ಪ್ರಮುಖ ಸುದ್ದಿವಿನಯ ವಿಶೇಷ

ಕೆಂಪು ಆಲೋವೇರಾ ನೋಡಿದಿರಾ.? ಆರೋಗ್ಯಕ್ಕೆ ಅದೆಷ್ಟು ಉತ್ತಮ ಗೊತ್ತಾ.?

ಕೆಂಪು ಆಲೋವೇರಾ ನೋಡಿದಿರಾ..?

ಡಾ.ಆನಂದಕುಮಾರ ಕರಕಳ್ಳಿ

ವಿವಿ ಡೆಸ್ಕ್ಃ ಆಲೋವೆರಾ ಅಥವಾ ಲೋಳೆಸರ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಅದು ಹಚ್ಚ ಹಸಿರಾಗಿ ಬೆಳೆಯಲಿದೆ ಎಂಬುದು ತಿಳಿದಿದ್ದೀರಿ. ಸಾಕಷ್ಟು ಜನರು ಅದನ್ನು ಟೆರೇಸ್ ಮೇಲೆ, ಕುಂಡದಲ್ಲಿ ಮನೆ ಹಿಂದಿನ ಕೈತೋಟ ಮನೆ ಮುಂದೆ ಕಂಪೌಂಡನೊಳಗೂ ಬೆಳೆದಿರುವದು ನಗರಗಳಲ್ಲಿ ನೋಡಿದ್ದೀರಿ.

ಆದರೆ ನೀವು ಕೆಂಪು ಆಲೋವೇರಾ ಎಲ್ಲಿಯಾದರೂ ನೋಡಿದ್ದೀರಾ. ಹೌದು ಕೆಂಪು ಆಲೋವೇರಾ ಅಥವಾ ಕೆಂಪು ಲೋಳೆಸರ ಒಂದು ಅದ್ಭುತ ಗಿಡ ಮೂಲಿಕೆಯಾಗಿದೆ. ಅದು ಹಲವಾರು ಕಾಯಿಲೆಗಳಿಗೆ ದಿವ್ಯ ಔಷಧಿಯಾಗಿದೆ. ಅಲ್ಲದೆ ಅತ್ಯುತ್ತಮ ಸೌಂದರ್ಯ ವರ್ಧಕವೂ ಅದಾಗಿದ್ದು ತ್ವಚೆ ಮತ್ತು ಕೂದಲಿಗೆ ಇದು ಉತ್ತಮ ಔಷಧಿಯಾಗಿ ಬಳಸಬಹುದಾಗಿದೆ.

ಜೀರ್ಣಾಂಗಗಳಿಗೂ ಉತ್ತಮವಾಗಿದೆ. ಕೆಂಪು ಅಲೋವೆರಾ ಬಹಳಷ್ಟು ಅಪರೂಪವಾಗಿದ್ದು ಇದರಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಮಲಬದ್ಧತೆಗೂ ಇದರಿಂದ ಉತ್ತಮ ಚಿಕಿತ್ಸೆ ಪಡೆಯಬಹುದು. ಒಟ್ಟಾರೆ  ಅಲೋವೆರಾ ಅದರ ಔಷಧೀಯ ಗುಣಗಳಿಗೆ ಬಹು ಜನಪ್ರಿಯವಾದ ಸಸ್ಯವಾಗಿದೆ. ನಾಗರಿಕರು ಇದರ ಸದುಪಯೋಗ ಪಡೆಯಬಹುದು.

ಇನ್ನೂ ಸಾಕಷ್ಟು ಗುಣಗಳು ಇದರಲ್ಲಿವೆ..ಓದಿ
ವಿಟಮಿನ್ ಸಿ ಒದಗಿಸುತ್ತಿದೆ. ಹೈಡ್ರೀಕರಿಸುವುದನ್ನು ತಡೆಯುತ್ತದೆ. ಗಮ್ ಉರಿಯೂತವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸುವುದು.  ಹೊಟ್ಟೆಯ ಹುಣ್ಣನ್ನು ತಡೆಯುವುದು ಸೇರಿದಂತೆ ರೋಗ ನಿರೋಧಕ ಶಕ್ತಿ ಉತ್ಪತ್ತಿ ಮಾಡುವ ಗುಣ ಕೆಂಪು ಆಲೋವೇರಾದಲ್ಲಿದೆ.

Related Articles

Leave a Reply

Your email address will not be published. Required fields are marked *

Back to top button