ನಾಳೆ ಚಂದ್ರಗ್ರಹಣ : ಸುಂದರ ಕೆಂಪು ಚಂದಿರ ಎಲ್ಲೆಲ್ಲಿ ಕಾಣಿಸ್ತಾನೆ ಗೊತ್ತಾ?
ನಾಳೆ ಜುಲೈ 27ರಂದು ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಗೋಚರಿಸಲಿದೆ. ಈ ರೀತಿಯ ಚಂದ್ರಗ್ರಹಣ ಮತ್ತೆ ವೀಕ್ಷಿಸಲು ಬರೋಬ್ಬರಿ ಒಂದು ದಶಕಗಳ ಕಾಲ ಕಾಯಬೇಕಾಗುತ್ತದೆ. ಡಿಸೆಂಬರ್ 31, 2028ರಲ್ಲಿ ಮತ್ತೆ ಸುದೀರ್ಘ ಚಂದ್ರಗ್ರಹಣ ಗೋಚರಿಸಲಿದೆ ಎಂದ ತಿಳಿದು ಬಂದಿದೆ. ಇನ್ನು ಇದೇ
ಜುಲೈ 27ರ ರಾತ್ರಿ 1. 15ರಿಂದ ಬೆಳಗ್ಗೆ 2.43ರವರೆಗೆ ಭಾರತದಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಗ್ರಹಣ ಸಮಯದಲ್ಲಿ ಚಂದ್ರ ಪೂರ್ಣ ಕೆಂಪು ವರ್ಣದಲ್ಲಿ ಕಂಗೊಳಿಸಲಿದ್ದಾನೆ. ಸೂರ್ಯ ಮತ್ತು ಮಂಗಳ ಗ್ರಹಗಳು ಭೂಮಿಯ ವಿರುದ್ಧ ಧಿಕ್ಕಿನಲ್ಲಿ ಕಾಣಿಸಿಕೊಳ್ಳುವ ಅಪರೂಪದ ಕ್ಷಣಕ್ಕೆ ಶುಕ್ರವಾರ ನಡೆಯಲಿರುವ ಖಗ್ರಸ ಚಂದ್ರಗ್ರಹಣ ಸಾಕ್ಷಿಯಾಗಲಿದೆ.
ಇನ್ನು ಭಾರತದ ದೆಹಲಿ, ಪುಣೆ, ಬೆಂಗಳೂರು, ಮುಂಬಯಿ ನಗರಗಳಲ್ಲಿ ಚಂದ್ರಗ್ರಹಣ ಕಂಡು ಬರಲಿದೆ. ಆದರೆ, ವಾಯುಮಾಲಿನ್ಯ ಹೆಚ್ಚಿರುವ ಪ್ರದೇಶದಲ್ಲಿ ಹಾಗೂ, ಹೆಚ್ಚಿನ ಮೋಡವಿರವ ಕಡೆಗಳಲ್ಲಿ ಚಂದ್ರಗ್ರಹಣ ಸ್ಪಷ್ಟವಾಗಿ ಕಾಣಿಸುವುದಿಲ್ಲ ಎಂದು ತಿಳಿದು ಬಂದಿದೆ. ಬರಿಗಣ್ಣಿನಿಂದಲೂ ಚಂದ್ರಗ್ರಹಣ ವೀಕ್ಷಿಸಬಹುದಾಗಿದೆ ಎಂದು ತಗ್ನರು ತಿಳಿಸಿದ್ದಾರೆ.