ಪ್ರಮುಖ ಸುದ್ದಿ

ನಿವೃತ್ತ ಸಂಘಕ್ಕೆ ನಿವೇಶನ- ದರ್ಶನಾಪುರ ಭರವಸೆ

ಹಿರಿಯರ ಅನುಭಾವಾಮೃತ ಯುವ ಸಮುದಾಯಕ್ಕೆ ಅಗತ್ಯಃ ಮುದ್ನಾಳ

ಯಾದಗಿರಿಃ ನಿವೃತ್ತ ಜೀವನ ನಡೆಸುತ್ತಿರುವ ನೌಕರರ ಸಂಘದ ಹಿರಿಯ ಜೀವಿಗಳು ಯುವ ಸಮುದಾಯಕ್ಕೆ ಮಾರ್ಗದರ್ಶನ ನೀಡಬೇಕು. ನೀವು ಕರ್ತವ್ಯ ನಿರ್ವಹಿಸಿದ್ದ ಇಲಾಖೆ ಬಗ್ಗೆ ಸಮರ್ಪಕ ಮಾಹಿತಿ ನೀಡುವ ಮೂಲಕ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ ಹೇಳಿದರು.

ಜಿಲ್ಲೆಯ ಶಹಾಪುರ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಸರ್ಕಾರಿ ನೌಕರರ ನಿವೃತ್ತ ನೌಕರರ ಸಂಘ ಆಯೋಜಿಸಿದ್ದ ಶಹಾಪುರ ಮತ್ತು ಯಾದಗಿರಿ ಶಾಸಕರಿಗೆ ಸನ್ಮಾನ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಹಿರಿಯರ ಮೇಲೆ ಅಗಾಧ ನಂಬಿಕೆ ಗೌರವವಿದೆ. ಯುವ ಸಮುದಾಯಕ್ಕೆ ಹಿರಿಯರ ಅನುಭವ ಅಮೃತ ಸಿಂಚನ ಅಗತ್ಯವಿದೆ. ನಿವೃತ್ತ ಹೊಂದಿದ್ದರು, ಸಂಘ ರಚನೆ ಮಾಡಿಕೊಂಡು ತಮ್ಮ ಸಮಸ್ಯೆಗಳ ಪರಿಹಾರಕ್ಕೊಂದು ಸೂಕ್ತ ವೇದಿಕೆ ನಿರ್ಮಿಸಿಕೊಂಡ ಹಿರಿಯರು ತಮ್ಮ ಜವಬ್ದಾರಿಯನ್ನು ಇನ್ನೂ ನಿಭಾಯಿಸುತ್ತಿದ್ದಾರೆ.

ಸಂಸಾರದ ಜಂಜಾಟದಿಂದ ಹೊರ ಬಂದಿದ್ದರೂ, ಮನೆಯಲ್ಲಿ ಮಕ್ಕಳ ಹೆಗಲಿಗೆ ಜವಬ್ದಾರಿ ಹೊರಿಸಿದ್ದರು, ಕುಳಿತಲ್ಲಿಂದಲೇ ಮಾರ್ಗಸೂಚಿಯನ್ನು ಅನುಸರಿಸಲು ತಿಳಿಸಿದಂತೆ, ಸಮಾಜದ ಅಭಿವೃದ್ಧಿಗೂ ಸಾಮಾಜಿಕ ಕಾರ್ಯ ಚಟುವಟಿಕೆಗೂ ತಮ್ಮ ಸಲಹೆ ಅಗತ್ಯತ್ತೆ ಎಂದು ಬಂದವರಿಗೆ ಸಲಹೆ ಸೂಚನೆ ನೀಡಬೇಕು ಎಂದರು.

ಸ್ಥಳೀಯ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಿರಿಯರಿಂದ ಸ್ವೀಕರಿಸಿರುವುದು ಸನ್ಮಾನವಲ್ಲ ಆಶೀರ್ವಾದ ಎಂದು ಭಾವಿಸುತ್ತೇನೆ. ನಿಮ್ಮ ಬೇಡಿಕೆಗೆ ಅನುಗುಣವಾಗ ನಗರದಲ್ಲಿ ನಿವೃತ್ತ ನೌಕರರ ಸಂಘಕ್ಕೆ ನಿವೇಶನ ಒದಗಿಸುವ ಭರವಸೆ ನೀಡುತ್ತೇನೆ. ಹಿರಿಯರಾದ ತಾವುಗಳು ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ದುಡಿದಿದ್ದೀರಾ, ಪ್ರಸ್ತುತ ವಿಶ್ರಾಂತ ಜೀವನ ಅಗತ್ಯವೆಂದು ಸರ್ಕಾರ ನಿಮ್ಮಿಂದ ವಯೋ ನಿವೃತ್ತಿ ಪಡೆದಿರುತ್ತದೆ.

ಆದಾಗ್ಯು ನೀವುಗಳು ನಿಮ್ಮ ಸಮಸ್ಯೆ ಮತ್ತು ಇತರೆ ಸಮಸ್ಯಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಸಂಘ ರಚಿಸಿಕೊಂಡಿರುವುದು, ಪರಸ್ಪರರ ಸಹಕಾರಕ್ಕೆ ಅನುಕೂಲ. ನಿಮ್ಮ ಸಮಸ್ಯೆ ಬೇಡಿಕೆ ಇತ್ಯರ್ಥ ಪಡಿಸುವ ಕರ್ತವ್ಯ ನನ್ನದು. ವಿಶ್ರಾಂತ ಜೀವನವನ್ನು ಸಂತೋಷದಿಂದ ಕಳೆಯಬೇಕು ಎಂದು ಹಾರೈಸಿದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಬಸವರಾಜ ಹೂಗಾರ ಬಸವಂತಪುರ ಮಾತನಾಡಿ, ಶಾಸಕರದ್ವಯರಿಗೂ ನಮ್ಮ ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ ಪತ್ರ ಸಲ್ಲಿಸಲಾಗಿದೆ. ಅದರನ್ವಯ ಈಗಾಗಲೇ ದರ್ಶನಾಪುರ ಅವರು ಸಂಘದ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ನಗರದಲ್ಲಿ ನಿವೇಶನ ಸೌಲಭ್ಯ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿರುವದು ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹಾದೇವಪ್ಪ, ಕಾರ್ಯದರ್ಶಿ ಮರಿರಾಜ, ಖಜಾಂಚಿ ಗುರುಲಿಂಗಪ್ಪ ಉಪಸ್ಥಿತರಿದ್ದರು. ಶೇಖರಪ್ಪ ಸಗರ, ಎಸ್.ಬಿ.ಪಾಟೀಲ್, ಲಕ್ಷ್ಮೀಕಾಂತ ಪದಕಿ, ಸಿದ್ದಯ ಸ್ವಾಮಿ, ಅಮರಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button