನುಗ್ಗಿದೆ.
ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಲ್ಲಿ ನದಿಪಾತ್ರ ಗ್ರಾಮಗಳು ನೀರಲ್ಲಿ ಮುಳುಗುವ ಭೀತಿ ಎದುರಿಸುವಂತಾಗಿದೆ.
ಹೀಗಾಗಿ ಜಿಲ್ಲಾಡಳಿತ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದೆ. ಪ್ರವಾಹ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.